ರಾಜ್ಯದಲ್ಲಿ ಮೊದಲ ಬಾರಿಗೆ ಬಿ.ಎಲ್‌.ಡಿ.ಇ ಸಂಸ್ಥೆಯಲ್ಲಿ ಆಕೃತಿ ಕೇಂದ್ರ ಪ್ರಾರಂಭ

ರಾಜ್ಯದಲ್ಲಿ ಮೊದಲ ಬಾರಿಗೆ ಬಿ.ಎಲ್‌.ಡಿ.ಇ ಸಂಸ್ಥೆಯಲ್ಲಿ ಆಕೃತಿ ಕೇಂದ್ರ ಪ್ರಾರಂಭ For the first time in the state, Akruti center was launched at BLDE Institute.

ವಿಜಯಪುರ 26: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಗರದ ಪ್ರತಿಷ್ಠಿತ ಬಿ.ಎಲ್‌.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜಿನೊಂದಿಗೆ ಮುಂಬೈನಲ್ಲಿರುವ ದೇಶದ ಹೆಸರಾಂತ ಬಾಬಾ ಅಣು ಸಂಶೋಧನೆ ಕೇಂದ್ರ ಆಕೃತಿ ಕೇಂದ್ರ ಸ್ಥಾಪಿಸಲು ಒಡಂಬಡಿಕೆ ಮಾಡಿಕೊಂಡಿದೆ. 

ಬುಧವಾರ ನಗರದಲ್ಲಿರುವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪರವಾಗಿ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ ಮತ್ತು ಬಾರ್ಕ್‌ ನ ಸೈಂಟಿಫಿಕ್ ಆಫೀಸರ್ ಮತ್ತು ಆಕೃತಿ ಗ್ರುಪ್ ನ ಟೆಕ್ನಾಲಜಿ ಟ್ರಾನ್ಸಫರ್ ಆ್ಯಂಡ್ ಕೊಲ್ಯಾಬರೇಶನ್ ಡಿವಿಷನ್ ಗ್ರುಪ್ ಲೀಡರ್ ಡಾ. ಭಾರತಿ ಎ. ಒಪ್ಪಂದಕ್ಕೆ ಸಹಿ ಹಾಕಿದರು.   

ಈ ಒಪ್ಪಂದದಡಿ ಬಾಬಾ ಅಣು ಸಂಶೋಧನೆ ಕೇಂದ್ರ ಬಿ.ಎಲ್‌.ಡಿ.ಇ ಸಂಸ್ಥೆಯಲ್ಲಿ ಆಕೃತಿ ಕೇಂದ್ರ(ಂಏಖಗಖಿಋಂಜತಚಿಟಿಛಿಜಜ ಏಟಿಠಟಜಜರಜ ಚಿಟಿಜ ಖಗಡಿಛಚಿಟಿ ಖಿಜಛಿಟಿಠಠಥಿ ಋಠಿಟಜಟಜಟಿಣಚಿಣಠ) ಸೆಂಟರ್ ಪ್ರಾರಂಭಿಸಲಿದೆ.  ಮೂರು ವರ್ಷಗಳ ಒಪ್ಪಂದ ಇದಾಗಿದ್ದು, ಈ ಅವಧಿಯಲ್ಲಿ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳುಮತ್ತು ಸ್ಥಳೀಯ ಸಮುದಾಯಕ್ಕೆ ಬಾರ್ಕ್‌ ನ ಹೊಂದಿರುವ ನಾವೀನ್ಯತೆ ತಂತ್ರಜ್ಞಾನಗಳನ್ನು ಲಭ್ಯವಾಗಲಿವೆ.  ಅಲ್ಲದೇ, ಇದರಿಂದ ಉನ್ನತ ವೈಜ್ಞಾನಿಕ ಸಂಶೋಧನೆ ಮತ್ತು ಗ್ರಾಮೀಣ ಸಬಲೀಕರಣದ ನಡುವಿನ ಅಂತರ ಕಡಿಮೆ ಮಾಡುವ ಗುರಿ ಹೊಂದಲಾಗಿದೆ.   

ಈ ಕೇಂದ್ರವು ಬಾರ್ಕ್ನ ತಂತ್ರಜ್ಞಾನಗಳ ಪ್ರದರ್ಶನ, ಪ್ರಸಾರ ಮತ್ತು ಪ್ರಾಯೋಗಿಕ ತರಬೇತಿಗೆ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಿ, ಉದ್ಯಮಶೀಲತೆ, ಸ್ವಾವಲಂಬನೆ ಮತ್ತು ಸ್ಥಳೀಯ ಉದ್ಯಮಗಳ ಅಭಿವೃದ್ಧಿಗೆ ಪ್ರೋತ್ಸಾಹಿಸ ನೀಡಲಿದೆ.   

