ಅಂಬೇಡ್ಕರ್ ಜಯಂತ್ಯೋತ್ಸವ ಪ್ರಯುಕ್ತ ಉಚಿತ ಸಾಮೂಹಿಕ ಮದುವೆ ಹಾಗೂ ವಿವಿಧ ಕಾರ್ಯಕ್ರಮ
Free mass weddings and various programs on the occasion of Ambedkar Jayanti
ಕೊಪ್ಪಳ 24: ತಾಲೂಕಿನ ಹಿರೇ ಬಗನಾಳ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಅವರ ನೂತನ ಕಂಚಿನ ಮೂರ್ತಿ ಅನಾವರಣ ಹಾಗೂ 135ನೇ ಜಯಂತೋತ್ಸವ ಆಚರಣೆಯ ಜೊತೆಗೆ 11 ಜೋಡಿ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ದಿ27. ಏಪ್ರಿಲ್ 2026 ರಂದು 11:30 ಗಂಟೆಗೆ. ತಾಲೂಕಿನ ಹಿರೇ ಬಗನಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಘಟಕ ದಲಿತ ನಾಯಕ ಗಣೇಶ್ ಹೊರತಟ್ನಾಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮಗಳ ವಿವರಣೆ ನೀಡಿದ ಅವರು ಉಚಿತ ಮದುವೆ, ಡಾ. ಬಿ. ಆರ್. ಅಂಬೇಡ್ಕರ್ ಅವರ ಕಂಚಿನ ಮೂರ್ತಿ ಅನಾವರಣ ಜೊತೆಗೆ ಪ್ರೊ. ಲಿಂಗಣ್ಣ ಜಂಗಮರಳ್ಳಿ ಅವರಿಂದ ವಿಶೇಷ ಉಪನ್ಯಾಸ ಹಾಗೂ ಜಾನಪದ ಕಲಾವಿದರಾದ ಜೀವನ ಸಾಬ, ಬಿನ್ನಾಳ ಕಲಾ ತಂಡದವರಿಂದ ಜಾನಪದ ಗೀತೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಜನ ಪ್ರತಿನಿಧಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್. ಸಂಸದ ರಾಜಶೇಖರ ಹಿಟ್ನಾಳ್. ಎಂ. ಎಲ್. ಸಿ. ಹೇಮಲತಾ ನಾಯಕ. ಜೆಡಿಎಸ್ ಮುಖಂಡ ಸಿ. ವಿ .ಚಂದ್ರಶೇಖರ. ಡಾ. ಬಸವರಾಜ್ ಕ್ಯಾವಟರ್. ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಸೇರಿದಂತೆ ಅಧಿಕಾರಿಗಳು, ವಿಶೇಷ ಅತಿಥಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಎಂದು ಯುವ ಮುಖಂಡ ಮಲ್ಲಿಕಾರ್ಜುನ್ ಪೂಜಾರ ತಿಳಿಸಿದರು. ಕಾರ್ಯಕ್ರಮದ ಪ್ರಮುಖ ಆಯೋಜಕರಾದ ರವಿ, ದೇವರಮನಿ, ಅವರು ಮಾತನಾಡಿ 5 ರಿಂದ 6. ಸಾವಿರ ಜನರು ಕಾರ್ಯಕ್ರಮಕ್ಕೆ ಭಾಗವಹಿಸುವ ನೀರೀಕ್ಷೆ ಇದೆ. ಮದುವೆಯ ವಧು ವರಗಳಿಗೆ ಬಟ್ಟೆ, ತಾಳಿ, ಕಾಲು ಉಂಗುರ ಸೇರಿದಂತೆ ಸಕಲ ವ್ಯವಸ್ಥೆಯನ್ನು ನಮ್ಮ ಸಂಘಟನೆಯನ್ನು ಮಾಡಲಾಗಿದೆ. ಸಾಮೂಹಿಕ ಮದುವೆಗಾಗಿ ಆಗಮಿಸುವ ಎಲ್ಲಾ ಬಂದು ಭಗಿನಿ ಯರಿಗೆ ಊಟದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ, ಗಣೇಶ್ ಹೋರತಟ್ನಾಳ, ಮಲ್ಲಿಕಾರ್ಜುನ್ ಪೂಜಾರ, ರವಿ ದೇವರಮನಿ, ಯುವರಾಜ್ ಹೊಸಮನಿ, ಫಕೀರ್ಪ ದೊಡ್ಡಮನಿ, ಶಿವಣ್ಣ ತಾಳ ಕನಕಪುರ, ಇತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 