ದಿ 17 ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ

 ದಿ 17 ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ Free Diabetes Checkup Camp on the 17th

ಲೋಕದರ್ಶನ ವರದಿ 

ಬೆಳಗಾವಿ 15: ಕೆಎಲ್‌ಇ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್, ಚಿಕ್ಕೋಡಿಯಲ್ಲಿ ದಿ 17ನೇ ಫೆಬ್ರವರಿ ರಂದು ಬೆಳಗ್ಗೆ 10 ರಿಂದ ಸಂಜೆ 04ರವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಅತಿಯಾದ ಬಾಯಾರಿಕೆ, ತೂಕದಲ್ಲಿನ ವ್ಯತ್ಯಾಸ, ಪದೇ ಪದೇ ಮೂತ್ರ ವಿಸರ್ಜನೆ ಇನ್ನಿತರ ಲಕ್ಷಣಗಳಿದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉಚಿತವಾಗಿ ತಪಾಸಿಸಿ ಓಷಧಿಗಳನ್ನು ವಿತರಿಸಲಾಗುವುದು. 

ಶಿಬಿರದಲ್ಲಿ ಆಹಾರ, ವಿಹಾರ ಸಲಹೆ ಯೋಗ ಚಿಕಿತ್ಸೆಯ ಕುರಿತು ಮಾಹಿತಿ ನೀಡಲಾಗುವುದು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.