ಜನಪದ ಎಲ್ಲಾ ಕಲೆಗಳ ಬೇರು, ಉಳಿದವು ತೇರು : ಡಾ. ಅಂದಯ್ಯ ಅರವಟಗಿಮಠ
Folklore is the root of all arts, the rest is mere fluff: Dr. Andaiah Aravatagimath
ಗದಗ 10: ಓದು ಬರಹ ಬಾರದ ಬದುಕಿನ ಅನುಭವದಿಂದ ತಮ್ಮ ಸುಖ, ಸಂತೋಷ, ಕನಸು, ಕಲ್ಪನೆ ಮತ್ತು ನೋವು-ನಲಿವುಗಳನ್ನು ಹಾಡು-ಕುಣಿತದ ಮೂಲಕ ಅಭಿವ್ಯಕ್ತಿಸಿದ ಶ್ರಮಜೀವಿಗಳ ಸಾಹಿತ್ಯವೇ ಜನಪದ ಸಾಹಿತ್ಯ ಎಂದು ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅಂದಯ್ಯ ಅರವಟಗಿಮಠ ತಿಳಿಸಿದರು. ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ತನ್ನ ವ್ಯಾಸಂಗ ವಿಸ್ತೀರ್ಣ ಕಾರ್ಯಕ್ರಮದ ಭಾಗವಾಗಿ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ?ಜನಪದ ಸಾಹಿತ್ಯ ಸರ್ವೇಕ್ಷಣಾ ಕಾರ್ಯ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳಿಂದ ತುಂಬಿರುವ ಜನಪದ ಸಾಹಿತ್ಯ ಜನರ ಸಂತೋಷ, ದುಃಖ, ಶ್ರಮದ ಸಂದರ್ಭದಲ್ಲಿ ರಚಿತವಾಗಿದೆ. ಹಳ್ಳಿಯ ಕಣದಲ್ಲಿ ರಾಶಿ ಮಾಡುವಾಗ, ಹಬ್ಬ-ಹುಣ್ಣಿಮೆಗಳಲ್ಲಿ, ಮದುವೆ-ಮುಂಜಿವೆಗಳಲ್ಲಿ, ಬೀಸುವಾಗ, ಕುಟ್ಟುವಾಗ, ತಮ್ಮ ಶ್ರಮವನ್ನು ಕಡಿಮೆ ಮಾಡಿಕೊಳ್ಳ ಲು ಜನರು ತಮ್ಮ ಭಾವಗಳನ್ನು ಪರಸ್ಪರ ಹಾಡಿಕೊಂಡು ಕುಣಿಯುತ್ತಿದ್ದರು. ಇದೇ ಜನಪದ ಸಾಹಿತ್ಯದ ಮೂಲ. ಇಂತಹ ಜನಪದ ಸಾಹಿತ್ಯ ನಮ್ಮೊಳಗಿನ ಅಕ್ಕ-ತಂಗಿ-ತಮ್ಮ-ತಂದೆ-ತಾಯಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ನಮ್ಮ ಸಂಸ್ಕೃತಿಯ ಹೆಗ್ಗುರುತಾದ ಜನಪದವು ನಾಶವಾದರೆ ನಮ್ಮ ಬದುಕೆ ನಾಶವಾದಂತಾಗುತ್ತದೆ. ಸಾಂಸ್ಕೃತಿಕ ಬದುಕು ಇಲ್ಲದವರು ಪಶು ಸಮಾನರು. ಇಂತಹ ಜನಪದ ಸಾಹಿತ್ಯವನ್ನು ಮರೆತಿದ್ದರಿಂದ ಇಂದಿನ ದಿನಮಾನದಲ್ಲಿ ರಾಕ್ಷಸೀಯ ಪ್ರವತ್ತಿ ಹೆಚ್ಚುತ್ತಿದೆ ಎಂದರು.
