ಮಾನಸಿಕ ನೆಮ್ಮದಿಗೆ ನಗುವೆ ಟಾನಿಕ್: ಕಾಮರಡ್ಡಿ

ಧಾರವಾಡ 14: ಪ್ರತಿಯೊಬ್ಬರ ಜೀವನದಲ್ಲಿ ಎದುರಾಗುವ ಕಷ್ಟಗಳಿಗೆ ಮತ್ತು ಮಾನಸಿಕ ನೆಮ್ಮದಿಗೆ ನಗುವೆ ಟಾನಿಕ್ ಆಗಬೇಕು ಮತ್ತು ಕಲಾವಿದರಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಪ್ರತಿಯೊಬ್ಬರು ಸಹ ಮಾಡಬೇಕು ಎಂದು ಹಿರಿಯ ವಕೀಲರು ಮತ್ತು ಕನರ್ಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಿ.ಡಿ ಕಾಮರಡ್ಡಿ ಹೇಳಿದರು. 

ಅವರು ಧಾರವಾಡದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ರಂಗಸಂಗ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡ ಹಾಸ್ಯ ಚಕ್ರವತರ್ಿ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನೆ ಮತ್ತು ನರಸಿಂಹ ಜೋಶಿ ಅವರ ಮಾಹಾ ನಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಸಮಾಜದ ಪ್ರತಿಯೊಂದು ವರ್ಗದ ಜನಾಂಗದವರು ಮತ್ತು ಮಕ್ಕಳೂ ಸಹ ಒತ್ತಡದ ಸಂದರ್ಭಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಸೋಸಿಯಲ್ ಮೇಡಿಯಾದಲ್ಲಿ ತಲ್ಲಣರಾಗುವ ಜನರು ನಗುವನ್ನೇ ಮರೆತಿದ್ದಾರೆ ಇಂತಹ ಸಂದರ್ಭದಲ್ಲಿ ಈ ಮಹಾ ನಗೋತ್ಸವವನ್ನು ಪ್ರತಿಷ್ಠಾನ ಮತ್ತು ರಂಗಸಂಗ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ರೋಟರಿ ಕ್ಲಬ್ನ ಕಾರ್ಯದಶರ್ಿಗಳಾದ ಸುನೀಲ ಬಾಗೆವಾಡಿ ಮಾತನಾಡಿ ನಗುವು ನಿತ್ಯದ ಆಯಾಸವನ್ನು ಕಡಿಮೆಮಾಡಿ ಹೆಚ್ಚು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಎಸಿಎಚ್ಆರ್ನ ರಾಜ್ಯಾಧ್ಯಕ್ಷರಾದ ಕೆ.ದಶರಥ ಅವರ ಸಂಘಟನೆ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ರಂಗಸಂಗದ ಅಧ್ಯಕ್ಷರಾದ ನಾಗರಾಜ ಪಾಟೀಲ ಉಪಸ್ಥಿತರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಮುಸ್ತಾಫ್ ಎಸ್ ಫರಾಸ ಅಧ್ಯಕೀಯ ಮಾತುಗಳನ್ನಾಡಿದರು.

ನಂತರ ಪ್ರಾಣೇಶ ಅವರ ತಂಡದಿಂದ ಮಹಾ ನಗೋತ್ಸವ ಕಾರ್ಯಕ್ರಮ ನಡೆಯಿತು.

ಸುರೇಶ ಬೆಟಗೇರಿ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದಶರ್ಿ ಮಾತರ್ಾಂಡಪ್ಪ ಎಮ್ ಕತ್ತಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರೇಮಾನಂಧ ಶಿಂಧೆ ಪ್ರಾರ್ಥಸಿದರು. ಶ್ರೀಶೈಲ ಚಿಕನಳ್ಳಿ ವಂದಿಸಿದರು. ರಾಜ ಕವಡೆನವರ, ಭಿಮಾಶಂಕರ ಬೆಳ್ಳುಂಡಗಿ, ಚಂದ್ರಕಾಂತ ಬೆಲ್ಲದ, ಮಾಲತಿ ಪಟ್ಟಣಶೆಟ್ಟಿ, ಬಸವರಾಜ ದೇಸೂರ, ಸಿದ್ದಾರೊಡ ನಾವಿ ಮುಂತಾದವರಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು.