ವಿಪಿಎಂ ಶಾಲೆಯಲ್ಲಿ ವನಮಹೋತ್ಸವ

ವಿಪಿಎಂ ಶಾಲೆಯಲ್ಲಿ ವನಮಹೋತ್ಸವ  Forest Festival at VPM School

ತಾಳಿಕೋಟೆ 10: ಪಟ್ಟಣದ ವಿ.ಪಿ.ಎಂ ಮತ್ತು ಸೆಕ್ರೇಡ್ ಹಾರ್ಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಸಿಗಳನ್ನು ನೆಟ್ಟು ನೀರುಣಿಸುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟರ್ ಮಹಾಂತೇಶ ಹಾದಿಮನಿ ಮಾತನಾಡಿ, ಪರಿಸರದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಮರಗಳ ರಕ್ಷಣೆ, ಕಾಡು, ಬೆಟ್ಟ ಗಳಿಂದ ನಮಗಿರುವ ಲಾಭಗಳನ್ನು ತಿಳಿಸಿಕೊಡಲು ನಿಸರ್ಗದತ್ತ ಮಕ್ಕಳಿಗೆ ಸಾಕ್ಷ ದರ್ಶನ ಮಾಡಿಸಬೇಕು. ನಮಗೆ ಇಂದು ಮಳೆ ಬಾರದಿರಲು ಕಾರಣ ಇವುಗಳಾಗಿವೆ ಎಂದರು.

ಅದಕ್ಕೆ ಸೂಕ್ತ ಪರಿಹಾರವೆಂದರೇ ಮಗುವಿಗೊಂದು ಮರ, ಶಾಲೆಗೊಂದು ವನ ಆಗಬೇಕಿದೆ. ಅಂದಾಗ ಮಾತ್ರ ನಮ್ಮ ಕಾರ್ಯಕ್ರಮಗಳಿಗೆ ಮಹತ್ವವಿರುತ್ತದೆ. ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸಿರಬೇಕಾದರೇ ಆ ದೇಹಕ್ಕೆ ಸದೃಡವಾದ ಉಸಿರು ಅಷ್ಠೆ ಪ್ರಮುಖವಾಗುತ್ತೆದೆಂದು ಹೇಳಿದರು. ಪ್ರತಿಯೊಬ್ಬ ರೈತರು ಮತ್ತು ರೈತರ ಮಕ್ಕಳು ತಮ್ಮ ತಮ್ಮ ಮನೆ ಮತ್ತು ಹೊಲಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಿಡ ಮರಗಳನ್ನು ಬೆಳೆಸಬೆಕೆಂದು ಹೇಳಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ಫಾದರ ಸುನೀಲ ಅಂದ್ರಾದೆ ಅತಿಥಿಗಳನ್ನು ಗೌರವಿಸಿ ಮಾತನಾಡಿದರು.

ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐರಿನ್ ತ್ರೌರೋ. ಹಿರಿಯ ಶಿಕ್ಷಕ ನಾಗಭೂಷಣ ಸಜ್ಜನ ಇತರರಿದ್ದರು. ಮಕ್ಕಳಿಂದ ಪರಿಸರ ಕಾಳಜಿಯ ಕುರಿತು ಹಾಡು ಮತ್ತು ಕಿರು ನಾಟಕ ಪ್ರರ್ದಶನದ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿಕೊಡಲಾಯಿತು.ಶಿಕ್ಷಕರಾದ ಉದಯ ಕಟ್ಟಿಮನಿ, ಸೋನಿ ಮಿಸ್ ವಿದ್ಯಾರ್ಥಿನಿ ಫರಹತ್ , ಅಬ್ದುಲ್ ನಿರ್ವಹಿಸಿದರು. ಜೈರಾಬಿ ಸ್ವಾಗತಿಸಿದರು. ಜುನೇದ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.