ಬೆಳಗಾವಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಬೈಲಹೊಂಗಲ ತಾಲೂಕು ಘಟಕ ರಚನೆ
Formation of the Bailhongal Taluk Unit of the Belagavi District Physical Education Teachers' Associa
ಬೆಳಗಾವಿ 30: ಬೈಲಹೊಂಗಲ ನಗರದ ಶಾಸಕ ಮಾದರಿ ಶಾಲೆ ನಂ. 4ರಲ್ಲಿ ಬೆಳಗಾವಿ ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಎಸ್‌ಎಸ್‌ಎಲ್‌ಸಿ ಬೈಲಹೊಂಗಲ ತಾಲೂಕು ಘಟಕದ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಂಘದ ಅಭಿವೃದ್ಧಿ, ಶಿಕ್ಷಕರ ಹಿತಾಸಕ್ತಿ, ಕ್ರೀಡಾ ಚಟುವಟಿಕೆಗಳ ಉತ್ತೇಜನ, ಶಾಲಾ ಮಟ್ಟದ ಕ್ರೀಡಾಕೂಟಗಳ ಯಶಸ್ವಿ ಆಯೋಜನೆ ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಸಂಘದ ಬೈಲಹೊಂಗಲ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ಅಭಿನಂದಿಸಿ, ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷ ಡಿ. ಎನ್. ಹಲಕಿ ಅವರ ಅಧ್ಯಕ್ಷತೆಯಲ್ಲಿ ಬೈಲಹೊಂಗಲ ತಾಲೂಕು ಘಟಕವನ್ನು ಅಧಿಕೃತವಾಗಿ ರಚಿಸಲಾಯಿತು.
ನೂತನ ಪದಾಧಿಕಾರಿಗಳು: ಗೌರವಾಧ್ಯಕ್ಷ ಹಿ ಮಹಾಂತೇಶ ಬಿ. ಮುರುಗೋಡ, ಅಧ್ಯಕ್ಷ ಹಿ ಜಿ. ಎಸ್. ಖನಗೌಡರ, ಉಪಾಧ್ಯಕ್ಷೆ ಹಿ ಎಸ್. ಎಂ. ಹುಬ್ಬಳ್ಳಿ , ಪ್ರಧಾನ ಕಾರ್ಯದರ್ಶಿ ಹಿ ಬಿ. ಎಸ್. ಜಕಾತಿ, ಖಜಾಂಚಿ ಹಿ ಎ. ಎಸ್. ಬಸರಿಕಟ್ಟಿ ಸಹ ಕಾರ್ಯದರ್ಶಿ ಹಿ ಎ. ಆರ್. ಸುಂಕದ, ಸಂಘಟನಾ ಕಾರ್ಯದರ್ಶಿ ಹಿ ಎಸ್. ಎ. ಪೆಂಡಾರಿ , ಮಹಿಳಾ ಕಾರ್ಯದರ್ಶಿ ಹಿ ಎಂ. ಕೆ. ಮುದವಮ್ಮನಗೇರಿ ನಿರ್ದೇಶಕರು: ಎಸ್. ಜಿ. ಹಿರೇಮಠ, ಎಸ್. ಎಸ್. ತಳವಾರ, ಆರ್. ಎಸ್. ರಾಹುತಣ್ಣವರ, ಎಂ. ಪಿ. ಕುರಿ, ಎಸ್. ಡಿ. ಲಮಾಣಿ ಹಾಗೂ ಬಿ. ವೈ. ಶಿಂತ್ರಿ. ಸಭೆಯಲ್ಲಿ ಸಂಘದ ಹಿರಿಯರು, ಪದಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 