ಪತ್ರಿಕಾ ವಿತರಕರಿಗೆ ಉಚಿತವಾಗಿ ಜಾಕೆಟ್ ವಿತರಣೆ
Free jacket distribution to newspaper distributors
ಜಮಖಂಡಿ 12: ಪ್ರತಿನಿತ್ಯವೂ ನಸುಕಿನ ಜಾವದಲ್ಲಿ ಪತ್ರಿಕೆಗಳನ್ನು ವಿತರಣೆ ಮಾಡುವರು ತಮ್ಮ ಜೀವದ ಹಂಗು ತೊರೆದು ಗಾಳಿ, ಮಳೆ, ಬಿಸಿಲು ಲೆಕ್ಕಿಸದೆ ಪತ್ರಿಕೆಗಳನ್ನು ವಿತರಣೆ ಮಾಡುವ ವಿತರಕರಿಗೆ ದಲಿತ ಸೇನೆ ಕರ್ನಾಟಕ ಸಂಘಟನೆಯು ಉಚಿತವಾಗಿ ಜಾಕೆಟ್‌ಗಳನ್ನು ನೀಡುವ ಮೂಲಕ ಸಮಾಜಮುಖಿ ಸೇವೆಯನ್ನು ಮಾಡುವದು ಶ್ಲಾಘನೀಯ ಎಂದು ಕರ್ನಾಟಕ ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಕಾಂತ ತೇರದಾಳ ಹೇಳಿದರು.
ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ನಡೆದ ಕರ್ನಾಟಕ ಪ್ರೇಸ್ ಕ್ಲಬ್ ಸಂಘಟನೆಯ ಸಹಯೋಗದಲ್ಲಿ ದಲಿತ ಸೇನೆ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಭೀಮರಾವ ಮೀಶಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರೆ್ಣ ಮಾಡಿದ ಬಳಿಕ ಪತ್ರಿಕಾ ವಿತರಕರಿಗೆ ಉಚಿತವಾಗಿ ಜಾಕೇಟ್‌ಗಳನ್ನು ವಿತರಣೆ ಮಾಡುವ ಮೂಲಕ ಮಾತನಾಡಿದರು.
ದಲಿತ ಸೇನೆ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಭೀಮು ಮೀಶಿ ಅವರು ಬಹಳ ಮಹತ್ವದ ಕೆಲಸವನ್ನು ಮಾಡಿದ್ದಾರೆ. ಪ್ರತಿನಿತ್ಯವೂ ಪತ್ರಿಕೆಗಳನ್ನು ನಸುಕಿನ ಜಾವದಲ್ಲಿ ಪತ್ರಿಕೆಗಳನ್ನು ಮನೆ, ಮನೆಗಳಿಗೆ, ವ್ಯಾಪಾರಸ್ಥರಿಗೆ, ವಿವಿಧ ಸರಕಾರಿ ಇಲಾಖೆಗಳಿಗೆ, ಸಂಘ, ಸಂಸ್ಥೆಗಳಿಗೆ ಪತ್ರಿಕೆಗಳನ್ನು ವಿತರಣೆ ಮಾಡುವ ಸಮಯದಲ್ಲಿ ಗಾಳಿ, ಮಳೆಯಲ್ಲಿ ತಮ್ಮ ಜೀವದ ಹಂಗು ತೊರೆದು ಪತ್ರಿಕೆಗಳನ್ನು ಹಾಕುತ್ತಾರೆ. ಪತ್ರಿಕೆಗಳನ್ನು ಹಾಕುವವರು ಅತೀ ಕಡುಬಡತನದವರು ಇರುತ್ತಾರೆ. ಅವರಿಗೆ ಬೆಚ್ಚನೆಯಾಗಿರಲು ಜಾಕೇಟ್‌ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಅದನ್ನು ಅರಿತ ದಲಿತ ಸೇನೆಯ ಜಿಲ್ಲಾಧ್ಯಕ್ಷ ಭೀಮರಾವ ಮೀಶಿ ಅವರು ಪ್ರತಿಯೊಬ್ಬರಿಗೂ ತಮ್ಮ ಸಹಾಯದಿಂದ ಜಾಕೇಟ್‌ಗಳನ್ನು ವಿತರಣೆ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.
ಸಾಕಷ್ಟು ಸಂಘ ಸಂಸ್ಥೆಯರು ಬೆಳಗಿನ ಜಾವದಲ್ಲಿ ಬರುವ ಪತ್ರಿಕಾ ವಿತರಕರ ಬಗ್ಗೆ ಕಾಳಜಿ ವಹಿಸಿ. ಹೀಗೆ ಅವರಿಗೆ ಅನುಕೂಲಕರ ಆಗುವ ಹಾಗೆ ಸಹಾಯ, ಸಹಕಾರ ನೀಡಿದರೆ ಮಾತ್ರ ಸಂಘಟನೆಗಳು ಹಾಗೂ ಸಂಘ, ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತವೆ. ಸಮಾಜಮುಖಿ ಸೇವೆಯನ್ನು ಮಾಡುವ ದಲಿತ ಸೇನೆ ಕರ್ನಾಟಕ ಸಂಘಟನೆಯ ಕೆಲಸ ಮುಂದುವರಿಯಲ್ಲಿ ಹಾಗೂ ಜಿಲ್ಲಾಧ್ಯಕ್ಷ ಭೀಮರಾವ ಮೀಶಿ ಅವರ ಹುಟ್ಟು ಹಬ್ಬಕ್ಕೆ ಶುಭವನ್ನು ಕೋರಿದರು.
ಜಿಲ್ಲಾಧ್ಯಕ್ಷ ಭೀಮು ಮೀಶಿ, ತಾಲೂಕಾಧ್ಯಕ್ಷ ನಿಂಗರಾಜ ಬೆಳೆನ್ನವರ, ಪರುಶರಾಮ ಕಾಂಬಳೆ, ಸಚೀನ ಮೀಶಿ, ನವೀನ ಭೂವಿ, ವಸಂತ ಭೂವಿ, ರೋಹಿತ ಮೀಶಿ, ಸಚೀನ ಮೀಶಿ, ನಾಗು ಮೀಶಿ, ದೀಲಿಪ ದಾಶ್ಯಾಳ, ಪ್ರವೀಣ ಹೊಳೆಪ್ಪಗೋಳ, ರಾಮೋಜಿ ಕೇದಾರ, ಕೃಷ್ಣಾ ಕೋವಳ್ಳಿ, ಬಸವರಾಜ ಕೋವಳ್ಳಿ, ಸಾಗರ ಸುನಾವಣೆ, ಗಜು ಮುಧೋಳೆ, ಬಸವರಾಜ ಬೆವನೂರ, ಯುವರಾಜ ಮೀಶಿ, ಸಂಜು ಐಹೊಳೆ, ಅಕ್ಷಯ ಕೋಲೂರ, ಸೂರ್ಯಕಾಂತ ಕಡಕೋಳ, ಆಕಾಶ, ತನ್ವೀರ, ಬಸವರಾಜ ವಜ್ರಮಟ್ಟಿ ಸೇರಿದಂತೆ ಅನೇಕರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 