ಲೋಕದರ್ಶನ ವರದಿ
ಹಳಿಯಾಳ, 19: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸರದಾರ ವಲ್ಲಭಭಾಯಿ ಪಟೇಲ್ ಉದ್ಯಾನವನದಲ್ಲಿ ಮಕ್ಕಳ ಬೇಸಿಗೆ ಶಿಬಿರವು ನಡೆಸಲಾಗುತ್ತಿದೆ.
9 ರಿಂದ 16ನೇ ವಯಸ್ಸಿನ ಮಕ್ಕಳಿಗಾಗಿ ಏರ್ಪಡಿಸಲಾಗಿರುವ ಈ ಉಚಿತ ಶಿಬಿರದಲ್ಲಿ 50 ಮಕ್ಕಳು ಭಾಗವಹಿಸಿದ್ದಾರೆ. ರಜಾದಿನದಲ್ಲಿ ಮೊಬೈಲ್ ಗೀಳನ್ನು ಹಚ್ಚಿಕೊಳ್ಳದೇ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ಉದ್ಯಾನವನದಲ್ಲಿ ಮಕ್ಕಳಿಗೆ ಸಂಗೀತ, ಸಮೂಹನೃತ್ಯ, ಕರಾಟೆ, ಕಥೆಗಳು, ಒಳಾಂಗಣ ಕ್ರೀಡೆಗಳು ಮೊದಲಾದ ಚಟುವಟಿಕೆಗಳಲ್ಲಿ ನಿರತರಾಗುವಂತೆ ಮಾಡಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಲಭವನ ಸೊಸೈಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಶಿಬಿರಕ್ಕೆ ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷ ಮಂಗಲಾ ಕಶೀಲಕರ ಚಾಲನೆ ನೀಡಿದರು. ನ್ಯಾಯವಾದಿ ಮಂಜುನಾಥ ಮಾದರ, ಸಿಡಿಪಿಓ ಅಂಬಿಕಾ ಕಟಕೆ, ಇಲಾಖೆಯ ಮೇಲ್ವಿಚಾರಕಿಯರಾದ ಸುವಣರ್ಾ ಗುರವ, ರಾಜೇಶ್ವರಿ ಗವಿಮಠ, ಅನಸೂಯಾ ರೇಡೆಕರ, ಪತ್ರಕರ್ತರ ಸಂಘದ ವತಿಯಿಂದ ಮಂಜುನಾಥ ಶೇರಖಾನೆ ಉಪಸ್ಥಿತರಿದ್ದರು