ಜನಪದ ಸಾಹಿತ್ಯ, ಶರಣ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಧಾಮರ್ಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವವರು ಗೊ.ರು.ಚನ್ನಬಸಪ್ಪನವರು. ಗೊ.ರು.ಚನ್ನಬಸಪ್ಪನವರು ಜಾನಪದ ಕ್ಷೇತ್ರಕ್ಕೆ ಹಾಗೂ ಶರಣ ಸಾಹಿತ್ಯಕ್ಕೆ ಗುರುತರವಾದ ಸೇವೆ ಸಲ್ಲಿಸಿದ್ದಾರೆ.
ಗೊ.ರು.ಚನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೊಂಡೇದ ಹಳ್ಳಿಯಲ್ಲಿ ಮೇ 18, 1930ರಂದರು ಜನಿಸಿದರು. ತಂದೆ ಗಿರಿಗೌಡರು ರುದ್ರಪ್ಪ, ತಾಯಿ ಅಕ್ಕಮ್ಮ. ಅವರ ತಂದೆಯವರು ಗ್ರಾಂಟ್ ಸ್ಕೂಲ್ನಲ್ಲಿ ಓಚಯ್ಯರಾಗಿ ಕೆಲಸ ಮಾಡುತ್ತಿದ್ದರು. ಓಚಯ್ಯ ಅಂದರೆ ಓದಿಸುವ ಅಯ್ಯ. ಗೊ.ರು.ಚನ್ನಬಸಪ್ಪ ಅವರು ಪ್ರಾಥಮಿಕ ಶಿಕ್ಷಣವನ್ನು ತಂದೆಯವರು ಕೆಲಸ ಮಾಡುತ್ತಿದ್ದ ಹಡಗಲ ತಿಮ್ಮಾಪುರದ ಗ್ರಾಂಟ್ ಸ್ಕೂಲಿನಲ್ಲಿ ಮುಗಿಸಿದರು. ಅವರು ಬಡತನ ಸ್ಥಿತಿಯಲ್ಲಿಯೇ ಮಾಧ್ಯಮಿಕ ಶಿಕ್ಷಣವನ್ನು ಅಜ್ಜಂಪುರದಲ್ಲಿ ಪಡೆದರು. ಅವರು ಬಿರೂರಿನಲ್ಲಿ ಎರಡನೆಯ ಬಾರಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಬರೆಯುವ ಅವಕಾಶ ಒದಗಿ ಬಂದಿತು. ಅವರು ಎರಡನೆಯ ಬಾರಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಹೆಚ್ಚಿನ ಶಿಕ್ಷಣ ಕಲಿಯಲು ಇಚ್ಛೆ ಇದ್ದರೂ ಬಡತನದ ಪರಿಸ್ಥಿತಿಯಿಂದ ಶಿಕ್ಷಣವನ್ನು ಮುಂದುವರೆಸಲಿಲ್ಲ.