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಭಾರತಿ ಎ.ಬಾರ್ಕ್‌ ನ ಇತಿಹಾಸ ಮತ್ತು ಸಾಮಾಜಿಕ ಅನ್ವಯಗಳ ಬೆಳೆಯುತ್ತಿರುವ ಬದ್ಧತೆಯ ಕುರಿತು ಮಾಹಿತಿ ನೀಡಿದರು.  ಸಂಶೋಧನೆಯಲ್ಲಿ ಈ ಪಾಲುದಾರಿಕೆಯಿಂದ ವಿದ್ಯಾರ್ಥಿ ಉದ್ಯಮಿಗಳು, ಶಿಕ್ಷಕರು ಮತ್ತು ರೈತರಿಗೆ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನದ ಸೌಲಭ್ಯ ಸಿಗಲಿದೆ.  ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೌಶಲ್ಯಾಭಿವೃದ್ಧಿಯ ಜೊತೆಗೆ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಪ್ರೋತ್ಸಾಹ ದೊರೆಯಲಿದೆ.  ಅಷ್ಟೇ ಅಲ್ಲ, ಗ್ರಾಮಾಂತರ ಪ್ರದೇಶಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ತಲುಪಿಸಲು ವಿಜಯಪುರ ಜಿಲ್ಲೆಯ ಹಳ್ಳಿಗಳಲ್ಲಿ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಗಳನ್ನು ಕೂಡ ರೂಪಿಸಲಾಗಿದೆ.  ಶೈಕ್ಷಣಿಕವಾಗಿ ಅಕೃತಿ ಕೇಂದ್ರದ ಮೂಲಕ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಇಂಟರ್ನಶಿಪ್ ಅವಕಾಶಗಳು, ಉದ್ಯಮ-ಸಂಬಂಧಿತ ತರಬೇತಿ ಮತ್ತು ಬಾರ್ಕ್ಗೆ ಭೇಟಿ ನೀಡುವ ಅವಕಾಶಗಳಲು ದೊರೆಯಲಿವೆ ಎಂದು ಅವರು ಹೇಳಿದರು. 

ಕಾಲೇಜಿನ ಪ್ರಾಚಾರ್ಯ ಡಾ. ಸಿ. ಮಲ್ಲಿಕಾರ್ಜುನ ಶೆಟ್ಟಿ ಮಾತನಾಡಿ, ದೇಶದಲ್ಲಿ ಇದೇ ಮೊದಲ ಬಾರಿಗೆ ಬಾರ್ಕ್‌ ಫಾರ್ಮಸಿ ಕಾಲೇಜಿನೊಂದಿಗೆ ಈ ಒಪ್ಪಂದ ಮಾಡಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.  ವಿಜಯಪುರ ಜಿಲ್ಲೆಯಲ್ಲಿ ಕೃಷಿಕರ ಸಮುದಾಯ ದೊಡ್ಡಿದಿದೆ.  ಈ ಕ್ಷೇತ್ರದ ಅಗತ್ಯ ಬೇಡಿಕೆಗೆ ಅನುಗುಣವಾಗಿ ಈ ಕೇಂದ್ರದ ತಂತ್ರಜ್ಞಾನದ ಮೂಲಕ ಪರಿಹಾರಗಳನ್ನು ನೀಡಲಾಗುವುದು ಎಂದು ಪ್ರಾಂಶುಪಾಲ ಹೇಳಿದರು.   

ಫಾರ್ಮಸಿ ಕಾಲೇಜಿನ ಕ್ವಾಲಿಟಿ ಅಶುರನ್ಸ್‌ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಪಾದ ಪೋತದಾರ ಈ ಒಡಂಬಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  ಇನ್ನು ಮುಂದೆ ಆಕೃತಿ ಕೇಂದ್ರದ ಸಂಯೋಜಕರಾಗಿ ಕಾರ್ಯ ನಿರ್ಬಹಿಸಲಿದ್ದಾರೆ. 

ಈ ಸಂದರ್ಭದಲ್ಲಿ ಕಾಲೇಜಿನ ಸಂಶೋಧನೆ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಆರ್‌. ಬಿ. ಕೋಟ್ನಾಳ, ಕಾಲೇಜಿನ ಡಾ. ಸಿ. ಸಿ. ಪಾಟೀಲ, ಡಾ. ಗವಿರಾಜ ಈ. ಎನ್‌., ಡಾ. ಸಂತೋಷ ಕರಜಗಿ, ಡಾ. ಎಸ್‌. ಸಿ. ಮಾರಾಪುರ, ಡಾ. ವಿ. ಪಿ ಪಾಟೀಲ, ಡಾ. ಎಸ್‌. ಎಸ್‌. ಬಿರಾದಾರ, ಡಾ. ಬಿ. ಎಂ. ಪಾಟೀಲ, ಸಂಗಪ್ಪ ತೇಲಿ, ಅಜಯ ಶಹಾಪುರ್ ಸೇರಿದಂತೆ ಶಿಕ್ಷಕರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಅಭಿನಂದನೆ: ಬಿ.ಎಲ್‌.ಡಿ.ಇ ಸಂಸ್ಥೆಯೊಂದಿಗೆ ಬಾಬಾ ಅಣು ಸಂಶೋಧನೆ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಹಾಗೂ ಆಡಳಿತ ಮಂಡಳಿಯವರು ಸಂತಸ ವ್ಯಕ್ತಪಡಿಸಿದ್ದು, ಫಾರ್ಮಸಿ ಕಾಲೇಜಿನ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.