ನಗರದ 23 ನೇ ವಾರ್ಡಿನ ಒಕ್ಕಲಗೇರಿಯ ವಿವಿಧ ಬಡಾವಣೆಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
Free eye check-up camp in various areas of Okkalageri, Ward 23 of the city
ಗದಗ 11: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ 23 ನೇ ವಾರ್ಡಿನ ಸೋಮೇಶ್ವರ ದೇವಸ್ಥಾನದ ಹತ್ತಿರದಲ್ಲಿರುವ ಹಂಪಿನಗೇರಿ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಹಾಗೂ ಒಕ್ಕಳಗೇರಿಯ 8 ನಂಬರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಡಾವಣೆಯ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಷ್ಟಿತ ಕೆ ಎಚ್ ಪಾಟೀಲ್ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಎಚ್ ಕೆ ಪಾಟೀಲ್ ಸೇವಾ ತಂಡದ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 11 ಮತ್ತು 12 ರಂದು ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 9 ಘಂಟೆಗೆ ಪ್ರಾರಂಭವಾದ ತಪಾಸಣಾ ಶಿಬಿರದಲ್ಲಿ ಸುಮಾರು 101 ಜನರು ತಮ್ಮ ದೃಷ್ಟಿ ತಪಾಸಣೆಯನ್ನು ಮಾಡಿಕೊಂಡರು. ಅದರಲ್ಲಿ ವಿಶೇಷವಾಗಿ ಗದಗ ತಾಲೂಕಿನಲ್ಲಿ ಕಣ್ಣಿನ ಪೊರೆ ತಪಾಸಣೆಯ ಕ್ರಿಯಾ ಯೋಜನೆ ಎಂಬ ವಿನೂತನ ಅಭಿಯಾನದಲ್ಲಿ ಒಟ್ಟು 21 ಜನರಿಗೆ ಕಣ್ಣಿನ ಪೋರೆ ಬಂದಿರುವದು ಕಂಡು ಬಂದಿದ್ದು, ಅದರಂತೆ ಹಂಪಿನಗೇರಿ ಓಣಿಯ ಅಂಗನವಾಡಿ ಕೇಂದ್ರದಲ್ಲಿ 55 ಜನರು ತಮ್ಮ ದೃಷ್ಟಿ ತಪಾಸಣೆ ಮಾಡಿಕೊಂಡರು. ಅವರಲ್ಲಿ 10 ಜನರಿಗೆ ಕಣ್ಣಿನ ಪೋರೆ ಬಂದಿರುವದು ಕಂಡು ಬಂದಿದ್ದು, ಒಟ್ಟು 31 ಜನರನ್ನು ಕಣ್ಣಿನ ಪೋರೆ ಶಸ್ತ್ರಚೀಕಿತ್ಸೆಗಾಗಿ
ಚಿಕಿತ್ಸೆಗಾಗಿ ಕೆ ಎಚ್ ಪಾಟೀಲ್ ಆಸ್ಪತ್ರೆಗೆ ರೇಫರ ಮಾಡಲಾಯಿತು.ಈ ಸಂಧರ್ಭದಲ್ಲಿ ವಾರ್ಡಿನ ಜನಸ್ನೇಹಿ ನಗರಸಭಾ ಸದಸ್ಯರಾದ ಜನಾಬ್ ಬರಕತ ಅಲಿ ಮುಲ್ಲಾ, ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಶ್ರೀಮತಿ ಸಾವಿತ್ರಿ ಹೂಗಾರ, ಮಹಮದರಫಿ ಕರಿಕಟ್ಟಿ, ಸವಿತಾ ಬಳಿಗೇರ ವೈದ್ಯ ಸಹಾಯಕರಾದ ಅಂಬಿಗೇರ (ಸಿಸ್ಟರ್ ) ಆಶಾ ಕಾರ್ಯಕರ್ತರಾದ ಲಕ್ಷ್ಮಿ ಬಾಯಿ ಅಂಗನವಾಡಿ ಟೀಚರ್ ಮತ್ತು ಸಹಾಯಕರು ಎಚ್ ಕೆ ಪಾಟೀಲ್ ಸೇವಾ ತಂಡದ ಕ್ಯಾಪ್ಟನ್ ರಾದ ಖಾದರ್ ಕಿರೆಸೂರ್, ಆಶಾ ಕಾರ್ಯಕರ್ತರಾದ ಶ್ರೀಮತಿ ಸಾವಿತ್ರಿ ಬಾರಕೇರ, ಸಿಸ್ಟರ್ ಸುಮಾ ಕರಡಕಲ್ ಅಂಗನವಾಡಿ ಸಹಾಯಕರಾದ ಶಿವಲೀಲಾ, 8 ನೇ ನಂಬರ ಶಾಲೆಯ ಪ್ರಧಾನ ಗುರುಗಳಾದ ಕೆ ಡಿ ತಳವಾರ ಮತ್ತು ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ನಾಗಪ್ಪ ಗುಗ್ಗರಿ, ಅಲ್ತಾಫ್ ಇಟಿ, ಮಾಬೂಸಾಬ್ ಅಡರಕಟ್ಟಿ, ಬಸವರಾಜ ಹತ್ತಿಶೆಟ್ಟರ, ಜಗದೀಶ್ ಗೌಡರ, ಮಾಧಾರಸಾಬ್ ಯಾದಗಿರಿ, ಬಾಬು ಗುಳಗುಂದಿ, ಮಂಜುನಾಥ್ ನಲವಡಿ, ಪ್ರವೀಣ ಜಂತಲಿ, ಮಹ್ಮದ ಶಾಹಿದ್ ಮುಲ್ಲಾ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 