ಮಹನೀಯರ ಜಯಂತಿ ನಿಮಿತ್ಯ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ

ಮಹನೀಯರ ಜಯಂತಿ ನಿಮಿತ್ಯ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ  Free all-faith mass wedding on the occasion of Mahaniyar's birthday

ಹಾವೇರಿ 01: ಅತಿ ಹೆಚ್ಚು ಮದುವೆಗೆ ಖರ್ಚು ಮಾಡಿ ಆರ್ಥಿಕ ಮುಗ್ಗಟ್ಟಿಗೆ ಒಳಗಾಗದೇ ಸರಳವಾಗಿ ಮದುವೆ ಆಗಿ ಸಾಮಾಜಮುಖಿ ಕೆಲಸಗಳ ಮೂಲಕ ಬುದ್ಧ,ಬಸವ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ದಾಂತದಡಿ ಜೀವನ ಸಾಗಿಸುವುದು ಅಗತ್ಯವಾಗಿದೆ ಎಂದು ಆಲ್‌ಇಂಡಿಯಾ ಬಹು ಜನ ಸಮಾಜ ಪಕ್ಷದ ಹಾವೇರಿ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಹೇಳಿದರು. ಇಲ್ಲಿನ ಸಿದ್ಧರೋಡ ಕಾಲಿನಿಯಲ್ಲಿರುವ ಡಾ.ಬಿಆರ್‌ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್‌ಅಂಬೇಡ್ಕರ್ ಅವರ 135 ನೇ ಹಾಗೂ ಜಗಜ್ಯೋತಿ ಬಸವೇಶ್ವರಜಯಂತಿ ಹಾಗೂ ಭಗವಾನ ಬುದ್ಧರ ಜಯಂತಿ ನಿಮಿತ್ತವಾಗಿ ಆಲ್‌ಇಂಡಿಯಾ ಬಹುಜನ ಸಮಾಜ ಪಕ್ಷದ ವತಯಿಂದ ಆಯೋಜಿಸಿದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಇಂದಿನ ದಿನಮಾನಗಳಲ್ಲಿ ಬಡವರ ಬದುಕು ನಡೆಸುವುದೇ ಕಷ್ಟಕರವಾಗಿದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳುವುದೇ ಹರ ಸಾಹಸವಾಗಿದೆ. ಈ ನಿಟ್ಟಿನಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ಹಾಗೂ ಸಮಮನಸ್ಕರರು ಬಡವರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಶ್ರಮವಹಿಸಿ ಈ ಸಾಮೂಹಿಕ ವಿವಾಹ ಆಯೋಜಿಸಿದ್ದು,ಸಹಾಯ,ಸಹಕಾರ ಹಾಗೂ ಶ್ರಮವಹಿಸಿದ ಎಲ್ಲರಿಗೂ ಅಭಿನಂದನೆಗಳು.ನಮ್ಮ ಬದುಕಿನಲ್ಲಿ ಮಹಾನ್ ನಾಯಕರಾದ ಬುದ್ಧರ,ಬಸವಣ್ಣನವರ ಹಾಗೂ ಡಾ. ಬಿ ಆರ್‌ಅಂಬೇಡ್ಕರ್ ಅವರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕಿದೆ.

