ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತ ಹೃದಯರೋಗ ತಪಾಸಣಾ ಶಿಬಿರ
Free heart disease check-up camp on the occasion of Kannada Rajyotsava
ಲೋಕದರ್ಶನ ವರದಿ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತ ಹೃದಯರೋಗ ತಪಾಸಣಾ ಶಿಬಿರ
ಬೀಳಗಿ, 02 ; ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯವನ್ನು ಸ್ವಾಸ್ತದೊಳಗೆ ಇಟ್ಟುಕೊಳ್ಳುವುದು ತುಂಬಾ ಮುಖ್ಯವಾದದ್ದು. ಮನುಷ್ಯನ ಶರೀರ ಮತ್ತು ಮನಸ್ಸು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒತ್ತಡಕ್ಕೆ ಒಳಗಾಗುವುದಿಲ್ಲ ಹಾಗೂ ಹೃದಯ ಕಾಯಿಲೆ ಬರುವುದನ್ನು ತಡೆಯಬಹುದೆಂದು ಪರಿಸರ ಪ್ರೇಮಿ ಡಾ.ಎಂ.ಆರ್.ದೇಸಾಯಿ ಹೇಳಿದರು.
ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಆಹಾರ ಸೇವನೆಯಿಂದ ಒಳ್ಳೆಯ ಅರೋಗ್ಯ ಪಡೆಯಬಹುದು. ದ್ವೇಶಗಳನ್ನು ಬಿಟ್ಟು ಒಳ್ಳೆಯ ವಿಚಾರ ಹೊಂದಿದರೆ ಒತ್ತಡ ರಹಿತ ಹೃದಯ ಹೊಂದಬಹುದು. ಇದರಿಂದ ಆರೋಗ್ಯವಂತ ಬದುಕು ನಮ್ಮದಾಗುತ್ತದೆ ಎಂದರು.
ಶಾಸಕ ಜೆ.ಟಿ.ಪಾಟೀಲ್ ಮಾತನಾಡಿ, ಉಚಿತ ಹೃದಯರೋಗ ತಪಾಸಣಾ ಶಿಬಿರದ ಸದುಪಯೋಗ ಪಡೆಸಿಕೊಳ್ಳಿ. ಮನುಷ್ಯನ ಒತ್ತಡದ ಜೀವನದಿಂದ ಇತ್ತಿಚ್ಚೆಗೆ ಹೃದಯ ಕಾಯಿಲೆ ಅಧಿಕವಾಗುತ್ತಿದ್ದು ಒತ್ತಡವನ್ನು ನಿಯಂತ್ರಿಸಲು ಮಾನಸಿಕವಾಗಿ ನೆಮ್ಮದಿಯ ಬದುಕು ಮುಖ್ಯ. ಇದಕ್ಕಾಗಿ ನುರಿತ ವೈದ್ಯರ ಸಲಹೆ ಪ್ರಮುಖವಾಗಿದೆ. ಎಲ್ಲಿವರೆಗೆ ನಾವು ಪರಿಸರ ಕಾಪಾಡಲು ಆಗುವುದಿಲ್ಲವೇ ಅಲ್ಲಿವರೆಗೆ ಆರೋಗ್ಯವಂತ ಸಮಾಜ ನಿರ್ಮಿಸಲು ಆಗುವುದಿಲ್ಲ. ಪರಿಸರ ಶುದ್ಧವಾದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಮರೆಗುದ್ದಿ ದಿಗಂಬರೇಶ್ವರ ಮಠದ ತೋಂಟದಾರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ ಮನುಷ್ಯ ಭಾವನೆಗಳು ಒಳ್ಳೆಯದಾಗಿದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ. ಉತ್ತಮ ಆಹಾರ ಸೇವನೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ನಮ್ಮ ಪರಿಸರದಲ್ಲಿ ಸಮೃದ್ಧ ಆರೋಗ್ಯವಂತ ಬದುಕು ಸಾಗಿಸಲು ಎಲ್ಲವೂ ಇದೆ. ಉತ್ತಮ ಆರೋಗ್ಯ ನಮ್ಮದಾಗಬೇಕಾದರೆ ದುಶ್ಚಟಗಳಿಂದ ದೂರವಾಗಿರಬೇಕು. ನಿತ್ಯ ನಮ್ಮ ಶರೀರಕ್ಕೆ 8ಗಂಟೆ ಬೆವರು ಹರಿಸುವಂತ ಕೆಲಸ ಕೊಟ್ಟರೆ ಸದೃಡವಾದ ದೇಹ ರೂಪಿಸಿಕೊಳ್ಳಬಹುದು ಎಂದರು.
ಎಸ್.ಟಿ.ಪಾಟೀಲ್, ಚಿಕ್ಕ ಮಕ್ಕಳ ತಜ್ಞ ಡಾ.ಆರ್.ಟಿ.ಪಾಟೀಲ್, ಹೃದಯ ರೋಗ ತಜ್ಞ ಡಾ.ವಿಕ್ರಮ ಎಸ್ ಪಾಟೀಲ್, ಎಂ.ಎಲ್.ಕೆಂಪಲಿಂಗಣ್ಣವರ್, ತೋಪನಗೌಡ ಪಾಟೀಲ್, ಎಚ್ ಪಿ ಸೊನ್ನದ, ಅದೃಷ್ಯಪ್ಪ ದೇಸಾಯಿ, ಅಶೋಕ ಲೆಂಕೆಣ್ಣವರ, ಡಾ.ಮಲ್ಲಿಕಾರ್ಜುನ್ ಹಳ್ಳೂರ್, ರಮೇಶ್ ಬಗಲಿ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 