ಗೊ.ರು.ಚನ್ನಬಸಪ್ಪ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲು ಪಡೆದ ಇ.ಪಿ.ಎಸ್. ನ ಆಧಾರದ ಮೇಲೆ ನಿಡಘಟ್ಟದ ನ್ಯೂಟೈಪ್ ಮಿಡ್ಲ್ ಸ್ಕೂಲಿನಲ್ಲಿ ಇಂಗ್ಲೀಷ ಶಿಕ್ಷಕರಾಗಿ 1948ರಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. ಗೊ.ರು.ಚನ್ನಬಸಪ್ಪನವರು ನಿಡಘಟ್ಟ, ಕುಡ್ಲೂರು, ಬೆಟ್ಟದಹಳ್ಳಿ, ಹುಣಸಘಟ್ಟ ಮುಂತಾದ ಶಾಲೆಗಳಲ್ಲಿ ಸಹಾಯಾರ್ಥ ನಾಟಕಗಳನ್ನು ಪ್ರದಶರ್ಿಸಿ, ಅದರಿಂದ ಬಂದ ಹಣದಿಂದ ಶಾಲೆಗಳಿಗೆ ಬೇಕಾದ ಪೀಠೋಪಕರಣಗಳನ್ನು ಮಾಡಿಸಿರುವರು. ಗೊ.ರು.ಚನ್ನಬಸಪ್ಪನವರು ಮೊದಲಿನಿಂದಲೂ ವೃಥಾ ಕಾಲಹರಣ ಮಾಡುವವರಲ್ಲ. ಗೊ.ರು.ಚನ್ನಬಸಪ್ಪರು ಗೌರುಪುರದ ಶಾಲೆಯಲ್ಲಿದ್ದಾಗ ಅವರು ಸಮುದಾಯ ಅಭಿವೃದ್ಧಿ ಇಲಾಖೆಯ ಸಮಾಜ ಶಿಕ್ಷಣ ವಿಸ್ತರಣಾಧಿಕಾರಿಯಾಗಿ ಆಯ್ಕೆಗೊಂಡರು. ನಂತರ ಅವರು ಬೆಂಗಳೂರಿನ ವಾತರ್ಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು. ಹೀಗೆ ಸಕರ್ಾರದ ವಿವಿಧ ಹುದ್ದೆಗಳಲ್ಲಿ 40 ವರ್ಷಗಳ ಕಾಲ ದಕ್ಷತೆಯಿಂದ ಸೇವೆ ಸಲ್ಲಿಸಿ ತಾವು ಕೆಲಸ ಮಾಡಿದ ಹುದ್ದೆಗಳಿಗೆ ಘನತೆ, ಗೌರವಗಳನ್ನು ತಂದುಕೊಟ್ಟರು.
ಗೊ.ರು.ಚನ್ನಬಸಪ್ಪ ಅವರು ಗಿರಿಯಾಪುರದ ಮಲ್ಲಮ್ಮನವರನ್ನು 1956ರಲ್ಲಿ ಮದುವೆಯಾದರು. ಗೊ.ರು.ಚನ್ನಬಸಪ್ಪನವರಿಗೆ ಮೂರು ಜನ ಮಕ್ಕಳು. ಆಶೋಕ, ಮುಕ್ತಾಯಿ ಹಾಗೂ ಶಿವಸ್ವಾಮಿ. ಕನರ್ಾಟಕ ಜಾನಪದ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಹೀಗೆ ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸ್ಮರಣೀಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗೊ.ರು.ಚನ್ನಬಸಪ್ಪರವರು ಯಾವದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲಿ, ಅದು ಭ್ರಷ್ಟಾಚಾರ ಮುಕ್ತವಾಗಿರುವಂತೆ ಎಚ್ಚರವಹಿಸಿದವರು. ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳದುಬಂದಿರುವ ಅಪೂರ್ವ ಜಾನಪದ ಸಂಪತ್ತಿನ ಉಳಿವಿಗಾಗಿ ತಮ್ಮನ್ನು ಅಪರ್ಿಸಿಕೊಂಡ ಜಾನಪದ ಪ್ರೇಮಿ. ಜಾನಪದ ಅವರ ಜೀವನಾಡಿಗಳಲ್ಲಿ ಸದಾ ಪ್ರವಹಿಸುತ್ತಿರುವ ಜೀವವಾಹಿನಿ, ಜಾನಪದವನ್ನು ಕುರಿತು ಮಾತನಾಡಲು ನಿಂತರೆ ಸಾಕು ಮೈ ಮರೆಯುತ್ತಾರೆ. ಪ್ರೇಕ್ಷಕರಿಗೆ ಜಾನಪದ ಲೋಕದ ವಿರಾಟ ದರ್ಶನ ಮಾಡಿಸಿದ್ದಾರೆ.
