ಂಟರನ್ಯಾಶನಲ್ ಮಾಕರ್ೆಟಿಂಗ್ ಕಾಪರ್ೋರೇಶನ ಲಿಮಿಟೆಡ್ ಹರಿದ್ವಾರ ನೇತೃತ್ವದ ಉಚಿತ ವೈದ್ಯಕೀಯ ತಪಾಸಣೆ ಶಿಬಿರ

ಬಸವನಬಾಗೇವಾಡಿ26: ಪ್ರತಿಯೊಬ್ಬರ ಆರೋಗ್ಯಕ್ಕೆ ದಿನನಿತ್ಯದ ಬದುಕಿನಲ್ಲಿ ನಾವು ಸೇವಿಸುವ ಆಹಾರ ಪದ್ಧತಿಯೂ ಕೂಡಾ ಬಹಳ ಮಹತ್ವದಾಗಿದೆ ಎಂದು ಹಿರಿಯ ಆಯುವರ್ೆದಿಕ ತಜ್ಞ ಡಾ. ರಮೇಶ ಗೆಣ್ಣೂರ ಹೇಳಿದರು. 

   ಸ್ಥಳೀಯ ವಿಜಯಪುರ ರಸ್ತೆಯಲ್ಲಿರುವ ಯಾತ್ರಿ ನಿವಾಸದಲ್ಲಿ ಹರಿದ್ವಾರದ ಇಂಟರನ್ಯಾಶನಲ್ ಮಾಕರ್ೆಟಿಂಗ್ ಕಾಪರ್ೋರೇಶನ ಲಿಮಿಟೆಡ್ ಹಾಗೂ ಸ್ಥಳೀಯ ಅಶ್ವಿನಿ ಹರ್ಬಲ್ ಇಂಡಿಯಾ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಚಿತ ವೈದ್ಯಕೀಯ ತಪಸಣಾ ಶಿಬಿರದಲ್ಲಿ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಕುರಿತು ಮಾತನಾಡಿದರು.

    ನಮ್ಮ ಜೀವನ ಶೈಲಿ ಬದಲಾವಣೆಯಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಹಾಗೂ ಬದಲಾದ ಆಹಾರ ಪದ್ದತಿಯಿಂದ ಅನೇಕ ಕಾಯಿಲೆಗಳು ಬರುತ್ತವೆ, ಆದ್ದರಿಂದ ನಮ್ಮ ಪೂವರ್ಾಜ್ಜರಿಂದ ಬದಂತಹ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಸುಂದರ ಜೀವನ ನಡೆಸಬೇಕು ಎಂದು ಹೇಳಿದರು.

   ಯಾಂತ್ರಿಕ ಬದುಕಿನಲ್ಲಿ ದಿನನಿತ್ಯ ಶುದ್ಧ ನೀರಿನ ಕೊರತೆಯಿಂದ ಅನೇಕ ಕಾಯಿಲೆಗಳು ಉಲ್ಬಣಿಸುತ್ತವೆ, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ನಿತ್ಯ ಯೋಗ, ವ್ಯಾಯಾಮ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನ ಶೈಲಿ ಬದಲಾಗುತ್ತದೆ ಎಂದು ಹೇಳಿದರು.

     ಶಿಬಿರದಲ್ಲಿ ಸಂಧಿವಾತ, ಪುರುಷ-ಮಹಿಳೆಯ ಬಂಜೆತನ, ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಬಿ.ಪಿ, ಎದೆ, ಕಾಲು ಉರಿತ, ಕಣ್ಣಿನ ಸಮಸ್ಯೆ, ಮಾನಸಿಕ ಒತ್ತಡದ ಕಾಯಿಲೆಗಳವುಳ್ಳ ನೂರಾರು ಸಂಖ್ಯೆಯಲ್ಲಿ ಜನರು ವೈದ್ಯಕೀಯ ತಪಾಸಣೆ ಮಾಡಿಕೊಂಡರು, ಈ ಸಂದರ್ಭದಲ್ಲಿ ಡಾ. ಸುಧೀರ ಬೆಟಗೇರಿ, ಪ್ರಭು ಪಟ್ಟಣಶೆಟ್ಟಿ, ನಿವೃತ್ತ ಆಯುವರ್ೆದಿಕ ಪ್ರಾಚಾರ್ಯ ಡಾ. ಎಸ್.ಎಸ್.ಡಂಬಳ, ಡಾ. ಸಂಗಮೇಶ ಹೆರೂರ, ಅರವಿಂದ ಉಪಾಧ್ಯಾಯ, ಚಿಂದಬರ ಕುಲಕಣರ್ಿ ಸೇರಿದಂತೆ ಇತರರು ಇದ್ದರು.