ದೀನದಲಿತರ ಉದ್ದಾರಕ್ಕಾಗಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದವರು ಡಾ. ಅಂಬೇಡ್ಕರ್

ಬೆಳಗಾವಿ16: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ 128ನೇ ಜನ್ಮ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮನ್ನು ದಿನಾ0ಕ 15-04-2019ರಂದು "ಜ್ಞಾನ ಸಂಗಮ", ಬೆಳಗಾವಿಯಲ್ಲಿ ಏರ್ಪಡಿಸಲಾಗಿತ್ತು.

ಡಾ. ಹೆಚ್. ಜಿ. ಪೋತೆ, ಪ್ರಾಧ್ಯಾಪಕರು ಹಾಗೂ ನಿದರ್ೆಶಕರು, ಕನ್ನಡ ಅಧ್ಯಯನ ಸಂಸ್ಥೆ, ಗುಲಬಗರ್ಾ ವಿಶ್ವವಿದ್ಯಾಲಯ, ಕಲಬುರಗಿ ಇವರು ವಿಶೇಷ ಉಪನ್ಯಾಸ ನೀಡಿದರು. "ಡಾ. ಅಂಬೇಡ್ಕರ್ ಅವರು ನಮ್ಮ ದೇಶದ ಖ್ಯಾತ ಅರ್ಥಶಾಸ್ತ್ರಜ್ಞರು, ಶಿಕ್ಷಣಶಾಸ್ತ್ರಜ್ಞರು ಹಾಗೂ ಸಂವಿಧಾನ ಶಿಲ್ಪಿಗಳಾಗಿದ್ದಾರೆ. ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿ ತಾರತಮ್ಯಗಳನ್ನು ಹೋಗಲಾಡಿಸಲು ಹಾಗೂ ದೀನದಲಿತರ ಮತ್ತು ಬಡವರ ಉದ್ದಾರಕ್ಕಾಗಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಾರೆ. ಯುವ ಜನಾಂಗ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು."   

    ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ "ವಿದ್ಯಾಥರ್ಿಗಳು ಡಾ. ಅಂಬೇಡ್ಕರ್ ಅವರು ರಚಿಸಿದ ಪುಸ್ತಕಗಳ ಆಳವಾದ ಅಧ್ಯಯನ ಮಾಡಬೇಕು ಹಾಗೂ ಅವರ ತತ್ವ, ಆದರ್ಶ ಮತ್ತು ಅವರ ದೃಷ್ಟಿಕೋನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತದ ಸಂವಿಧಾನ ರಚಿಸುವಲ್ಲಿ ಡಾ. ಅಂಬೇಡ್ಕರ್ ಅವರು ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳಲು ಅವರ ಜನ್ಮ ದಿನಾಚರಣೆ ನಮಗೆ ಸುಸಂದರ್ಭವಾಗಿದೆ" ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿತ್ತಿರುವ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳ ಮಕ್ಕಳಿಗಾಗಿ "ಪ್ರತಿಭಾ ಪುರಸ್ಕಾರ" ಕಾರ್ಯಕ್ರಮವನ್ನು ಹಾಗೂ ವಿತಾವಿ ಸ್ನಾತಕೋತ್ತರ ಕೇಂದ್ರಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎಸ್.ಸಿ, ಎಸ್.ಟಿ. ವಿದ್ಯಾಥರ್ಿಗಳಿಗೆ "ನಗದು ಪುರಸ್ಕಾರ" ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

2017-18ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೆ. 80ಕ್ಕಿ0ತ ಹೆಚ್ಚು ಅಂಕ ಗಳಿಸಿದ 25 ವಿದ್ಯಾಥರ್ಿಗಳನ್ನು ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು. ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿತಾವಿ ಸ್ನಾತಕೋತ್ತರ ಕೇಂದ್ರಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಎಸ್.ಸಿ/ಎಸ್.ಟಿ. 18 ವಿದ್ಯಾಥರ್ಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.

ವಿತಾವಿ ಪರೀಕ್ಷಾ ಕುಲಸಚಿವರು ಮತ್ತು ಪ್ರಭಾರಿ ಕುಲಸಚಿವರಾದ ಡಾ ಸತೀಶ ಅಣ್ಣಿಗೇರಿ, ವಿತಾವಿ ಹಣಕಾಸು ಅಧಿಕಾರಿಗಳಾದ ಶ್ರಿಮತಿ ಎಂ. ಎ. ಸಪ್ನಾ, ವಿತಾವಿಯ ಬೆಳಗಾವಿ ಪ್ರಾದೇಶಿಕ ಕಚೇರಿ ನಿದರ್ೆಶಕರಾದ ಡಾ. ಆನಂದ ಶಿವಾಪುರ, ಕಾರ್ಯಕ್ರಮ ಸಂಯೋಜಕರಾದ ವಿತಾವಿ ಅ.ಜಾ., ಅ.ಪಂ, ಒಬಿಸಿ ಕಲ್ಯಾಣ ಕೇಂದ್ರದ ಸಂಯೋಜಕರಾದ ಡಾ. ಪ್ರಹ್ಲಾದ ರಾಥೋಡ ವೇದಿಕೆಯಲ್ಲಿದ್ದರು. ವಿತಾವಿ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾಥರ್ಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.