ಗೊ.ರು.ಚನ್ನಬಸಪ್ಪ ಅವರು ಸೃಜನ, ಅನುವಾದಿತ, ಜಾನಪದ ಹಾಗೂ ಸಂಪಾದಿತ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಅಪರ್ಿಸಿದ್ದಾರೆ. ಅವರು 15 ಸೃಜನ, 11 ಅನುವಾದಿತ, 5 ಜಾನಪದ 24 ಸಂಪಾದಿತ, 15 ಇತರೆ ಕೃತಿಗಳನ್ನು ನೀಡಿದ್ದಾರೆ. ಸಾಕ್ಷಿಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವು, ಅಯ್ಯನ ಕೆರೆ, ಗೊಂಡೇದ ಹಳ್ಳಿಯಿಂದ ಬೆಂಗಳೂರಿಗೆ, ಶರಣಾಥರ್ಿ, ಆಲೋಚನೆ, ಅನುಭಾವ, ಅಕ್ಕಮಹಾದೇವಿ ಮುಂತಾದವುಗಳು ಸೃಜನ ಕೃತಿಗಳಾದರೆ, ಮನಬಯಸಿದ ಮರಣ, ಅಮೇರಿಕಾದಲ್ಲಿ ಆಧುನಿಕ ಹೈನುಗಾರಿಕೆ, ಕನ್ನಡ ರಾಷ್ಟ್ರೀಯ ಭಾಷೆ, ಬಸವೇಶ್ವರ, ದಿವ್ಯ ಜ್ಯೋತಿ ಮುಂತಾದವುಗಳು ಅನುವಾದಿತ ಕೃತಿಗಳಾಗಿವೆ. ಬಾಗೂರ ನಾಗಮ್ಮ, ಜೋಗದ ಝೋಕ್ಸ್, ಮೈದುನ ರಾಮಣ್ಣ, ಚಲುವಾಂಬಿಕೆ, ಗ್ರಾಮ ಗೀತೆಗಳು ಜಾನಪದಕ್ಕೆ ಸಂಬಂಧಪಟ್ಟವುಗಳಾಗಿವೆ. ಶರಣ ಕಿರಣ, ಕನರ್ಾಟಕದ ಜಾನಪದ ಕಲೆಗಳು, ಹೊನ್ನ ಬಿತ್ತೇವು ಹೊಲಕ್ಕೆಲ್ಲ, ದಾಸೋಹ, ನೂರೊಂದು ಚಿಂತನ, ಶರಣತತ್ವ ಚಿಂತನ, ಕಲ್ಯಾಣ, ಶರಣ ಸಂಪದ ಮುಂತಾದವುಗಳು ಸಂಪಾದಿತ ಕೃತಿಗಳಾಗಿವೆ.
ಗೊ.ರು.ಚನ್ನಬಸಪ್ಪರವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 1992ರಲ್ಲಿ ಆಯ್ಕೆಯಾದರು. ಅವರು ಪರಿಷತ್ತಿನ ಆಥರ್ಿಕ ಸದೃಢತೆಗೆ 'ಅಮೃತ ನಿಧಿ ಚೀಟಿ' ಗಳನ್ನು ಮುದ್ರಿಸಿ ಮಾರಾಟ ಮಾಡಿ ಅಂದಾಜು 25 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಅವರು ತಮ್ಮ ಅವಧಿಯಲ್ಲಿ ದತ್ತಿ ನಿಧಿ ಮೊತ್ತ ನಾಲ್ಕುವರೆ ಲಕ್ಷದಿಂದ ಇಪ್ಪತ್ನಾಲ್ಕು ಲಕ್ಷ ರೂಪಾಯಿಗಳಿಗೆ ಏರಿಸಿದರು. ಇದೊಂದು ಗಣನೀಯ ಸಾಧನೆ. ಅಲ್ಲದೇ ಅವರು ಕನ್ನಡ ಕವಿಗಳು ರಚಿಸಿದ ನಾಡಗೀತೆಗಳನ್ನು ಖ್ಯಾತ ಸುಗಮ ಸಂಗೀತಗಾರರಿಂದ ಹಾಡಿಸಿ ಮೊದಲ ಬಾರಿಗೆ 'ಹಚ್ಚೇವು ಕನ್ನಡದ ದೀಪ' ಧ್ವನಿಸುರುಳಿಯನ್ನು ಹೊರತಂದರು. ಗೊ.