ಯುವತಿಯ ಅಶ್ಲೀಲ ಫೋಟೋ ಕಳುಹಿಸಿದ ಮಾಜಿ ಪ್ರಿಯಕರ: ಆರೋಪಿಗಾಗಿ ಬಲೆ ಬೀಸಿದ ಪೊಲೀಸರು

ಬೆಂಗಳೂರು,ಜ.28 :      ಮಾಜಿ  ಪ್ರಿಯಕರ ನನ್ನ ಖಾಸಗಿ ಫೋಟೋಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ ಬ್ಲಾಕ್‌ಮೇಲ್  ಮಾಡುತ್ತಿದ್ದಾನೆ ಎಂದು ಆರೋಪಿಸಿ ಕೊಲ್ಕತ್ತಾ ಮೂಲದ ಯುವತಿಯೊಬ್ಬಳು ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಸಂತ್ರಸ್ತೆ ಯುವತಿ ಹಾಗೂ ಆರೋಪಿ ಮಾಜಿ ಪ್ರಿಯಕರ ಸ್ಟಾಲೋನ್  ವುಡ್ ಇಬ್ಬರೂ ಪ್ರೀತಿಸುತ್ತಿದ್ದರು. ಕಳೆದ ಎರಡು  ವರ್ಷಗಳಿಂದ ಕೊಲ್ಕತ್ತಾದ ರೆಸ್ಟೊರೆಂಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿಗೆ  ಫೇಸ್‌ಬುಕ್ ಮೂಲಕ ಸ್ಟಾಲೋನ್ ವುಡ್ ಪರಿಯಚವಾಗಿತ್ತು. ಪರಿಚಯ ಸ್ನೇಹವಾಗಿ ಇಬ್ಬರು  ಪ್ರೀತಿಸುತ್ತಿದ್ದನು. ಇಬ್ಬರೂ ಸಹ ಚಾಟಿಂಗ್-ಡೇಟಿಂಗ್ ಎಂದು ಕಾಲ ಕಳೆದಿದ್ದರು.

ಸ್ಟಾಲೋನ್  ವುಡ್ ನಗ್ನ ಫೋಟೋಗಳನ್ನು ಕಳಿಸುವಂತೆ ಯುವತಿಯಲ್ಲಿ ಕೇಳಿಕೊಂಡಿದ್ದ.  ಯುವತಿ ಹಿಂದೆ ಮುಂದೆ ನೋಡದೆ ತನ್ನ ಖಾಸಗಿ ಫೋಟೋಗಳನ್ನು  ಕಳುಹಿಸಿದ್ದಾಳೆ.ಇದಲ್ಲದೇ ಕೊಲ್ಕತ್ತಾದಲ್ಲಿ ಜೊತೆಯಲ್ಲಿ ಇರುವ ವೇಳೆ ಯುವತಿಯ ಅಶ್ಲೀಲ  ಫೋಟೋಗಳನ್ನು ಆರೋಪಿ ಕ್ಲಿಕ್ಕಿಸಿಕೊಂಡಿದ್ದನು. 

ಇತ್ತೀಚೆಗೆ ಯುವತಿ ಕೆಲಸ ಅರಸಿ  ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದಾಳೆ. ಈ ವೇಳೆ ಆರೋಪಿಯ ಜೊತೆ ಜಗಳವಾಗಿ ಪ್ರೀತಿ ಮುರಿದು ಬಿದ್ದಿದೆ. ಇದರಿಂದ ಹತಾಶಗೊಂಡ ಸ್ಟಲೋನ್, ಯುವತಿಯ ಖಾಸಗಿ ಫೋಟೋಗಳನ್ನು ಶೇರ್ ಮಾಡುವುದಾಗಿ  ಬ್ಲಾಕ್ ಮಾಡಿದ್ದಾನೆ. ಕೊನೆಗೆ ಯುವತಿಯ ಖಾಸಗಿ ಫೋಟೋಗಳನ್ನು ತನ್ನ ಮೇಲಾಧಿಕಾರಿ ಇಕ್ಬಾಲ್  ಹಾಗೂ ವ್ಯವಸ್ಥಾಪಕ ನಿರ್ದೇಶಕ ಅರಿಂದಮ್ ಸರ್ಕಾರ್ ಎಂಬವರಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದಾನೆ.

ಇತ್ತ ಯುವತಿಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು.  ಆರೋಪಿಯ ಬಾಸ್ ಇಕ್ಬಾಲ್ ಯುವತಿಯ ಫೋಟೋವನ್ನು ನಿಶ್ಚಯವಾಗಿದ್ದ ಹುಡುಗನಿಗೆ ಶೇರ್  ಮಾಡಿದ್ದಾನೆ. ಹುಡುಗ ತನಗೆ ಬಂದ ಫೋಟೋ ನೋಡಿ ಮದುವೆ ರದ್ದು ಮಾಡಿದ್ದಾನೆ. 

ಇದರಿಂದ ಯುವತಿ ತನ್ನ ಹಳೆಯ ಪ್ರಿಯಕರನ ವಿರುದ್ಧ ದೂರು ನೀಡಿ, ಆತನಿಗೆ ಶಿಕ್ಷೆ ನೀಡುವಂತೆ ದೂರಿನಲ್ಲಿ ಒತ್ತಾಯಿಸಿದ್ದಾಳೆ.