ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ ಶಿಬಿರ

ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ ಶಿಬಿರ Free check-up camp as part of World Diabetes Day

           ಬೆಳಗಾವಿ 14: ವಿಶ್ವ ಮದುಮೇಹ ದಿನದ ಅಂಗವಾಗಿ, ನವೆಂಬರ 14 ರಂದು, ಕೆ. ಎಲ್‌. ಇ. ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಯಳ್ಳೂರ ರಸ್ತೆ, ಬೆಳಗಾವಿ ಯಲ್ಲಿ  ಸಾರ್ವಜನಿಕರ ಹಿತದೃಷ್ಟಯಿಂದ ಉಚಿತ ಮದುಮೇಹ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಮದುಮೇಹ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಉಚಿತ ತಪಾಸಣಾ ಶಿಬಿರದಲ್ಲಿ ಒಟ್ಟು 100ಕ್ಕೂ ಅಧಿಕ ರೋಗಿಗಳನ್ನು ಪರೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಶೀಲಿಸಲಾಯಿತು ಮತ್ತು ಮದುಮೇಹದ ನಿರ್ವಹಣೆ ಹಾಗೂ ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ವೈದ್ಯರುಗಳು ಶಿಬಿರದಲ್ಲಿ ಪಾಲ್ಗೋಂಡ ಜನರಿಗೆ ನೀಡಿದರು. ವೈದ್ಯಕೀಯ ಸಿಬ್ಬಂದಿ ಮತ್ತು ತಜ್ಞರು ಈ ಶಿಬಿರದಲ್ಲಿ ಭಾಗವಹಿಸಿ, ರೋಗಿಗಳ ಆರೋಗ್ಯದ ಕುರಿತು ವೈಯಕ್ತಿಕ ಗಮನ ನೀಡಿದರು.  

           ಮದುಮೇಹವು ಇಂದು ಜಾಗತಿಕ ಆರೋಗ್ಯ ಸಮಸ್ಯೆಯಾಗಿ ಬೆಳೆದಿದೆ. ಇದು ಬಾಲ್ಯದಿಂದ ಹಿಡಿದು ವೃದ್ಧಾಪ್ಯದವರೆಗೂ ಪ್ರತಿ ಹಂತದಲ್ಲೂ ಮದುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಮಗ್ರ ಆರೈಕೆ ಮತ್ತು ಬೆಂಬಲದ ಅಗತ್ಯವಿದೆ ಮದುಮೇಹವನ್ನು ನಿಯಂತ್ರಣದಲ್ಲಿಡಲು ಆರಂಭಿಕ ತಪಾಸಣೆ, ಸರಿಯಾದ ಓಷಧಿ ಮತ್ತು ಆರೋಗ್ಯಕರ ಜೀವನಶೈಲಿ (ಆಹಾರ ಮತ್ತು ವ್ಯಾಯಾಮ) ಅತ್ಯಗತ್ಯ ಎಂದು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಪ್ರಶಾಂತ ದೆಸಾಯಿ ಅವರು ಶಿಬಿರವನ್ನುದ್ದೇಶಿಸಿ ಮಾತನಾಡಿದರು. 

           ಈ ಕಾರ್ಯಕ್ರಮದಲ್ಲಿ ಮೆಡಿಶಿನ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ ಬಿ, ಹಿರಿಯ ತಜ್ಞವೈದ್ಯರಾದ ಡಾ.ವಾಳ್ವೇಕರ, ಡಾ. ವಿರೇಂದ್ರೆ ಅಷ್ಟಗಿ ವೈದ್ಯಕೀಯ ಮತ್ತು ವೈದ್ಯಕಿಯೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 100 ಕ್ಕೂ ಅಧಿಕ ಜನರಿಗೆ ಉಚಿತ ಮಧುಮೇಹ ತಪಾಸಣೆ ಮಾಡಿ ವೈದ್ಯರ ಸಲಹೆ ಪಡೆಯಲಾಯಿತು. ಹೆಚ್ಚಿನ ಸಲಹೆ ಸೂಚನೆಗಳಿಗೆ ನಮ್ಮ ಆಸ್ಪತ್ರೆಯನ್ನು ಸಂಪರ್ಕಿಸಬೇಕೆಂದು ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್‌ರಾದ ಡಾ. ಆರ್‌.ಜಿ ನೆಲವಿಗೆ ಅವರು ಸೂಚನೆ ನೀಡಿದರು.