ರಾಜಾಸೀಟು ಉದ್ಯಾನವನದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನ: ಜಿಲ್ಲಾಧಿಕಾರಿ

ಮಡಿಕೇರಿ, ಫೆ.6 :   ಪ್ರವಾಸಿಗರ ಸ್ವರ್ಗವೆಂದೇ ಹೆಸರಾದ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಶುಕ್ರವಾರದಿಂದ ಫೆಬ್ರವರಿ 10ರ ವರೆಗೆ ವಾಷಿ೯ಕ ಫಲಪುಷ್ಪ ಪ್ರದರ್ಶನ ಆಯೋಜಿತವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ತಿಳಿಸಿದ್ದಾರೆ.

 ಫಲಪುಪ್ಪ ಪ್ರದಶ೯ನಕ್ಕಾಗಿ ಈಗಾಗಲೇ ರಾಜಾಸೀಟ್  ಉದ್ಯಾನದಲ್ಲಿ ವಿವಿಧ ಬಗೆಯ ಹೂವುಗಳನ್ನು ನೂರಾರು ಹೂಕುಂಡಗಳಲ್ಲಿ ಇರಿಸಲಾಗಿದ್ದು. ಸಾವಿರಾರು ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ.  ಬಣ್ಣ ಬಣ್ಣದ ಹೂವಿನಿಂದ ಅಲಂಕೃತವಾಗುವ ವಿವಿಧ ಪ್ರಾಣಿ ಪಕ್ಷಿಗಳ ಕಲಾಕೃತಿಗಳು ಕೂಡ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯಲಿದೆ. ಕೊಡಗಿನ ಸಂಸ್ಕೃತಿ, ಸ್ಥಳೀಯ ಪರಂಪರೆ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಪ್ರವಾಸಿಗರಿಗೆ ಮಾಹಿತಿಗಳು ದೊರಕಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಮುಖ್ಯ ಆಕರ್ಷಣೆಯಾಗಿ ಕೊಡಗಿನ ಸಾಂಪ್ರದಾಯಿಕ ಆನ್ ಮನೆಯನ್ನು ವಿವಿಧ ಹೂವುಗಳಿಂದ ರೂಪಿಸಲಾಗಿದೆ. ಕಲಾಕೃತಿಗಳ ಜೊತೆಯಲ್ಲಿ ಜನರು ಫೋಟೋ ತೆಗೆದುಕೊಳ್ಳುವಂತೆ ಸೆಲ್ಪಿ ಫೋಟೋ ಪ್ರೇಮ್ ಅನ್ನು ನಿಮಿ೯ಸಲಾಗುತ್ತಿದೆ. ಪ್ರದರ್ಶನಕ್ಕೆ ಒಟ್ಟಾರೆ  ಸುಮಾರು 20 ಲಕ್ಷ ರೂ. ವೆಚ್ಚವಾಗಲಿದೆ ಎಂದು  ಅವರು ಮಾಹಿತಿ ನೀಡಿದ್ದಾರೆ.