ಶ್ರೀಧರಗಡ್ಡೆಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ
Folklore festival program in the premises of Basaveshwara Temple, Sridhargadde
ಲೋಕದರ್ಶನ ವರದಿ
ಬಳ್ಳಾರಿ 07: ಶ್ರೀಧರಗಡ್ಡೆಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ, ಎರಿ್ರಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ (ರಿ), ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ವಿಶೇಷ ಘಟಕ ಯೋಜನೆ ಅಡಿಯಲ್ಲಿ "ಜಾನಪದ ಸಂಭ್ರಮ" ಎನ್ನುವ ಶೀರ್ಷಿಕೆ ಮಾಲಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಉದ್ಘಾಟಿಸಿದ ಪರಮಪೂಜ್ಯ ಶ್ರೀ ಮರಿ ಕೊಟ್ಟೂರು ದೇಶಿಕರು, ನಿಯೋಜಿತ ಉತ್ತರಾಧಿಕಾರಿಗಳು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಶ್ರೀಧರಗಡ್ಡೆ ಇವರು ತಮ್ಮ ಅಶಿರ್ವಚನವನ್ನು ನೀಡುತ್ತಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತುಂಬಾ ಉತ್ತಮವಾದ ಕೆಲಸವನ್ನು ಮಾಡುತ್ತಿದೆ.
ಈ ತರಹದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ತುಂಬಾ ಸ್ವಾಗತಾರ್ಹ, ಈಗಿನ ಜನರು ಪಾಶ್ಚಾತ್ಯ ಸಾಂಸ್ಕೃತಿಗೆ ಮಾರುವಾಗದೆ ನಮ್ಮ ಹಳ್ಳಿಗಾಡಿನ ಕಲೆಗಳಾದ ತೊಗಲುಗೊಂಬೆ, ಜನಪದ, ಬಯಲಾಟ ಈ ತರಹದ ಕಲೆಗಳನ್ನು ಮಕ್ಕಳಿಗೆ ಕಲಿಸಲು ಹೆಚ್ಚು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಬಿ. ನಾಗರಾಜ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮಾತನಾಡುತ್ತಾ ಶ್ರೀಧರಗಡ್ಡೆಯು ಕಲೆಗಳ ತವರೂರು ಈ ಊರಿನಲ್ಲಿ ಪ್ರಸಿದ್ಧ ಕಲಾವಿದರು ಕಲಾ ಪೋಷಕರು ಇರುವುದು ತುಂಬಾ ಸಂತೋಷದ ಸಂಗತಿ ಎಂದು ತಿಳಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ನಂದೀಶ್ ಮುಖಂಡರು ಶ್ರೀಧರಗಡ್ಡೆ ನಮ್ಮ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರು ನಾವು ತನು, ಮನ, ಧನಗಳಿಂದ ಪ್ರೋತ್ಸಾಹಿಸುತ್ತೇವೆ ಎಂದು ತಮ್ಮ ಅಧ್ಯಕ್ಷತೆ ನುಡಿಗಳನ್ನು ಆಡಿದರು ವೇದಿಕೆಯ ಮೇಲೆ ದೊಡ್ಡಬಸಪ್ಪ ಯಾಟಿ ಗೌರಿ ಹಳ್ಳಿಮನೆ ಮಾಲೀಕರು ಬಳ್ಳಾರಿ, ಎಸ್.ಡಿ. ವೀರನಗೌಡ ಉದ್ಯಮಿಗಳು ಶ್ರೀಧರಗಡ್ಡೆ, ಎ ಜಂಬನಗೌಡ ಬಸವೇಶ್ವರ ಯುವಕ ಸಂಘ ಶ್ರೀಧರಗಡ್ಡೆ, ನಾಗೇಂದ್ರ್ಪ ಅಧ್ಯಕ್ಷರು ಬಸವೇಶ್ವರ ಟ್ರಸ್ಟ್ ಕಮಿಟಿ ಶ್ರೀಧರಗಡ್ಡೆ, ಪಿ. ನಿರಂಜನ್ ಮುಖಂಡರು ಶ್ರೀಧರಗಡ್ಡೆ, ಶ್ರೀ ಬಿ. ಬಸವರಾಜ್ ಉಪಾಧ್ಯಕ್ಷರು ಶ್ರೀ ಬಸವೇಶ್ವರ ಭಜನಾ ಮಂಡಳಿ ಶ್ರೀಧರ ಗಡ್ಡೆ, ಇನ್ನು ಮುಂತಾದವರು ಪಾಲ್ಗೊಂಡಿದ್ದರು.
ವೇದಿಕೆಯ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಲಿಕೆಯಲ್ಲಿ ತೊಗಲಗೊಂಬೆ ಪ್ರದರ್ಶನ -ಶ್ರೀಮತಿ ಹುಲಿಗೆಮ್ಮ ಮತ್ತು ತಂಡ ಬಳ್ಳಾರಿ, ಸುಗಮ ಸಂಗೀತ ಕು. ಸಹನಾ ಮತ್ತು ತಂಡ ಕಂಪ್ಲಿ, ಜಾನಪದ ನೃತ್ಯ ಕು. ಬಾನವತ ಮಾಯುಖ ಮತ್ತು ತಂಡ ಬಳ್ಳಾರಿ ಹಾಗೂ ಕೀಬೋರ್ಡ್ ಶಿವಕುಮಾರ್ ಬಂಡಿಹಟ್ಟಿ, ತಬಲಾ ಯೋಗೇಶ್ ಸಂಗನಕಲ್ಲು. ಜಡೇಶ ಎಮ್ಮಿಗನೂರು ಕಾರ್ಯಕ್ರಮ ನಿರೂಪಣೆ ಮಾಡಿದರು. ವೈ.ಉಮೇಶ್ ಸ್ವಾಗತಿಸಿದರು, ಎರಿ್ರಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್‌ನ ಅಧ್ಯಕ್ಷರಾದ, ವೈ. ಪ್ರಭುರವರು ಪ್ರಾಸ್ತವಿಕ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಶ್ರೀಮತಿ ಪಿ. ರೇಖಾ ರವರು ವಂದಿಸಿದರು.
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ, 