ಅರಣ್ಯ, ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು: ಇಮ್ರಾನ್ ಬೇಗ್ ಮುಲ್ಲಾ

Forest and water conservation should be everyone's top priority: Imran Beg Mulla

ಮೂಡಲಗಿ 21 :  “ಅರಣ್ಯಗಳು ಮಾನವ ಬದುಕಿನ ಶ್ವಾಸಕೋಶವಿದ್ದಂತೆ, ಅವುಗಳಿಂದ ಓಷದಿಯ ಸಸ್ಯೋತ್ಪನ್ನಗಳು ಹಾಗೂ ಆಮ್ಲಜನಕ ದೊರೆಯುವುದು. ಜಗತ್ತಿನ ಜನರ ಜೀವನಾಡಿಯಾಗಿರುವ ಅರಣ್ಯಗಳು ಮಾನವ ಬದುಕಿಗೆ ಹಲವು ರೀತಿಯ ಪ್ರಯೋಜನಗಳನ್ನು ಒದಗಿಸಿದ್ದು ಇತ್ತೀಚಿನ ದಿನಗಳಲ್ಲಿ ಅರಣ್ಯಗಳು ಕಣ್ಮರೆಯಾಗುತ್ತಿದ್ದು ಜೊತೆಗೆ ಜಲಮೂಲಗಳು ಬತ್ತುತ್ತಿದ್ದು ಅರಣ್ಯ ಮತ್ತು ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು” ಎಂದು ಶ್ರೀ ಇಮ್ರಾನ್ ಬೇಗ್ ಮುಲ್ಲಾ ವಲಕಯ ಅರಣ್ಯಾಧಿಕಾರಿಗಳು ಗೋಕಾಕ ಇವರು ತಿಳಿಸಿದರು 

ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್‌.ಕ್ಯೂ.ಎ.ಸಿ. ಹಾಗೂ ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ  ವಿಶ್ವ ಅರಣ್ಯ ದಿನ ಮತ್ತು ವಿಶ್ವ ಜಲ ದಿನಾಚರಣೆಯ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ,   

“ಪರಿಸರ ಸಂರಕ್ಷಣೆ ಇಂದು ಹಿಂದಿಗಿಂತಲೂ ಅತೀ ಅವಶ್ಯವಾಗಿದೆ. ಮುಕ್ಕಾಲು ಭಾಗ ಭೂ ಒಡಲಿನಲ್ಲಿ ನೀರಿದ್ದು ನಾವೆಲ್ಲಾ ಬಾಯಾರಿದಂತಾಗಿ ನೀರಿಗಾಗಿ ಪರಿತಪಿಸುತ್ತಿದ್ದೇವೆ. ಜೊತೆಗೆ ಅರಣ್ಯ ಸಂರಕ್ಷಣೆ ಸಂವಿಧಾನದ ಹಕ್ಕುಗಳಲ್ಲಿ ಒಂದಾಗಿದ್ದು ಅವುಗಳನ್ನು ಎಲ್ಲರೂ ಸೇರಿ ಸಂರಕ್ಷಿಸೋಣ” ಎಂದು ಎಂದು ಕರೆ ನೀಡಿದರು.     

ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಮಲ್ಲಪ್ಪ ದಿನ್ನಿಮನಿ ಉಪವಲಯ ಅರಣ್ಯಾಧಿಕಾರಿಗಳು ಗೋಕಾಕ ಇವರು ಮಾತನಾಡುತ್ತಾ , ಇಂದು ನೀರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಜಗತ್ತನ್ನು ಕಾಡುತ್ತಿವೆ. ದಿನೇ ದಿನೇ ಅರಣ್ಯಗಳು ನಶಿಸುತ್ತಿರುವುದರಿಂದ ಜಾಗತಿಕ ತಾಪಮಾನ ಏರುತ್ತಿದೆ. ಇವುಗಳಿಗೆ ಪರಿಹಾರವಾಗಿ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯದಂತೆ ಗಿಡಮರಗಳನ್ನು ನೆಡುತ್ತಿರುವುದು ಖುಷಿಯ ವಿಚಾರವಾದರೂ ಬೆಳೆಯುತ್ತಿರುವ ಜನಸಂಖ್ಯೆಗೆ ಸಾಲುತ್ತಿಲ್ಲ. ಆದ್ದರಿಂದ ನಾವೆಲ್ಲರೂ ನೀರು ಮತ್ತು ಅರಣ್ಯ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ  ರೇಷ್ಮಾ ಮಾದರ ಅವರು ‘ಅರಣ್ಯ ಮತ್ತು ಜಲ ಸಂರಕ್ಷಣೆಯಲ್ಲಿ ಯುವಕರ ಪಾತ್ರ’ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಿದರು. 

ಪ್ರಭಾರಿ ಪ್ರಾಂಶುಪಾಲರಾದ ಶ್ರೀ ಬಿ.ಎಸ್‌. ಕೆಸರಗೊಪ್ಪ  ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಭವಿಷ್ಯದ ಪೀಳಿಗೆಗಾಗಿ ನೀರು ಮತ್ತು ಅರಣ್ಯ ಸಂರಕ್ಷಣೆಯಲ್ಲಿ ನಾವೆಲ್ಲರೂ ಭಾಗವಹಿಸೋಣ” ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಭೂಗೋಳ ವಿಭಾಗದ ಉಪನ್ಯಾಸಕರಾದ ಶ್ರೀ ಸಾಗರ ಉರಮನಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕರಾದ  ಶ್ರೀಮತಿ ಸುಮಿತ್ರಾ ಮಾಸ್ತಿ,  ಆಯ್‌.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀ ಚೇತನ್ ರಾಜ್ ಬಿ , ಸಂಜೀವಕುಮಾರ ಗಾಣಿಗೇರ, ಎ.ಜಿ.ನಸಬಿ. ಆರ್‌.ಆಯ್‌.ಆಸಂಗಿ, ಶ್ರೀದೇವಿ ನಾಯ್ಕರ್ ಭಾಗವಹಿಸಿದ್ದರು. ಕುಮಾರಿ ಸರಸ್ವತಿ ಲಟ್ಟಿ ಸ್ವಾಗತಿಸಿದರು. ರುಕ್ಮಿಣಿ ಅಟಮಟ್ಟಿ ಪ್ರಾರ್ಥಿಸಿದರು.  ಹಾಗೂ ದೀಪಾ ಹುಲಕುಂದ ಸಾನಿಯಾ ನದಾಫ್ ನಿರೂಪಿಸಿದರು. ಕರೆಪ್ಪ ಹಳ್ಳೂರ  ವಂದಿಸಿದರು.