ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭ ಪತ್ರಿಕಾರಂಗ: ಆರ್‌.ಪಿ. ನ್ಯಾಮಗೌಡ

ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭ ಪತ್ರಿಕಾರಂಗ: ಆರ್‌.ಪಿ. ನ್ಯಾಮಗೌಡ  Fourth Pillar of Democracy is Press: R.P. Nyamgowda

ಜಮಖಂಡಿ 12: ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿರುವದು ಪತ್ರಿಕಾರಂಗವು ದೇಶದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಮುಖವಾಗಿ ಮಾಧ್ಯಮಗಳ ಮೂಲಕ ಸಮಾಜದಲ್ಲಿನ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತವೆಂದು ರೋಟರಿ ಸಂಸ್ಥೆಯ ಸದಸ್ಯ ಆರ್,ಪಿ,ನ್ಯಾಮಗೌಡ ಹೇಳಿದರು. 

ನಗರದ ಹೊರವಲಯದ ರೋಟರಿ ಸಂಸ್ಥೆಯ ಸಭಾಭವನದಲ್ಲಿ ನಡೆದ ರೋಟರಿ ಸಂಸ್ಥೆಯಿಂದ ಪತ್ರಕರ್ತರು, ವೈದ್ಯರು, ಕಂದಾಯ, ಲೆಕ್ಕಪರಿಶೊಧಕರ ದಿನಾಚರಣೆಯಲ್ಲಿ ಪತ್ರಕರ್ತರಿಗೆ ಸನ್ಮಾನಿಸಿ ಮಾತನಾಡಿದ ಅವರು, ಭಾರತೀಯ ಆಯೋಗವು ಜುಲೈ 1 ರಂದು ಪತ್ರಿಕಾರಂಗವನ್ನು ಜಾರಿಗೆ ತರಲಾಯಿತು. ದೇಶವನ್ನು ನಡೆಸುವಂತ ಐಎಎಸ್ ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿಯಬೇಕಾದರೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಕೊಳ್ಳಲು ಪತ್ರಿಕೆಗಳನ್ನು ಓದಿಕೊಳ್ಳಬೇಕಾಗುತ್ತದೆ. ಪತ್ರಿಕೆಗಳ ಕಾರ್ಯ ಬಹಳ ಮುಖ್ಯವಾಗಿದೆ ಎಂದರು. 

ಇಲೆಕ್ಟ್ರಾನಿಕ್ ಮಿಡಿಯಾಗಳು ಇದ್ದರು ಸಹ. ಪತ್ರಿಕೆಯಲ್ಲಿ ಬರುವ ಸುದ್ದಿಗಳು ನಿಖರವಾಗಿದ ಸುದ್ದಿಗಳು ಎಂದು ತಿಳಿದುಕೊಳ್ಳಬೇಕಾಗುತ್ತದೆ. ಬರಹಗಾರ ಚಿತ್ರಗಾರರು. ಪೋಟೋಗ್ರಾಫರ್‌ಗಳು ತಮ್ಮ ಜೀವದ ಹಂಗು ತೊರೆದು ಸುದ್ದಿಯನ್ನು ಸಂಗ್ರಹ ಮಾಡುತ್ತಾ ಪತ್ರಿಕೆಗಳಲ್ಲಿ ಕೆಲಸವನ್ನು ಮಾಡುತ್ತಾರೆ. ಮೊದಲು ಪತ್ರಿಕೆಗಳು ಸುದ್ದಿಗಳನ್ನು ಮುದ್ರಣ ಮಾಡುವ ಸಮಯದಲ್ಲಿ ಮೊಳೆಗಳಿಯಿಂದ ಮಾಡಲಾಗುತ್ತಿತು. ಅದಕ್ಕಾಗಿ ಮೊಳೆಗಳನ್ನು ಭಾರವಾಗಿ ಒತ್ತುವದಕ್ಕೆ ಪ್ರೇಸ್ ಎನ್ನುತ್ತಿದರು. ಇಂದಿನದಿನಮಾನದಲ್ಲಿ ಎಲ್ಲರೂ ಪ್ರೇಸ್ ಎಂದು ಕರೆಯಲಾಗುತ್ತದೆ ಎಂದರು. 

