ವೃಕ್ಷಥಾನ್ ಹೆರಿಟೇಜ್ ರನ್ಗಾಗಿ ಉಚಿತ ಓಟದ ತರಬೇತಿ
Free running training for the Vrukshathan Heritage Run
ವಿಜಯಪುರ, ಸೆ.1: ಖ್ಯಾತ ಯೋಗ ತರಬೇತುದಾರ, ಮ್ಯಾರಾಥಾನ್ ಓಟಗಾರ ಹಾಗೂ ಅಲ್ಟ್ರ ರನ್ನರ್ ರೇಣುಕಾ ಪ್ರಸಾದ ಅವರು ಸೆಪ್ಟೆಂಬರ್ ಮೊದಲ ವಾರದಿಂದ ಡಿಸೆಂಬರ್ ಮೊದಲ ವಾರದವರೆಗೆ ಪ್ರತಿ ಶನಿವಾರ ಹಾಗೂ ಭಾನುವಾರ ನಗರದಲ್ಲಿ ಉಚಿತ ಓಟದ ತರಬೇತಿ ನೀಡಲಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಹೊಸ ಕ್ಯಾಂಪಸ್ನಲ್ಲಿರುವ ಎ.ಎಸ್.ಪಿ. ಕಾಮರ್ಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6 ಗಂಟೆಗೆ ತರಬೇತಿ ನಡೆಯಲಿದೆ. ವೃಕ್ಷಥಾನ್ ಹೆರಿಟೇಜ್ ನಡೆಯಲಿರುವ 10 ಕಿ.ಮೀ. ಹಾಗೂ 21 ಕಿ.ಮೀ. ಓಟಗಳಲ್ಲಿ ಪಾಲ್ಗೊಳ್ಳುವವರು ಈ ತರಬೇತಿಯ ಪ್ರಯೋಜನ ಪಡೆಯಬಹುದಾಗಿದೆ.
ರೇಣುಕಾ ಪ್ರಸಾದ ಅವರು ದೇಶದಾದ್ಯಂತ ನಡೆದ ಹಲವು ಪ್ರತಿಷ್ಠಿತ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಬೆಂಗಳೂರು ಮ್ಯಾರಥಾನ್ ಹಾಗೂ ಮುಂಬೈ ಮ್ಯಾರಥಾನ್ ಸೇರಿದಂತೆ ಹಲವು ಪ್ರಮುಖ ಮ್ಯಾರಥಾನ್ಗಳಲ್ಲಿ ಅಧಿಕೃತ ಪೇಸರ್ ಆಗಿ ಸೇವೆ ಸಲ್ಲಿಸಿದ್ದಾರೆ. 18ಕ್ಕೂ ಹೆಚ್ಚು ವರ್ಷಗಳ ಓಟದ ಅನುಭವ ಹೊಂದಿರುವ ಅವರು, ಓಟಗಾರರಿಗೆ ಸರಿಯಾದ ವೇಗ, ತರಬೇತಿ ವಿಧಾನ ಹಾಗೂ ಓಟದ ತಂತ್ರಗಳನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡುತ್ತಿದ್ದಾರೆ.
ಕಳೆದ 20 ವರ್ಷಗಳಿಂದ ಸಾಫ್ಟ್ವೇರ್ ಎಂಜಿನಿಯರ್ ಆಗಿಯೂ ಕಾರ್ಯನಿರ್ವಹಿಸುತ್ತಿರುವ ರೇಣುಕಾ ಪ್ರಸಾದ ಅವರು, “ಓಟವೆಂದರೆ ನಿರಂತರತೆ, ಶಿಸ್ತು, ದೈಹಿಕ ಸಾಮರ್ಥ್ಯ ಮತ್ತು ಸಂತೋಷದಿಂದ ಸಾಗುವ ಪಯಣ. ಓಡಲು ಸಾಧ್ಯವಾದಾಗ ಓಡಿ, ಸಾಧ್ಯವಾಗದಿದ್ದರೆ ನಡೆಯಿರಿ; ಅಗತ್ಯವಿದ್ದರೆ ತೆವಳಿಯಾದರೂ ಸರಿ, ಆದರೆ ಎಂದಿಗೂ ಕೈಬಿಡಬೇಡಿ” ಎಂಬ ಸಂದೇಶ ನೀಡಿದ್ದಾರೆ.
ಕ್ರಮಬದ್ಧವಾಗಿ ಹಾಗೂ ಹಂತ ಹಂತವಾಗಿ ತರಬೇತಿಯ ಪ್ರಮಾಣವನ್ನು ಹೆಚ್ಚಿಸುವುದರಿಂದ ಓಟದ ಸಾಮರ್ಥ್ಯ ವೃದ್ಧಿಯಾಗುವುದರ ಜೊತೆಗೆ ಗಾಯಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದರಿಂದ ಓಟದ ಪಯಣ ಮತ್ತಷ್ಟು ಸಂತೋಷದಾಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 