ಹಿರಿಯ ನಾಗರಿಕರಿಗೆ ಉಚಿತ ಅಂಬ್ಯುಲೆನ್ಸ ಸೇವೆ
Free ambulance service for senior citizens
ಲೋಕದರ್ಶನ ವರದಿ
ಬೆಳಗಾವಿ 28: ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವತಿಯಿಂದ ಆಸ್ಪತ್ರೆಯ ಸುತ್ತಮುತ್ತಲಿನ 5ಕಿ ಮೀ ವ್ಯಾಪ್ತಿಯಲ್ಲಿ ಬರುವ ಅನಗೋಳ, ವಡಗಾವಿ, ಶಹಾಪೂರ, ಮಹದ್ವಾರ ರೋಡ, ಗೂಡಶೆಡ ರೋಡ, ಟಿಳಕವಾಡಿ ಯಳ್ಳೂರ, ಉದ್ಯಮಬಾಗ, ಮಜಗಾವ, ಹಳೆ ಬೆಳಗಾವಿ ಮುಂತಾದ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಹಿರಿಯ ನಾಗರಿಕರಿಗೆ ಉಚಿತ ಅಂಬ್ಯುಲೆನ್ಸ ಸೇವೆಯನ್ನು ನೀಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ದಿನದ 24 ಘಂಟೆಯೂ ಆಸ್ಪತ್ರೆಗೆ ಭೇಟಿ ನೀಡಲು ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಈ ಸೇವೆಯನ್ನು ಪ್ರಾರಂಭಿಸಲಾಗಿದೆ.
ಹಿರಿಯ ನಾಗರಿಕರು ಆಸ್ಪತ್ರೆಗಳಲ್ಲಿ ಸರದಿಯಲ್ಲ್ಲಿ ನಿಂತು ತಮ್ಮ ನೋಂದಣಿ ವೈದ್ಯರೊಂದಿಗೆ ಸಂದರ್ಶನ, ರಕ್ತ ಮೂತ್ರ ಪರಿಕ್ಷೆ, ಕ್ಷ ಕಿರಣ ಓಷಧಾಲಯ ಮುಂತಾದೆಡೆ ಸರದಿಯಲ್ಲಿ ನಿಲ್ಲುವ ಬವಣೆಯನ್ನು ತಪ್ಪಿಸಲು, ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ವಿಶೇಷವೆಂಬಂತೆ ಆರೋಗ್ಯ ದಾಸೋಹ ಕಾರ್ಡುಗಳನ್ನು ಉಚಿತವಾಗಿ ನೀಡಲಾಗುವದು. ಈ ಕಾರ್ಡಗಳ ನೋಂದಣಿ ಮಾಡಿಕೊಂಡ ನಾಗರಿಕರಿಗೆ ಉಚಿತ ನೋಂದಣಿ, ಉಚಿತವಾಗಿ ವೈದ್ಯರ ಸಂದರ್ಶನ, ರಕ್ತ ಮೂತ್ರ ಪರಿಕ್ಷೆ, ಕ್ಷ ಕಿರಣ ಓಷಧಾಲಯಗಳ ಮೇಲೆ ಶೇಕಡಾ 20 ರಷ್ಟು ರಿಯಾಯತಿ ಹಾಗೂ ಒಳರೋಗಿವಿಬಾಗದಲ್ಲಿ ದಾಖಲಾಗುವ ರೋಗಿಗಳಿಗೆ ಶೇಕಡಾ 10ರಷ್ಟು ರಿಯಾಯತಿ ನೀಡಲಾಗುವದು. ಈ ಕಾರ್ಡ ನೋಂದಣಿ ಮಾಡಿಕೊಳ್ಳಲು ಮೊಬೈಲ ಸಂಖ್ಯೆ, ಇ-ಮೇಲ್ ವಿಳಾಸಗಳು ಕಡ್ಡಾಯವಾಗಿದೆ.
ಆದ್ದರಿಂದ ಮೇಲ್ಕಾಣಿಸಿದ ಪ್ರದೇಶಗಳಲ್ಲಿ ವಾಶಿಸುವ ಹಿರಿಯ ನಾಗರಿಕರುಗಳು ಈ ಸಂದರ್ಭದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾಧಿಕಾರಿಗಳಾದ ಪ್ರಶಾಂತ ದೇಸಾಯಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ 0831-2413777 ್ಖ1101, 8550887777, 9071413821 ಮೊಬೈಲ ಸಂಖ್ಯೆಗಳ ಮೇಲೆ ಸಂಪರ್ಕಿಸಲು ಸೂಚಿಸಿದ್ದಾರೆ.
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ 