ಅರಣ್ಯ ಭೂಮಿ ಹಕ್ಕು ಮಾನ್ಯತೆ ವಿವಾದ : ತಿರಸ್ಕರಿಸಿದ ಅರ್ಜಿಗಳ ಮರುಪರೀಶೀಲನೆಗೆ ಮುಖ್ಯಕಾರ್ಯದರ್ಶಿ ಯಿಂದ ನಿರ್ದೆಶನ
Forest land rights recognition dispute: Chief Secretary directs for re-examination of rejected appli
ಅರಣ್ಯ ಭೂಮಿ ಹಕ್ಕು ಮಾನ್ಯತೆ ವಿವಾದ : ತಿರಸ್ಕರಿಸಿದ ಅರ್ಜಿಗಳ ಮರುಪರೀಶೀಲನೆಗೆ ಮುಖ್ಯಕಾರ್ಯದರ್ಶಿ ಯಿಂದ ನಿರ್ದೆಶನ
ಕಾರವಾರ 11: ಉತ್ತರ ಕನ್ನಡ ಜಿಲ್ಲೆಯಲ್ಲಿ ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡವರ ಬಗರ ಹುಕುಂ ಸಾಗುವಳಿಯ ಸಮಸ್ಯೆಗೆ ಈಗ ಒಂದು ಹೊಸ ಆಯಾಮ ದೊರೆತಂತಾಗಿದೆ. ಒತ್ತುವರಿ ಸ್ಥಳಗಳ ಮಹಜರು ಪತ್ರ ಪೂರೈಸಲು ಕ್ರಮ ವಹಿಸಲು ಸೂಚಿಸಿದೆ. ಹಾಗೂ ವಿಚಾರಣಾ ವರದಿ ಸಲ್ಲಿಸಲು ಮುಖ್ಯಕಾರ್ಯದರ್ಶಿಗಳು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದಾರೆ. ಈ ಸಂಬಂಧ ಚಂದ್ರಕಾಂತ ಕೊಚರೇಕರ ನೇತೃತ್ವದ ಹೋರಾಟ ಸಮಿತಿಯ ನಿಯೋಗ ಇಂದು ರಾಜ್ಯದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ ಅವರನ್ನು ಭೇಟಿ ಮಾಡಿ ಅಭಿನಂದಿಸಿತಲ್ಲದೇ ಅರಣ್ಯ ಹಕ್ಕು ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ಕೆಲವು ಲೋಪ ದೋಷಗಳನ್ನು ನಿವಾರಿಸಲುಮುಖ್ಯಕಾರ್ಯದರ್ಶಿಗಳಿಗೆ ಮನವಿಮಾಡಿದೆ. ರಾಜ್ಯದಲ್ಲಿ ಅರಣ್ಯ ಹಕ್ಕುಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ವಿವಿದ ರಚನಾತ್ಮಕ ಸಲಹೆಗಳನ್ನು ಮಂಡಿಸಿ ಜಿಲ್ಲೆಯ ಅರಣ್ಯ ಭೂಮಿಸಾಗುವಳಿದಾರರ ಹಿತರಕ್ಷಣೆ ಮಾಡುವಂತೆ ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಮನವಿ ಮಾಡಿದ ಚಂದ್ರಕಾಂತ ಕೊಚರೇಕರ ನೇತೃತ್ವದ ಉತ್ತರಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ನಿಯೋಗ ನೀಡಿರುವ ಕೆಲವು ರಚನಾತ್ಮಕ ಸಲಹೆಗಳನ್ನು ಮತ್ತು ಬೇಡಿಕೆಗಳ ಕುರಿತು ರಾಜ್ಯದ ಮುಖ್ಯಕಾರ್ಯದರ್ಶಿಗಳು ಉನ್ನತಾಧಿಕಾರಿಗಳ ಸಭೆ ನಡೆಸಿ ಅರಣ್ಯ ಭೂಮಿಸಾಗುವಳಿದಾರರ ಹಿತರಕ್ಷಣೆಗೆ ಪೂರಕವಾದ ನಿರ್ಣಯ ತೆಗೆದುಕೊಂಡಿರುವದನ್ನು ಹೋರಾಟ ಸಮಿತಿ ಸ್ವಾಗತಿಸಿದೆ. ಈ ಮಹತ್ವದ ನಿರ್ಧಾರದಿಂದ ಜಿಲ್ಲೆಯ 73000 ಕ್ಲೇಮು ಅರ್ಜಿಗಳ ಅರಣ್ಯ ಹಕ್ಕು ವಿಚಾರಣಾ ಪ್ರಕ್ರಿಯೆ ಪೂರ್ಣ ಗೊಳ್ಳಲು ಹೆಚ್ಚಿನ ಸಮಯ ತಗಲಬಹುದಾದರೂ ಮುಂದಿನ ದಿನಗಳಲ್ಲಿ ಜಿಲ್ಲೆಯ ಅರಣ್ಯವಾಸಿಗಳ ಬದುಕಿಗೆ ಭದ್ರತೆ ಒದಗಿಸುವ ಕೆಲಸ ಆಗಬಹುದು ಎನ್ನುವ ಭರವಸೆ ಇದೆ ಎಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ. ಅರಣ್ಯ ಭೂಮಿಯಲ್ಲಿನ ಒತ್ತುವರಿಯ ನೈಜ ಸ್ಥಿತಿಯ ಕುರಿತು ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸ್ಥಳ ತನಿಖೆ ನಡೆಸಿ ಆಯಾಯ ಉಪವಿಭಾಗೀಯ ಸಮಿತಿಗಳಿಗೆ ತನ್ನ ವರದಿ ಸಲ್ಲಿಸುವುದೂ ಸೇರಿದಂತೆ ಸ್ಥಳ ಮಹಜರು ದ್ರಡೀಕರಣ ಪತ್ರ ನೀಡುವ ಮೂಲಕ ಅರಣ್ಯವಾಸಿಗಳು ಅರಣ್ಯ ಹಕ್ಕಿನಿಂದ ವಂಚಿತರಾಗದಂತೆ ಸರ್ಕಾರ ಕ್ರಮ ವಹಿಸಬೇಕೆಂದು ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿ ಸರಕಾರಕ್ಕೆ ತನ್ನ ಬೇಡಿಕೆ ಸಲ್ಲಿಸಿತ್ತು.ಬೇಡಿಕೆಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳು ಪರಿಗಣಿಸಿದ್ದು,ಸ್ಥಳ ತನಿಖೆಯ ನೈಜ ಸಮೀಕ್ಷೆಯಿಂದ ಜಿಲ್ಲೆಯ ಬಹುತೇಕ ಅರಣ್ಯ ಭೂಮಿ ಸಾಗುವಳಿದಾರರಿಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ತಿಳಿಸಿದ್ದಾರೆ. ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾದ ನಿಯೋಗದಲ್ಲಿ ಉತ್ತರಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ, ಪ್ರಧಾನ ಸಂಚಾಲಕ ಜಿ.ಎಂ.ಶೆಟ್ಟಿ ಅಚವೆ,ಸಂಚಾಲಕ ಪಿ.ಟಿ.ನಾಯ್ಕ ಮೂಡ್ಕಣಿ ಮತ್ತು ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 