ಕೊರೊನಾ : ರಷ್ಯಾದಲ್ಲಿರುವ ವಿದೇಶಿಯರ ವೀಸಾ ಅವಧಿ 90 ದಿನ ವಿಸ್ತರಣೆ

ಮಾಸ್ಕೋ, ಮಾರ್ಚ್ 31, ರಷ್ಯಾದಲ್ಲಿರುವ ವಿದೇಶಿಯರ ವೀಸಾವನ್ನು ಅವರ ಭೇಟಿಯ ಉದ್ದೇಶ ಪರಿಗಣಿಸದೇ 90 ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ರಷ್ಯಾ ಒಳಾಡಳಿತ ಸಚಿವಾಲಯ ತಿಳಿಸಿದೆ.ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಿಗೆ ವಿಮಾನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿದೆ, ಹಲವೆಡೆ ಗಡಿ ಬಂದ್ ಮಾಡಲಾಗಿದೆ. ಹೀಗಾಗಿ ರಷ್ಯಾದಲ್ಲಿ ವೀಸಾ ಮೇಲಿರುವ ವಿದೇಶಿ ಪ್ರಜೆಗಳಿಗೆ ತೊಂದರೆಯಾಗದಿರಲು ಭೇಟಿ ಉದ್ದೇಶ ಯಾವುದೇ ಇರಲಿ, ವೀಸಾ ಅವಧಿ 90 ದಿನಗಳ ಕಾಲ ವಿಸ್ತರಿಸಲಾಗುವುದು ಎಂದು ಸಚಿವಾಲಯ ವಿವರಿಸಿದೆ.
 ಪ್ರಸ್ತುತ ವೀಸಾ ಅವಧಿ ಮುಗಿದಿದ್ದಲ್ಲಿ, ವೀಸಾ ನವೀಕರಿಸಲು, ರಷ್ಯಾದಿಂದ ಹೊರಡಲು ಅನುಮತಿಸುವವರೆಗೆ ತಾತ್ಕಾಲಿಕ ವಾಸದ ಅವಧಿಯನ್ನೂ ವಿಸ್ತರಿಸಲಾಗುವುದು ಎಂದು ರಷ್ಯಾ ತಿಳಿಸಿದೆ.