ಬೀಜಿಂಗ್, ಜ 24 : ಚೀನಾದ ವುಹಾನ್ ಪ್ರಾಂತ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ನಿಯಂತ್ರಿಸಲು ಹಾಗೂ ತಡೆಗಟ್ಟಲು 14 ತಜ್ಞರನ್ನು ಒಳಗೊಂಡ ರಾಷ್ಟ್ರೀಯ ಸಂಶೋಧನಾ ತಂಡವನ್ನು ರಚಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.
ತುರ್ತು ವೈಜ್ಞಾನಿಕ ಯೋಜನೆಯ ಭಾಗವಾಗಿರುವ ವೈರಸ್ ನಿಗ್ರಹ ಸಂಶೋಧನಾ ತಂಡವನ್ನು ರಾಷ್ಟ್ರೀಯ ಆರೋಗ್ಯ ಆಯೋಗ ಮತ್ತು ಇತರ ವಿಭಾಗಗಳ ಸಹಯೋಗದೊಂದಿಗೆ ಜಂಟಿಯಾಗಿ ರೂಪಿಸಲಾಗಿದೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿಮಾಡಿದೆ.
ಈ ಯೋಜನೆಯು ಸೋಂಕು ಪತ್ತೆ, ಹರಡುವಿಕೆ, ಪತ್ತೆ ವಿಧಾನಗಳು, ಜೀನೋಮ್ ವಿಕಸನ ಮತ್ತು ಲಸಿಕೆ ಅಭಿವೃದ್ಧಿ ಸೇರಿದಂತೆ 10 ಸಂಶೋಧನಾ ಅಂಶಗಳ ಕುರಿತು ವೈಜ್ಞಾನಿಕ ಅಂಶಗಳಬಗ್ಗೆ ಗಮನಹರಿಸಲಿದೆ.
ಉಸಿರಾಟದ ವಿಜ್ಞಾನಿ ಝೋನಾಂಗ್ ನನ್ಶಾನ್ ಅವರನ್ನು ಸಂಶೋಧನಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಚೀನೀ ಅಕಾಡೆಮಿ ಆಫ್ ಎಂಜಿನಿಯರಿಂಗ್‌ನ ಶಿಕ್ಷಣ ತಜ್ಞರಾಗಿರುವ ನನ್ಶಾನ್ 2003ರಲ್ಲಿ ಚೀನಾದಲ್ಲಿ ಏಕಾಏಕಿ ಎದುರಾದ ತೀವ್ರ ಉಸಿರಾಟದ ಸಿಂಡ್ರೋಮ್ (ಎಸ್‌ಎ ಆರ್ ) ವಿರುದ್ದದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.