ನಿಟಪಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
Free health check-up camp in Nitapalli village
ರಾಣೆಬೆನ್ನೂರು 24: ಪ್ರತಿಯೊಬ್ಬರು ತಮ್ಮ ನಿತ್ಯ ಜೀವನ ಬದುಕಿನಲ್ಲಿ ಅತ್ಯಂತ ಸರಳ ಜೀವನ ಸಾಗಿಸಬೇಕಾದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವಿರಲಿ ನಿರ್ಲಕ್ಷತನ ತೋರದೆ ಮೇಲಿಂದ ಮೇಲೆ ತಪಾಸಣೆಗೊಳಪಡಬೇಕಾದ ಇಂದಿನ ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಗೌಡ ಹೇಳಿದರು.
ಅವರು ತಾಲೂಕಿನ ನಿಟಪಳ್ಳಿ ಗ್ರಾಮದ ಕಾರ್ಯಕ್ಷೇತ್ರದಲ್ಲಿ ಎಸ್. ಕೆ.ಡಿ.ಆರ್. ಡಿ. ಪಿ. ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಯೋಮಿತಿಗನುಗುಣವಾಗಿ, ಇಂದು ಒಂದಿಲ್ಲ ಒಂದು ರೀತಿಯಲ್ಲಿ ಕಾಯಿಲೆಗಳು ಬರುವುದು ಸಹಜ. ಅದಕ್ಕಾಗಿ ವಯೋವೃದ್ಧರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ತಪಾಸಣೆ ಮಾಡಿಕೊಂಡು, ವೈದ್ಯರ ಸಲಹೆಯಂತೆ ನಿಯಮಿತ ಆಹಾರ, ಉಪಹಾರ, ಓಷಧಿ ಮತ್ತು ನಿದ್ರೆ ಸರಿಯಾದ ರೀತಿಯಲ್ಲಿ ಅನುಸರಿಸಿದರೆ ಕಾಯಿಲೆಗಳಿಗೆ ಕಡಿವಾಣ ಹಾಕಿ, ಸರಳ ಜೀವನ ಸಾಗಿಸಬಹುದಾಗಿದೆ ಎಂದು ಕರೆ ನೀಡಿದರು.
ಶಿಬಿರದಲ್ಲಿ ಸಾರತ್ತ್ಯ ವಹಿಸಿದ್ದ ಶಿವಂ ಆಸ್ಪತ್ರೆಯ ಡಾ. ಶಿವಕುಮಾರ, ವಿಮಾ ಸಮನ್ವಯಾಧಿಕಾರಿ, ಕೃಷ್ಣಮೂರ್ತಿ, ಆಸ್ಪತ್ರೆ ವ್ಯವಸ್ಥಾಪಕ ಚರಣಕುಮಾರ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ ಸೇವಾ ಪ್ರತಿನಿಧಿ ಬಸಮ್ಮ ಸೇರಿದಂತೆ ಯೋಜನೆಯ, ಸದಸ್ಯರು ಮಹಿಳೆಯರು ವೈದ್ಯರು ಪಾಲ್ಗೊಂಡಿದ್ದರು. ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ 200 ನೂರಕ್ಕೂ ಹೆಚ್ಚು ಶಿಭಿರಾರ್ಥಿಗಳು ಪಾಲ್ಗೊಂಡು ತಪಾಸಣೆಗೆ ಒಳಪಟ್ಟರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 