ಶರಣರ ಕಾಯಕ, ವೈಚಾರಿಕತೆಯ ಸಂದೇಶಗಳು ವಿಶ್ವವಿಖ್ಯಾತಿ: ಅಂಗಡಿ

ಎಚ್30-ಬಿಲ್ಎಚ್3 ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಮಡಿವಾಳೇಶ್ವರ ಮಠದ ಸಭಾಂಗಣದಲ್ಲಿ ಜಗದ್ಗುರು ಕುಂಬಾರ ಗುಂಡಯ್


ಬೈಲಹೊಂಗಲ 31: ಶರಣರ ವಚನ ಸಂದೇಶಗಳು, ಅವರ ಆಚಾರ-ವಿಚಾರಗಳು ಆಧುನಿಕ ಯುಗದಲ್ಲಿ ಅತ್ಯಂತ ಮಹತ್ವಪೂರ್ಣವಾದವು. ನಮ್ಮ ಬಸವಾದಿ ಶರಣರ ಕಾಯಕ ಮತ್ತು ವೈಚಾರಿಕತೆಯ ಸಂದೇಶಗಳು ವಿಶ್ವವಿಖ್ಯಾತಿಯಾಗಿವೆ ಆದರೆ ಅವರ ಜನನ, ತಂದೆ, ತಾಯಿ ಕಾಲಮಾನಗಳ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕೆಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎ.ಬಿ ಅಂಗಡಿ ಹೇಳಿದರು.

   ತಾಲೂಕಿನ ನೇಗಿನಹಾಳ ಗ್ರಾಮದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಸಭಾಂಗಣದಲ್ಲಿ ಬಸವ ಕೇಂದ್ರದಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ ಹಾಗೂ ಕುಂಬಾರ ಗುಂಡಯ್ಯನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, ಹಡಪದ ಎಂಬ ಪದವು ತಾಬೂಲ ಚೀಲ ಮತ್ತು ಚರ್ಮದಿಂದ ಮಾಡಿದ ಸಾಮಗ್ರಿಗಳನ್ನು ಇಡುವ ಚೀಲವೆಂದು ಎರಡು ಅರ್ಥಗಳ ನೀಡುತ್ತದೆ ಅಷ್ಟೇ ಅಲ್ಲದೇ ಅಪ್ಪಣ್ಣನವರು ವಚನಗಳಲ್ಲಿ ಎಲ್ಲಿಯೂ ತಮ್ಮ ಕಾಯಕದ ಕುರಿತು ಸ್ಪಷ್ಠವಾಗಿ ಉಲ್ಲೇಖಿಸಿಲ್ಲಾ ಜೊತೆಗೆ ಜನ್ಮಸ್ಥಳದ ಕುರಿತು ಸರಿಯಾದ ಮಾಹಿತಿ ದೊರೆತಿಲ್ಲಾ ಆದರಿಂದ ಶರಣರ ಜೀವನ ಕುರಿತು ಹೆಚ್ಚಿನ ಸಂಶೋಧನೆ ನಡೆಸಬೇಕು ಎಂದು ವಿವಿರಿಸಿದರು. ಕುಂಬಾರ ಗುಂಡಯ್ಯ ಪೀಠದ ಜಗದ್ಗುರು ಕುಂಬಾರ ಗುಂಡಯ್ಯಾ ಮಹಾಸ್ವಾಮೀಜಿಗಳು ಶರಣ ಕುಂಬಾರ ಗುಂಡಯ್ಯನವರ ಕುರಿತು ಉಪದೇಶಿಸಿದರು.

     ಗುರು ಮಡಿವಾಳೇಶ್ವರ ಮಠದ ಪರಮಪೂಜ್ಯ ಬಸವ ಸಿದ್ಧಲಿಂಗ ಸ್ವಾಮೀಜಿಗಳು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.

    ಶಿಕ್ಷಕ ಪ್ರಕಾಶ ಕೆಂಗೇರಿ ಕಾರ್ಯಕ್ರಮದಲ್ಲಿ ಅನ್ನದಾಸೋಹ ಮಾಡಿದರು. ವಿಸ್ಮಯ ಅಂಗಡಿ ವಚನ ಕಂಠಪಾಠ ಮಾಡಿ ಎಲ್ಲರ ಮನಸೆಳೆದರು. 

   ಲಕ್ಷ್ಮೀ ಬಡಿಗೇರ ಸಾಮೂಹಿಕ ಪ್ರಾಥನೆ ನೆರವೇರಿಸಿದರು. ಐಶ್ವರ್ಯ ಮರಿತಮ್ಮನವರ, ಲಕ್ಷ್ಮೀ ಮರೇದ ಅಕ್ಕಮಹಾದೇವಿ, ಹಾಗೂ ಮುಕ್ತಾಯಕನ ವೇಶಭೂಷಣ ಧರಿಸಿ ವಚನಗೀತೆ ಹಾಡಿದರು. ಮಡಿವಾಳಪ್ಪ ತುರಮರಿ, ಶಿವಾನಂದ ಹಡಪದ, ಶಂಕರ ಹಡಪದ, ಗದೀಗೆಪ್ಪ ಗೊಡಚಿ ಮತ್ತಿತ್ತರರು ಉಪಸ್ಥಿತರಿದ್ದರು. ಅರುಣ ಮೆಳವಂಕಿ ಸ್ವಾಗತಿಸಿದರು, ಮಡಿವಾಳಪ್ಪ ಶಿರಸಂಗಿ ನಿರೂಪಿಸಿದರು, ಶ್ರೀಶೈಲ ತೋರಣಗಟ್ಟಿ ವಂದಿಸಿದರು.