ಅರಣ್ಯ ಸಂರಕ್ಷಣೆ ದೇಶದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯ: ಉಪಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ

ಗದಗ 18: ನಮ್ಮ ಜೀವನಕ್ಕೆ ಅತ್ಯವಶ್ಯಕವಾದ ಗಾಳಿ ಮತ್ತು ನೀರು ಸಂರಕ್ಷಣೆ ಹಾಗೂ ನಮ್ಮ ಉಳಿವಿಗೆ ಅಗತ್ಯವಾದ ಅರಣ್ಯ ಸಂರಕ್ಷಣೆ ದೇಶದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯವಾಗಿ ರಾಜನೀತಿ ನಿರ್ದೇಶನ ತತ್ವ ರೂಪದಲ್ಲಿ ಜಾರಿ ಮಾಡಲಾಗಿದೆ. ನಮ್ಮ ಕರ್ತವ್ಯವನ್ನು ನಿಭಾಯಿಸಲು ನಾವು ಸಿದ್ಧರಾಗಬೇಕಾದ ಸ್ಥಿತಿ ಇಂದು ಬಂದಿದೆ ಎಂದು ಗದಗ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ ನುಡಿದರು.

ಮಾಧ್ಯಮ ಪ್ರತಿನಿಧಿಗಳಿಗೆ ಅರಣ್ಯ ಇಲಾಖೆಯಿಂದ ಏರ್ಪಡಿಸಲಾದ ವನದರ್ಶನ ಪ್ರವಾಸ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿ ಅರಣ್ಯ ಇಲಾಖೆಯು ಬ್ರಿಟಿಷರ ಕಾಲದಿಂದ ಅಸ್ತಿತ್ವ್ವಕ್ಕೆ ಬಂದ ರೀತಿ ಅರಣ್ಯ ಹಾಗೂ ಪರಿಸರ ಕುರಿತಾಗಿ ದೇಶದ ಸಂವಿಧಾನದಲ್ಲಿ ಕಾಯ್ದೆ ನಿರ್ದೇಶನಗಳ ರೂಪದಲ್ಲಿ ಜಾರಿಗೊಂಡಿರುವ ಸಮಗ್ರ ಮಾಹಿತಿಯನ್ನು ಅವರು ತಿಳಿಸಿದರು.

1884ರಲ್ಲಿ ಭಾರತದಲ್ಲಿ ಮೊದಲ ಅರಣ್ಯ ನೀತಿ ಬ್ರಿಟಿಷರು ಅಳವಡಿಸಿದರು. ಸ್ವಾತಂತ್ರ್ಯಾನಂತರ 1958ರಲ್ಲಿ ದೇಶದ ಅರಣ್ಯನೀತಿ ಜಾರಿಗೊಳಿಸಲಾಯಿತು. ಇವೆರಡರ ಮುಖ್ಯ ಉದ್ದೇಶ ಅಭಿವೃದ್ಧಿಗಾಗಿ ಅರಣ್ಯ ಕಡಿಯುವುದರ ಹಾಗೂ ಅದಕ್ಕೆ ಸಮನಾಂತರ ಅರಣ್ಯ ಬೆಳೆಸುವಿಕೆಗೆ ಹೆಚ್ಚಿನ ಒತ್ತು ನೀಡಲಾಯಿತು. ಕಾಲ ಕಳೆದಂತೆ ಅರಣ್ಯ ನಾಶ, ಪರಿಸರ ಮಾಲಿನ್ಯದಿಂದ ಮಾನವನ ಅಳಿವು ಉಳಿವಿನ ಪ್ರಶ್ನೆಗಳ ಜಾಗತಿಕವಾಗಿ ಚರ್ಚೆಯಾದ ಸಂದರ್ಭದಲ್ಲಿ 1992ರಲ್ಲಿ ಮೊದಲ ಭೂಮಿ ಶಿಖರ ಬ್ರೇಜಿಲ್ನ ರಿಯೋ ಡಿ ಜನೈರೊದಲ್ಲಿ ಆದ ನಂತರ ಸಾರ್ವಜನಿಕ ಸಹಭಾಗಿತ್ವದಲ್ಲಿ ಅರಣ್ಯ ಬೆಳೆಸುವಿಕೆ ಕುರಿತಂತೆ ದೇಶದಲ್ಲಿ ಗ್ರಾಮ ಅರಣ್ಯ ಸಮಿತಿಗಳ ರಚನೆ ಅವುಗಳ ಮೂಲಕ ಅರಣ್ಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 

