ಬುದ್ಧ ಜಯಂತಿ ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Talent award program as part of Buddha Jayanti
ಬಳ್ಳಾರಿ 01 : 2570ನೇ ಬುದ್ಧ ಜಯಂತಿ ಅಂಗವಾಗಿ ತಾಲೂಕಿನ ಸಂಗನಕಲ್ಲು ಬೆಟ್ಟದಲ್ಲಿರುವ ಬಯಲು ಬುದ್ಧ ವಿಹಾರದಲ್ಲಿ ದೇವನಾಂಪ್ರಿಯ ಬಯಲು ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕಿನ ಸಿರಿವಾರ, ಕಪ್ಪಗಲ್ಲು ಮತ್ತು ಸಂಗನಕಲ್ಲು ಗ್ರಾಮಗಳ ವಿದ್ಯಾರ್ಥಿಗಳಲ್ಲಿ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಟ್ರಸ್ಟ್ ಪದಾಧಿಕಾರಿಗಳೊಂದಿಗೆ ಮೇಯರ್ ಗಾದೆಪ್ಪ, ಹಿರಿಯ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್, ಸಂಗನಕಲ್ಲು ವಿಜಯ್ ಕುಮಾರ್, ಎರ್ರೆಣ್ಣ, ಈರಣ್ಣ, ಮೆಹತಾಬ್ (ನಿವೃತ್ತ ಶಿಕ್ಷಕರು), ಕೊಪ್ಪಲ್ ಬಾಬು (ಮುಖ್ಯಗುರು), ಧರ್ಮಣ್ಣ ಶಿಕ್ಷಕರು, ಸಿ. ಶಿವಕುಮಾರ್ (ಜಿಲ್ಲಾ ಛಲವಾದಿ ಮಹಾಸಭಾಧ್ಯಕ್ಷ), ಗೋವಿಂದರಾಜ್ ನಾಗಲಕರಿ, ನರಸಪ್ಪ, ನಾಗರತ್ನ ಬಂತೇಜಿ, ನಾಗರಾಜ್ ಕೆ, ಲಿಂಗಪ್ಪ, ಹೊನ್ನೂರ್ಪ (ಕಪ್ಪಗಲ್ಲು), ಚಂದ್ರಣ್ಣ, ಲಿಂಗದೇವನಹಳ್ಳಿ ನಾಗೇಂದ್ರ, ಮೋಕ ಹನುಮಂತ, ಕೊಳಗಲ್, ಸೂರಿ (ಕಪ್ಪಗಲ್ಲು), ಸಂಗನಕಲ್ಲು ಚಂದ್ರ, ಮಹೇಂದ್ರ (ಕಪ್ಪಗಲ್ಲು) ಸೇರಿದಂತೆ ಹಲವರು ಭಾಗವಹಿಸಿದ್ದರು.ಎಸ್ಎಸ್ಎಲ್ಸಿ ವಿಭಾಗದಲ್ಲಿ ಉಮಾದೇವಿ, ಕಾವೇರಿ ಕೆ, ಉಮಾ, ತ್ರಿಷಾ ಕೆ, ಕಸ್ತೂರಿ, ಆಶಾಭಿ, ಕಾಮಾಕ್ಷಿ ಎಚ್, ಪಿ. ನಬಿ ರಸುಲ್, ತನುಜಾ, ವಂಶಿ, ಶ್ವೇತ, ಭಾಗ್ಯ ಚಂದನ, ವಚನಪ್ರಿಯ ಡಿ.ಎನ್, ಸಿ. ಗಿರಿಸಾಯಿ, ನಾಗವೇಣಿ ಸೇರಿದಂತೆ ಹಲವರು ಪ್ರಶಸ್ತಿ ಪಡೆದರು. ಪಿಯುಸಿ ವಿಭಾಗದಲ್ಲಿ ಸಿ. ಉಮಾದೇವಿ (ಕಪ್ಪಗಲ್ಲು) ಮತ್ತು ದೀಕ್ಷಿತ್ (ಕಾರೇಕಲ್) ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 