ಮಾಜಿ ಶಾಸಕ ಸೈಯದ್ ಅಜ್ಜಂಪಿರ್ ಖಾದ್ರಿ ಹುಟ್ಟು ಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
Former MLA Syed Ajjampir Qadri's birthday: Fruits and sweets distributed to patients
ಶಿಗ್ಗಾವಿ 02 : ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪಿರ್ ಖಾದ್ರಿ ಅವರ 61ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಹಜರತ್ ಅಲಿ ಚೂಡಿಗಾರ ಮಾತನಾಡಿ ಅವರು ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪಿರ್ ಖಾದ್ರಿಯವರು ಜಾತ್ಯತೀತ ನಾಯಕರು, ಕ್ಷೇತ್ರದ ಎಲ್ಲ ವರ್ಗದ ಜನರ ಆಶಾಕಿರಣವೂ ಆಗಿರುವ ನಮ್ಮ ನಾಯಕರಿಗೆ ಆ ದೇವರು ಹೆಚ್ಚಿನ ಆರೋಗ್ಯ ಭಾಗ್ಯವನ್ನು, ಇನ್ನೂ ಹೆಚ್ಚಿನ ರಾಜಕೀಯ ಸ್ಥಾನ ಮಾನಗಳು ಲಭಿಸಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ರಹಿಂ ಮಲ್ಲೂರ, ರಫೀಕ ನಧಾಫ್, ಶಾರುಖ್ ಚಪದಾರ, ಹಜರೆಸಾಬ್ ಕೌತಾಳ, ರವಿ ಕೋಣಪ್ಪನವರ, ಶಂಕರಗೌಡ ಪಾಟೀಲ್ ಮಹ್ಮದ ಗೌಸ್ ತೋಖಲ್ಲಿ, ಸಾಧಿಕ್ ಸಂಶಿ, ಕೃಷ್ಣಾ ಮುಳೆ, ಗೌಸ್ ಅಗಸನಮಮಟ್ಟಿ, ಮಾಲಿಂಗಪ್ಪ ಕುಂಬಾರ, ಮಂಜುನಾಥ ಕಂಕನವಾಡ, ಗಣೇಶ ಮಲಸಾಲಿ, ಮನ್ಸುಲ್ ಯಲ್ಲಾಪೂರ ಸೇರಿದಂತೆ ಖಾದ್ರಿಯವರ ಅಭಿಮಾನಿ ಬಳಗದವರು ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 