1980ರಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆ ನಂತರ 1988, 1992ರ ತಿದ್ದುಪಡಿ ಮೂಲಕ ಅರಣ್ಯ ನಾಶ ತಡೆಗೆ ಜಮೀನನ್ನು ಅರಣ್ಯೇತರವಾಗಿ ಬದಲಾಯಿಸಲು ಇರುವ ಅಧಿಕಾರ ಕೇಂದ್ರ ಸರ್ಕಾರದ ಸುಪದರ್ಿಗೆ ತರಲಾಯಿತು. ಇದಕ್ಕೂ ಮುನ್ನ 1972 ರಲ್ಲಿ ವನ್ಯ ಜೀವ ಸಂರಕ್ಷಣೆ ಕಾಯ್ದೆ ಮೂಲಕ ದೇಶದ ಎಲ್ಲಾ ಕಾಡು ಪ್ರಾಣಿ, ಪಕ್ಷಿ, ಮರಗಳನ್ನು ಸಂರಕ್ಷಣೆ ವ್ಯವಸ್ಥೆಗೆ ತರಲಾಯಿತು ಎಂದು ತಿಳಿಸಿದ ಸೂರ್ಯಸೇನ ನಮ್ಮೆಲ್ಲರ ಉಳಿವಿಗಾಗಿ ನಾವು ಭಾರತದ ಸಂವಿಧಾನಾತ್ಮಕ ಅರಣ್ಯ ಸಂರಕ್ಷಣೆಯ ಮೂಲಭೂತ ಕರ್ತವ್ಯವನ್ನು ಕಡ್ಡಾಯವಾಗಿ ಆಚರಣೆಯಲ್ಲಿ ತರಬೇಕಾಗಿದೆ.

ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅರಣ್ಯ ಪರಿಸರಕ್ಕೆ ಸಂಬಂಧಿತ ಹಲವಾರು ವಿಷಯಗಳ ಕುರಿತು ಮಾಧ್ಯಮಗಳ ಪಾತ್ರ ಬಹು ಮಹತ್ವದ್ದಾಗಿದೆ. ಅರಣ್ಯ, ವನ್ಯ ಜೀವಿ, ಗಾಳಿ, ನೀರು ಸಂರಕ್ಷಣೆ ಕುರಿತು ಮಾಧ್ಯಮಗಳ ವರದಿಗಳೇ ದೇಶದ ಸವರ್ೋಚ್ಛ ನ್ಯಾಯಾಲಯದ ಮಹತ್ವದ ತೀಪರ್ುಗಳಿಗೆ ಆಧಾರವಾಗಿರುವುದನ್ನು ನಾವು ಕಾಣಬಹುದಾಗಿದೆ. ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳ ಅರಣ್ಯ ಪರಿಸರ ಸಂರಕ್ಷಣೆ ಜವಾಬ್ದಾರಿ ಸಾರ್ವಜನಿಕರ ಧ್ವನಿಯಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ ಈ ಕುರಿತು ಸಮಗ್ರ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳು ಹೊಂದಿರಬೇಕು ಎಂದು ಗದಗ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ನುಡಿದರು.

ಗದಗ ಮೃಗಾಲಯ ಕುರಿತು ಮಾಹಿತಿ ನೀಡಿದ ಮೃಗಾಲಯ ಅಧಿಕಾರಿ ಮಹಾಂತೇಶ ಪೆಟ್ಲೂರ್ 1972 ರಲ್ಲಿ ಪ್ರಾರಂಭದಲ್ಲಿ ಗದಗ ಮೃಗಾಲಯ ಈಗ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು 35 ಪ್ರಭೇದದ 200 ಕ್ಕೂ ಹೆಚ್ಚಿನ ಪ್ರಾಣಿ, ಪಕ್ಷಿಗಳು ಇಲ್ಲಿವೆ. ಮೃಗಾಲಯ ಮುಂದಿನ ಹತ್ತು ವರ್ಷಗಳ ಬೆಳವಣಿಗೆಯ ಯೋಜನೆ ಸಿದ್ಧಗೊಂಡಿದ್ದು 101 ಪ್ರಭೇದದ ಪ್ರಾಣಿಗಳನ್ನು ಗದಗ ಮೃಗಾಲಯ ಹೊಂದಿದೆ. ಸಿಂಹ, ಕತ್ತೆ, ಕಿರುಬ ಹಾಗೂ ಇನ್ನೊಂದು ಜಿರತಾಲಯಗಳನ್ನು ನಿಮರ್ಿಸಲಾಗುತ್ತಿದೆ ಎಂದು ತಿಳಿಸಿದರು. 

ವಲಯ ಅರಣ್ಯಾಧಿಕಾರಿ ಕಿರಣ ಅಂಗಡಿ ಹಾಗೂ ವಾತರ್ಾ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಇದ್ದರು. ತದನಂತರ ಮಾಧ್ಯಮ ಪ್ರತಿನಿಧಿಗಳಿಗಾಗಿ ಅರಣ್ಯ ಇಲಾಖೆಯು ಭೀಷ್ಮ ಕೆರೆ, ಕಪ್ಪತ್ತಗುಡ್ಡ ಹಾಗೂ ಮಾಗಡಿ ಕೆರೆ ವನದರ್ಶನ ಪ್ರವಾಸ ಏರ್ಪಡಿಸಿತ್ತು.