ವೃದ್ಧಾಶ್ರಮದ ಹಿರಿಯರಿಗೆ ಉಚಿತ ಹೇರ್ ಕಟಿಂಗ್, ಶೇವಿಂಗ್ ಸೇವೆ
Free haircut and shaving services for elderly residents of the old age home
ರಾಣೆಬೆನ್ನೂರು, ಜು. 28: ಯಾವುದೇ ವೃತ್ತಿಯಲ್ಲಿದ್ದರೂ ಸೇವಾ ಮನೋಭಾವ ಇದ್ದರೆ ಸಮಾಜಕ್ಕೆ ಕೊಡುಗೆ ನೀಡಬಹುದು ಎಂಬುದಕ್ಕೆ ಬಸವರಾಜ್ ಕಡೆಯಮನಿ ಹಾಗೂ ಮಲ್ಲೇಶ್ ಕಡೆಯಮನಿ ಸಹೋದರರು ಮಾದರಿಯಾಗಿದ್ದಾರೆ.
ಹರಿಹರದ ಗುತ್ತೂರು ಕಾಲೋನಿಯಲ್ಲಿರುವ ಶಕ್ತಿ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ 17ಕ್ಕೂ ಹೆಚ್ಚು ಹಿರಿಯರಿಗೆ ಉಚಿತವಾಗಿ ಹೇರ್ ಕಟಿಂಗ್ ಹಾಗೂ ಶೇವಿಂಗ್ ಸೇವೆ ನೀಡಿ ಮಾನವೀಯತೆ ಮೆರೆದರು.
ಭಾರತೀಯ ಸಂಸ್ಕೃತಿಯಲ್ಲಿ ಸೇವೆಗೆ ವಿಶೇಷ ಸ್ಥಾನವಿದ್ದು, ನಿಸ್ವಾರ್ಥ ಸೇವೆಯಿಂದ ಮಾನಸಿಕ ತೃಪ್ತಿ ಹಾಗೂ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಇದೇ ಮನೋಭಾವದಿಂದ ಸೇವೆ ಸಲ್ಲಿಸಿದ ಸಹೋದರರ ಕಾರ್ಯವನ್ನು ವೃದ್ಧಾಶ್ರಮದ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸೇವೆಯ ಮೂಲಕ ವೃದ್ಧಾಶ್ರಮದ ಹಿರಿಯರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದಕ್ಕೆ ಪಾತ್ರರಾದ ಬಸವರಾಜ್ ಮತ್ತು ಮಲ್ಲೇಶ್ ಕಡೆಯಮನಿ ಸಹೋದರರಿಗೆ ವೃದ್ಧಾಶ್ರಮದ ಮುಖ್ಯಸ್ಥರು, ಪ್ರಾಯೋಜಕರು ಹಾಗೂ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 