ಉಚಿತ ಆರೋಗ್ಯ ತಪಾಸಣೆ, ಆಹಾರ ಮತ್ತು ಹಣ್ಣುಗಳ ವಿತರಣೆ
Free health check-ups, food and fruit distribution
ಬೆಟಗೇರಿ 27: ನಗರದ ಪ್ರತಿಷ್ಠತ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ವತಿಯಿಂದ ದಿ. 27-05-2025 ಮಂಗಳವಾರ ರಂದು ಗದಗ ಬೆಟಗೇರಿಯ ಜೀವನ ಜ್ಯೋತಿ ಶಿವರತ್ನ ವೃದ್ಧಾಶ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ, ಆಹಾರ ಮತ್ತು ಹಣ್ಣುಹಳ ವಿತರಣೆಯನ್ನು ಮಾಡಲಾಯಿತು.
ಗದಗ ನಗರದ ಧನವಂತರಿ ಕ್ಲಿನಿಖ್ ನ ವೈದ್ಯರಾದ ಡಾ. ರಾಜೇಶ್ವರಿ ರಾ. ಹಿರೇಮಠ ಅವರು ವೃದ್ಧಾಶ್ರಮದಲ್ಲಿ ವಾಸವಿರುವ ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ಮಾಡಿ ತಮ್ಮ ನಿತ್ಯ ಜೀವನದಲ್ಲಿ ಆರೋಗ್ಯವಾಗಿರಲು ಅವಶ್ಯಕವಿರುವ ಕೆಲವು ಯೋಗಾಸನಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು, ಎನ್. ಎಸ್. ಎಸ್. ಘಟಕದ ಸ್ವಯಂಸೇವಕರಾದ ಕುಮಾರ. ಕಿರಣಕುಮಾರ ಬ್ಯಾಡಗಿ ಮತ್ತು ಕುಮಾರ. ಪವನಕುಮಾರ ಕುಲಕರ್ಣಿ ವೃದ್ಧಾಶ್ರಮದಲ್ಲಿ ವಾಸವಿರುವ ಎಲ್ಲರಿಗೂ ಉಚಿತ ಹಣ್ಣುಗಳನ್ನು ವಿತರಣೆ ಮಾಡಿದರು. ವೃದ್ಧಾಶ್ರಮದ ಕೆಲವು ಆಶ್ರಿತರು ಮತ್ತು ಎನ್. ಎಸ್. ಎಸ್. ಸ್ವಯಂಸೇವಕರು ಹಾಡು ಹಾಡುವುದರ ಮೂಲಕ ಎಲ್ಲರನ್ನು ಮನರಂಜಿಸಿದರು.
ಈ ಕಾರ್ಯಕ್ರಮದಲ್ಲಿ ಜೀವನ ಜ್ಯೋತಿ ಶಿವರತ್ನ ವೃದ್ಧಾಶ್ರಮ, ಬೆಟಗೇರಿ ಇದರ ಮೇಲ್ವಿಚಾರಕರಾದ ಮಂಜುಳಾ ಎಮ್. ಲಕ್ಕುಂಡಿ, ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕರಾದ ಕುಮಾರಿ. ಸಾಕ್ಷಿ ಹೊಸಮಠ, ಕುಮಾರ. ಪವನಕುಮಾರ ಕುಲಕರ್ಣಿ, ಕಾರ್ಯದರ್ಶಿಯಾದ ಕುಮಾರಿ. ನೀಲಮ್ಮ ಸಿತಾರಳ್ಳಿ, ಎನ್. ಎಸ್. ಎಸ್. ತಂಡ 10 ರ ನಾಯಕ ಕುಮಾರ. ಬಸವರಾಜ ಕಮತರ್, ವರದಿಗಾರರಾದ ಕುಮಾರ. ಆಕಾಶ ಕಳಗ್ಗಣ್ಣನವರ ಮತ್ತು ಜೀವನ ಜ್ಯೋತಿ ಶಿವರತ್ನ ವೃದ್ಧಾಶ್ರಮದ ನಿವಾಸಿಗಳು ಹಾಗೂ ಎನ್. ಎಸ್. ಎಸ್. ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 