ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ
Free health camp for NAREGA workers
ಯರಗಟ್ಟಿ 29 : ಸಮೀಪದ ಸೊಪ್ಪಡ್ಲ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ಗ್ರಾಮ ಪಂಚಾಯತಿ ಸೊಪ್ಪಡ್ಲ, ಪ್ರಾಥಮಿಕ ಆರೋಗ್ಯ ಕೇಂದ್ರ ತಲ್ಲೂರ ಆಯ್.ಸಿ.ಟಿ.ಸಿ ವಿಭಾಗ ಯರಗಟ್ಟಿ, ಬರ್ಡ್ಸ ಸಂಸ್ಥೆ ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ದಂತ ಪರೀಕ್ಷೆ, ಅಸಾಂಕ್ರಾಮಿಕ ರೋಗಗಳ ಪರೀಕ್ಷೆ, ಹೆಚ್ ಆಯ್ ವಿ ಏಡ್ಸ್ ರೋಗದ ಪರೀಕ್ಷೆ ಕುರಿತು ಶಿಬಿರವನ್ನ ಏರಿ್ಡಸಲಾಗಿತ್ತು.
ಹಲ್ಲುಗಳು ಆರೋಗ್ಯದಿಂದ ಇರಬೇಕಾದರೆ ಬಾಯಿ ಆರೋಗ್ಯ ಮುಖ್ಯವಾಗಿದ್ದು ದಿನಕ್ಕೆರಡು ಸಲ ಹಲ್ಲುಜ್ಜುವದು. ಹಲ್ಲಿನ ಸಮಸ್ಯೆಗೆ ವೈದ್ಯರನ್ನ ಭೇಟಿ ಮಾಡುವುದು ಹಲ್ಲಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಹಾಗೂ ವಸಡುಗಳ ಸಂರಕ್ಷಣೆ ಮತ್ತು ದಿನಕ್ಕೆರಡು ಸಲ ಹಲ್ಲುಜ್ಜುವುದು ಸಕ್ಕರೆ ಯುಕ್ತ ಆಹಾರಗಳನ್ನು ಕಡಿಮೆ ಸೇವಿಸುವುದರಿಂದ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ದಂತ ವೈದ್ಯಾಧಿಕಾರಿ ಡಾ. ಬಿ. ಎಸ್. ಬಳ್ಳೂರ ಹೇಳಿದರು.
ಇವತ್ತಿನ ಆಧುನಿಕ ಜೀವನಶೈಲಿ ಆಹಾರ ಪದ್ಧತಿ, ಚಟಗಳು ಅನುವಂಶಿಯತೆ ಇವುಗಳು ಅಸಾಂಕ್ರಾಮಿಕ ರೋಗಗಳಾದ ಬಿ ಪಿ ಶುಗರ್ ಕ್ಯಾನ್ಸರ್ ಹೃದಯಕ್ಕೆ ಸಂಭಂಧಿಸಿದ ಕಾಯಿಲೆಗಳು ಬರಲು ಕಾರಣಗಳಾಗಿವೆ. ಇವುಗಳನ್ನು ನಿಯಂತ್ರಣ ಮಾಡಲು ನಿಯಮಿತ ವ್ಯಾಯಾಮ ಆಹಾರ ಪದ್ಧತಿಯಲ್ಲಿ ಇತಿಮಿತಿಯನ್ನು ಕಾಯ್ದುಕೊಳ್ಳುವುದು ಹಾಗೂ ಚಟುವಟಿಕೆಯಿಂದ ಜೀವನವನ್ನು ನಡೆಸುವುದು ಹಾಗೂ ಚಟಗಳಿಂದ ಮುಕ್ತರಾದಾಗ ಇವುಗಳನ್ನು ನಿಯಂತ್ರಿಸಬಹುದೆಂದು ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್ ಆರ್ ಗಂಜಿ ಹೇಳಿದರು.
ಏಡ್ಸ್ ರೋಗ ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದು ನಾಲ್ಕು ಮಾರ್ಗಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದಷ್ಟು ಸಮಾಜದಲ್ಲಿ ಏಡ್ಸ್ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಹಾಗೂ ಏಡ್ಸ್ ರೋಗ ನಿಯಂತ್ರಿಸಲು ಎಲ್ಲರೂ ಭಾಗವಹಿಸುವುದು.ಸದರಿ ರೋಗಿಯನ್ನು ಸಾಮಾನ್ಯರಂತೆ ಕಾಣುವದಾಗಿದೆ ಎಂದು ಆಯ್ ಸಿ ಟಿ ಸಿ ಆಪ್ತಸಮಾಲೋಚಕರಾದ ಮಾಂತೇಶ ಹಿರೇಮಠ ತಿಳಿಸಿದರು.
ಈ ವೇಳೆ ಗ್ರಾ. ಪಂ. ಸದಸ್ಯ ಕಿರಣ ಹುಣಶ್ಯಾಳ, ಗ್ರಾ. ಪಂ. ಕಾರ್ಯದರ್ಶಿ ಲಕ್ಷ್ಮಣ ಮಾದರ, ಗೀತಾ ಪೋಳ, ದೀಪಾ ಪಾಟೀಲ, ಶೃತಿ ಕೊಟ್ರಶೆಟ್ಟಿ, ಆರ್. ಎಸ್. ಸನ್ನಿಂಗನ್ನವರ, ಎಂ. ಬಿ. ಚಿಲಕಂಡಿ, ಮಹಾಂತೇಶ ಕತ್ತಿ, ಪ್ರಕಾಶ ಮಾಂಗ್ ಸೇರಿಸಂತೆ ಅನೇಕ ನರೇಗಾ ಕೂಲಿಕಾರ್ಮಿಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 