ಕೆಎಲ್ಎಸ್ ಜಿಐಟಿಗೆ ಫುಟ್ಬಾಲ್ ಚಾಂಪಿಯನ್ಸ್ ಟ್ರೋಫಿ

ಲೋಕದರ್ಶನ ವರದಿ

ಬೆಳಗಾವಿ 20:  ಕನರ್ಾಟಕ ಲಾ ಸೊಸೈಟಿ ಪ್ಲ್ಯಾಟಿನಮ್ ಜುಬಿಲಿ ಚಾಂಪಿಯನ್ಸ್ ಟ್ರೋಫಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ 3-0 ಗೋಲುಗಳಿಂದ ಬೆಳಗಾವಿಯ ಟ್ರಿನಿಟಿ ಕಾಲೇಜನ್ನು ಸೋಲಿಸಿ ಜಯಗಳಿಸಿತು. ದಿ. 17 ರಿಂದ 18 ರವರೆಗೆ ಈ ಪಂದ್ಯಾವಳಿಯನ್ನು ಜಿಐಟಿಯಲ್ಲಿ ಆಯೋಜಿಸಿತ್ತು. ರಾಹುಲ್ ರುರಾವ್, ರಘುನಂದನ್ ಆನಂದಚೆ ಮತ್ತು ರೇಗನ್ ಡಿಲಿಮಾ ಜಿಐಟಿ ಪರ ಗೋಲು ಗಳಿಸಿದರು. ಪ್ರಾಂಶುಪಾಲರಾದ ಪ್ರೊ.ಡಿ.ಎ.ಕುಲಕಣರ್ಿ ಮತ್ತು ಅಕಾಡೆಮಿಕ್ಸ್ನ ಡೀನ್ ಡಾ.ಎಂ.ಎಸ್ ಪಾಟೀಲ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಗೋಗಟೆ ವಾಣಿಜ್ಯ ಕಾಲೇಜಿನ ಲಿಯೊನಾಡರ್ೊ ಕಾವರ್ಾಲ್ಹೋ ಅವರಿಗೆ ಅತ್ಯುತ್ತಮ ಗೋಲ್ ಕೀಪರ್ ಮತ್ತು ಟ್ರಿನಿಟಿಯ ಅಮಿಲ್ ಬೆಪಾರಿ ಪಂದ್ಯಾವಳಿಯಲ್ಲಿ 4 ಗೋಲುಗಳನ್ನು ಗಳಿಸಿದ್ದಕ್ಕಾಗಿ ಅತಿ ಹೆಚ್ಚು ಗೋಲ್ ಸ್ಕೋರರ್ ನೀಡಲಾಯಿತು.

ಡಾ.ಪಿ.ವಿ.ಕಡಗದಕೈ ದೈಹಿಕ ಶಿಕ್ಷಣ ನಿದರ್ೆಶಕ ಸ್ವಾಗತಿಸಿದರು. ಕ್ರಾಂತಿ ಕುರಂಕರ್, ಸಹಾಯಕ ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿದರ್ೆಶಕರು ಮತ್ತು ಜಿಐಟಿಯ ಇತರ ಸಿಬ್ಬಂದಿ ಉಪಸ್ಥಿತರಿದ್ದರು