ಸಾಮಾಜಿಕ ಕೆಲಸಗಳನ್ನು ಎಲ್ಲರೂ ಸೇರಿ ಮುಂದುವರಿಸೋಣ ಎಂದು ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಹೇಳಿದರು.ಅಹಿಂದ ಮುಖಂಡರಾದಉಡಚಪ್ಪ ಮಾಳಗಿ ಮಾತನಾಡಿಇಂತಹ ಸಮಾಜಮುಖಿಕಾರ್ಯಕ್ರಮ ಮಾಡಲುಎಲ್ಲ ಸಮಮನಸ್ಕರರು ಹೆಚ್ಚು ಶ್ರಮಹಿಸಿದ್ದು,ಉತ್ತಮ ಕೆಲಸಕ್ಕೆ ಸಮಾಜದಲ್ಲಿ ಹೆಚ್ಚು ಸಹಕಾರದೊರಯಬೇಕಾಗಿದೆಎಂದರು.ಲಿಡ್ ಬ್ಯಾಂಕ್ ಮ್ಯಾನೇಜರ ಬಾಬುರಾವ ತೋಪ ಸಮುದ್ರೆ ಮಾತನಾಡಿ ಬದುಕಿನಲ್ಲಿ ಆರ್ಥಿಕ ಶಿಸ್ತು ಮುಖ್ಯವಾಗಿದೆ. ಸರಳ ಸಾಮೂಹಿಕ ವಿವಾಹ ಆಗುವ ಮೂಲಕ ತಾವು ಸಾಲ ಮಾಡುವುದನ್ನು ತಪ್ಪಿಸಬಹುದು ಎಂದರು.ಎಐಬಿಎಸ್‌ಪಿಜಿಲ್ಲಾ ಖಜಾಂಚಿಗಳಾದ ಶಂಭಲಿಂಗಯ್ಯ ಅನಗೋಡಿ ಮಠ ಮಾತನಾಡಿ ಬಡವರ ಪರವಾಗಿ ಸಾಮಾಜಿಕ ಕೆಲಸ ಮಾಡಲು ಸಮಾಜದ ಸಹಕಾರ ಬಹಳ ಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಅನೇಕರು ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ್ದು, ಎಲ್ಲರಿಗೂ ಧನ್ಯವಾದಗಳನ್ನು ಅರ​‍್ಿಸಿದರು. 

ಕಾರ್ಯಕ್ರಮದಲ್ಲಿ ಸಾಹಿತಿಹಾಲೇಶಪ್ಪ ಅಕ್ಕಿ, ಶಿವಲಿಂಗಪ್ಪ ಹಿರಿಯೂರ, ರೈತ ಮುಖಂಡರಾದ ಸುರೇಶ ಛಲವಾದಿ, ಬಿಎಎಸ್‌ಪಿ ಜಿಲ್ಲಾಧ್ಯಕ್ಷ ಎಂ.ಕೆ ಮಖಬೂಲ್ ನವ ದಂಪತಿಗಳಿಗೆ ಶುಭಕೋರಿ ಮಾತನಾಡಿದರು.ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಹಾಗೂ ಶ್ರಮವಹಿಸಿದ ಗಣ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು.ಇದೇಅವಧಿಯಲ್ಲಿ ನವದಂಪತಿಗಳಿಗೆ ಸಂವಿಧಾನ ಪೀಠಿಕೆಯನ್ನು ಭೋಧಿಸಿ, ಜೀವನದಲ್ಲಿ ಉತ್ತಮ ಬದುಕು ಸಾಗಿಸಿರಿ ಎಂದು ಶುಭಕೋರಲಾಯಿತು. 

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಿಜಯಕುಮಾರ ವಿರಕ್ತಮಠ, ಮೃತ್ಯಂಜಯ ನೆಲ್ಲೂರ.ಮಹಾದೇವಪ್ಪ ಹುಡೇದ, ರುದ್ರಯ್ಯ ಸಾಲಿಮಠ, ಆಜೀಮಸಾಬ ಮನ್ನಂಗಿ, ಗುಡ್ಡಪ್ಪ ಚಿಕ್ಕಪ್ಪನವರ,ದಾದಾಪೀರ ಮತ್ತಿಹಳ್ಳಿ,ಸಿದ್ದಪ್ಪ ಮರಡಿ,ಬಿ.ಸಿ.ಲಂಬಿ,ಶಿವು ಈರಗಾರ, ಸುಮಾ ಪುರದ,ಶ್ರೀಮತಿ ರೇಖಾ. ಬಸವರಾಜ ಈರಾಪೂರ, ಮಜ್ಜುರ ತಟಗೇರ,ಈರಣ್ಣ ಕಡ್ಡಿಪುಡಿ, ಪ್ರಕಾಶ ಬೆನ್ನೂರ,ಸಾದೀಕ,ರೋಷನ್‌ಅಮ್ಮಿನಬಾಯಿ, ಜಾಫರ ದೊಡ್ಡಮನಿ ಹಾಗೂ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.