ಡಾ,ಟಿ,ಪಿ,ಗಿರಡ್ಡಿ ಮಾತನಾಡಿ, ಪತ್ರಕರ್ತರು ಸುದ್ದಿಯನ್ನು ಸಂಗ್ರಹಿಸಿ ಮಾಹಿತಿಯನ್ನು ಸಂಗ್ರಹ ಮಾಡುವದು, ಸಂದರ್ಶನ ಮಾಡುವದು, ಕಣ್ಣು ಮುಂದೆ ನಡೆಯುವದನ್ನು ನೋಡಿ ತಿಳಿದುಕೊಳ್ಳಬೇಕು ಸುದ್ದಿಯನ್ನು ಮಾಡುವ ಪತ್ರಕರ್ತರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ. ದೇಶದ ಆಡಳಿತ ವರ್ಗದಲ್ಲಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಹೀಗೆ ಹಲವಾರು ವಿವಿಧ ಭಾಷೆಗಳು ಇವೆ. ಸ್ಥಳೀಯ ಭಾಷೆಗೆ ಅನುಗುಣವಾಗಿ ಸುದ್ದಿ ತಿಳಿಸಲು ಪತ್ರಕರ್ತರಿಗೆ ಭಾಷಾಂತಕಾರ ಪತ್ರಕರ್ತರಾಗಿರುತ್ತಾರೆ. ಮೊದಲು ಪತ್ರಿಕೆಯು ಹುಟ್ಟಿದು ಮಂಗಳೂರು ಪತ್ರಿಕೆಯು 1843 ರಲ್ಲಿ ಆರಂಭಗೊಂಡಿತು.  ಒಂದನೇ ಹಂತದಲ್ಲಿ ಶೇಷವಾ ವ್ಯವಸ್ಥೆ ಪ್ರಾರಂಭವಾಯಿತು. ಶೇಷವಾವ್ಯವಸ್ಥೆಯಲ್ಲಿ ಮಳೆಗಳನ್ನು ಜೊಡಿಸಿ ಸುದ್ದಿಯನ್ನು ಪ್ರಕಟಿಸುವ ಕೆಲಸ ಮಾಡಲಾಗುತ್ತಿತು ಅದು ಬಹಳ ಕಠಿಣದ ವ್ಯವಸ್ಥೆ ಆಗಿತ್ತು. ಎರಡನೇ ಹಂತ ಪ್ರಾರಂಭವಾಯಿತು ಅದು ಅಭಿವೃದ್ಧಿ ಹಂತ, ಅದು ಪತ್ರಕರ್ತರಿಗೆ ರಕ್ಷಣೆ ಮತ್ತು ಕಾನೂನು ಹೀಗೆ ಹಲವಾರು ರೀತಿಯಿಂದ ಅಭಿವೃದ್ಧಿ ಹಂತವನ್ನು ತಲುಪಿತು. ಮೂರನೇ ಹಂತ ಇಂದಿನ ದಿನಮಾನದಲ್ಲಿ ನಡೆಯುವ ಹಂತವೇ ಮೂರನೇ ಹಂತವಾಗಿದೆ ಎಂದರು. 

ಪತ್ರಕರ್ತರು ಕಠಿಣವಾದ ಸುದ್ದಿಗಳು, ರಾಜಕೀಯ ಸುದ್ದಿಗಳು, ಕ್ರೈಂ ಸುದ್ದಿಗಳು, ಅತೀ ಕಠಿಣವಾದ ಸುದ್ದಿಗಳು, ಮೃದು ಸುದ್ದಿಗಳು, ಆಸಕ್ತಿ ಸುದ್ದಿಗಳು, ತನಿಖಾ ಸುದ್ದಿಗಳು, ಭ್ರಷ್ಟಾಚಾರ ವರದಿಗಳು, ವೈಶಿಷ್ಟ್ಯತೆಯ ವರದಿಗಳು, ಅಭಿಪ್ರಾಯದ ವರದಿಗಳು, ವಿಷೇಶ ವರದಿಗಳು, ವ್ಯಾಪಾರ, ಕ್ರೀಡೆ, ಆಡಳಿತ ಪಕ್ಷ, ವಿರೋಧ ಪಕ್ಷಗಳ ಸುದ್ದಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ಪತ್ರಿಕಾರಂಗವು ಚಲಿಸುವ ಮಹಾವಿದ್ಯಾಲಯಗಳಾಗಿ ಕೆಲಸ ನಿರ್ವಹಿಸುತ್ತವೆ. ಸಮಾಜದ ಕಣ್ಣು ಮತ್ತು ಕಿವಿಯಾಗಿ ಕೆಲಸವನ್ನು ಪತ್ರಕರ್ತರು ಮಾಡಬೇಕಾಗುತ್ತದೆ ಎಂದರು. 

ಪತ್ರಕರ್ತರಾದ ಶಶಿಕಾಂತ ತೇರದಾಳ, ಲಕ್ಷ್ಮೀಕಾಂತ ದುಂದಗಿ, ರವಿ ದೊಡಮನಿ, ಮಲ್ಲೇಶ ಆಲಗಿ, ಯಶವಂತ ಕಲೂತಿ ಅವರಿಗೆ ಪತ್ರಿಕಾ ದಿನಾಚರಣೆಯಲ್ಲಿ ರೋಟರಿ ಸಂಸ್ಥೆಯವರು ಸನ್ಮಾನಿ. ಗೌರವಿಸಿದರು. 

ಲೆಕ್ಕಪರಿಶೋಧಕ ದೀಪಕ ಡಾಗಾ, ನಂದನ ಭೂತಡಾ, ವೈಶಾಲಿ ಭೂತಡಾ, ಕಂದಾಯ ಇಲಾಕೆ ಬಸವರಾಜ ತಾಳಿಕೋಟಿ ಅವರಿಗೆ ಸನ್ಮಾನಿಸಿದರು. 

ವೈದ್ಯರಾದ ಪಂಚಾಕ್ಷರಿ ಪಾಟೀಲ, ಡಾ,ಆರ್,ವಿ, ಮೆಟ್ಟಗುಡ್ಡ, ಡಾ,ಎ,ಆರ್, ದೇವರಡ್ಡಿ, ಡಾ,ಕೆ,ಆಯ್, ಗುರಮಟ್ಟ, ಡಾ,ಚಿನ್ನಪ್ಪ ಕೊಕಟನೂರ, ಡಾ,ನವೀನ ಮಾಳಗಿ, ಡಾ,ಜಿ,ಎನ್,ಸನದಿ, ಡಾ,ಮಾಳೇಶ ಪೂಜಾರಿ ಅವರಿಗೆ ಹೂ ಗುಚ್ಚವನ್ನು ನೀಡಿ ಸನ್ಮಾನಿಸಿದರು. 

ವೇದಿಕೆಯಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ ಕೋವಳಿ, ಕಾರ್ಯದರ್ಶಿ ಎಮ್,ಎಚ್, ಕಡ್ಲಿಮಟ್ಟಿ ಇದ್ದರು. ಸಂತೋಷ ಹಿರೇಮಠ, ಬಸವರಾಜ ಆಲಗೂರ ಸ್ವಾಗತಿಸಿದರು.