ಬೆಳಗಾವಿ 26: ನಗರದ ಉದ್ಯಮಬಾಗದಲ್ಲಿನ ಶ್ರೀ ಶೇಷಗಿರಿ ಎಂಜಿನಿಯರಿಂಗ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವತಿಯಿಂದ ನಡೆಸಲಾಗುತ್ತಿರುವ ಕೆ ಎಲ್ ಇ ಆಸ್ಪತ್ರೆಯಲ್ಲಿ ಬರುವ ಗುರುವಾರ ದಿನಾಂಕ 28ನೇ ನವೆಂಬರ್ 2024 ರಂದು ಬೆಳಿಗ್ಗೆ 9 ಘಂಟೆಯಿಂದ ಮದ್ಯಾಹ್ನ 4 ಘಂಟೆಯವರೆಗೆ ಉಚಿತ ದಂತ ತಪಾಸನಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಕೆ ಎಲ್ ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಹೆಸರಾಂತ ದಂತ ವೈದ್ಯರುಗಳು ರೋಗಿಗಳನ್ನು ಉಚಿತವಾಗಿ ತಪಾಶಿಸಲಿರುವರು ಹಾಗೂ ಆಯ್ದ ಚಿಕಿತ್ಸೆಗಳನ್ನು ಶಿಬಿರದಲ್ಲಿ ಮಾಡಲಾಗುವದು ಎಂದು ಉದ್ಯಮಬಾಗ ಕೆ ಎಲ್ ಇ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಮದನ ಡೋಂಗ್ರೆ ಅವರು, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಹಾಗೂ ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹಾಗೂ ಮೊಬೈಲ್ ಸಂಖ್ಯೆಗಳಾದ 8197018277, 9480563507 ಗಳ ಮೇಲೆ ಸಂಪರ್ಕಿಸಲು ಸೂಚಿಸಿದ್ದಾರೆ.