ಕಾರ್ಯಕ್ರಮದದಲ್ಲಿ ಉಪಸ್ಥಿತರಿದ್ದ ಕನ್ನಡ ಉಪನ್ಯಾಸಕರಾದ ಡಾ. ರಾಮಚಂದ್ರ ಪಡೇಸೂರು ಮಾತನಾಡಿ ಇವತ್ತಿನ ಆಧುನಿಕ ಬದುಕಿನ ಬವಣೆಗೆ ಸಿಕ್ಕು ಜನಪದ ಪ್ರಕಾರಗಳಾದ ಒಡಪು, ಒಗಟು, ಗರತಿ ಹಾಡುಗಳು, ಜನಪದ ಆಟಗಳು ಇಂದು ಕಣ್ಮರೆಯಾಗುತ್ತಿವೆ. ಯುವಜನತೆಯು ಇದರತ್ತ ಒಲವು ಮೂಡಿಸಿಕೊಳ್ಳದೆ ಹೋದರೆ ಮುಂದೊಂದು ದಿನ ಜನಪದ ಮಾಯವಾಗುವುದರಲ್ಲಿ ಸಂಶಯವಿಲ್ಲ. ಜನರ ಜೀವಾಳವಾಗಿರುವ ಜನಪದ ಉಳಿಸಿ ಬೆಳೆಸಲು ಯುವಸಮೂಹ ಆಸಕ್ತಿ ತೋರಬೇಕು ಎಂದರು.
ಅಳಿವಿನಂಚಿಗೆ ಸರಿಯುತ್ತಿರುವ ಜನಪದ ಸಾಹಿತ್ಯವನ್ನು ಗ್ರಂಥಸ್ಥಗೊಳಿಸಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ?ಜನಪದ ಸಾಹಿತ್ಯ ಸರ್ವೇಕ್ಷಣಾ ಕಾರ್ಯ'ಕ್ಕೆ ಚಾಲನೆ ನೀಡಿದ ನಂತರದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮದ ಮನೆಗಳಿಗೆ ಬೇಟಿ ನೀಡಿ ಜನಪದ ಕಥೆ, ಕಾವ್ಯ, ಒಗಟು, ಒಡಪು, ರಿವಾಯತ್ ಪದ, ಸೋಬಾನೆ ಪದ ನಾಣ್ಣುಡಿಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಪಾಲಾಕ್ಷಿ ತೂಕದ್, ಶಾಂತಮ್ಮ ಮಠಪತಿ, ಕಳಕಪ್ಪ ದೇವರವರ, ಗುರುಸಿದ್ದವ್ವ ಮುದಕವಿ, ಬಾಬುಸಾಹೇಬ್ ಅಕ್ತಾರ್, ಯಲ್ಲಪ್ಪ ಹೊರಳಗಿ, ಶಂಕ್ರಮ್ಮ ಈಳಿಗೇರ ಉತ್ಸಾಹದಿಂದ ಭಾಗವಹಿಸಿದರು. ಸರ್ವೇಕ್ಷಣಾ ಕಾರ್ಯದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಭಂಡಿವಾಡ, ಅಕ್ಷತಾ ವಡ್ಡರ್, ಕಳಕವ್ವ ನೈನಾಪುರ, ಮಮತಾ ಉಳ್ಳಾನಟ್ಟಿ, ಸಂಗವ್ವ ತಳವಾರ ನಾಗರತ್ನ ಹಾಲನ್ನವರ, ಗೀತಾ ಹಡಪದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೊಂಬಳ ಗ್ರಾಮದ ಮನೆಗಳಿಗೆ ಬೇಟಿ ನೀಡಿ ಜನಪದ ಕಥೆ, ಕಾವ್ಯ, ಒಗಟು, ಒಡಪು, ರಿವಾಯತ್ ಪದ, ಸೋಬಾನೆ ಪದ ನಾಣ್ಣುಡಿಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 