ರು.ಚನ್ನಬಸಪ್ಪರವರು ಗೊಂಡೇದ ಹಳ್ಳಿಯ ಬಿಟ್ಟು ಬೆಂಗಳೂರಿನ ನಾಗರೀಕರಾದರೂ 'ಗ್ರಾಮವಿಕಾಸ ಪ್ರತಿಷ್ಠಾನ' ಸ್ಥಾಪಿಸಿ, ಎಲ್ಲರ ಸಹಕಾರದೊಂದಿಗೆ ಗ್ರಾಮವನ್ನು ಒಂದು ಮಾದರಿ ಗ್ರಾಮವನ್ನಾಗಿ ಪರಿವತರ್ಿಸಿದ್ದಾರೆ. ವಾತರ್ಾ ಇಲಾಖೆಯಲ್ಲಿರುವಾಗಿ ಗೊ.ರು.ಚನ್ನಬಸಪ್ಪ ಅವರ ಸಹ ಸಂಪಾದಕತ್ವದಲ್ಲಿ 'ಪಂಚಾಯತಿ ರಾಜ್ಯ' ಪತ್ರಿಕೆ ಒಳ್ಳೆಯ ಹೆಸರು ಪಡೆಯಿತು. ಸಕರ್ಾರದಿಂದ ತಯಾರಾದ ಎಲ್ಲಾ ಸಾಕ್ಷ್ಯಚಿತ್ರಗಳಿಗೆ ಗೊ.ರು.ಚನ್ನಬಸಪ್ಪ ಅವರೇ ಸಾಹಿತ್ಯ ಒದಗಿಸಿರುವದು ವಿಶೇಷ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು 1995ರಲ್ಲಿ ವಹಿಸಿಕೊಂಡರು. ಅವರು ಅಧ್ಯಕ್ಷರಾದ ಮೇಲೆ ಪರಿಷತ್ತಿನ ಚಟುವಟಿಕೆಗಳನ್ನು ಜಿಲ್ಲಾ ಮಟ್ಟ ಹಾಗೂ ತಾಲೂಕಮಟ್ಟದಲ್ಲಿ ವಿಸ್ತರಿಸಿದರು. ಕನರ್ಾಟಕಕ್ಕೆಷ್ಟೇ ಸೀಮಿತವಾಗಿರದೇ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲೂ ಪರಿಷತ್ತಿನ ಘಟಕಗಳನ್ನು ರಚಿಸಿ ಕಾರ್ಯಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯುವಂತೆ ಮಾಡಿದ್ದುದು ಅವರ ಧೀಶಕ್ತಿಗೆ ಹಿಡಿದ ಕೈಗನ್ನಡಿ, ಮಾಸ ಪತ್ರಿಕೆಯ ಮೂಲಕ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಮುಟ್ಟಿಸುವ ಆಶಯದಿಂದ 'ಮಹಾಮನೆ' ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಗೊ.ರು.ಚನ್ನಬಸಪ್ಪರವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಥವನ್ನು ಕೇವಲ ಸಕರ್ಾರದ ನೆರವಾಗಲಿ ಅಥವಾ ಮತ್ತಾವದೇ ಮೂಲಗಳಿಂದ ಬರುವ ಆದಾಯದ ನೆರವಿನಿಂದಾಗಲಿ ಎಳೆದುಕೊಂಡು ಬರುತ್ತಿಲ್ಲ. ಪರಿಷತ್ತಿನ ಅಜೀವ ಸದಸ್ಯತ್ವದಿಂದ ಬಂದ ಸಂಗ್ರಹವಾದ ಹಣದ ಬಡ್ಡಿ ಮತ್ತು ಗ್ರಂಥಗಳ ಮಾರಾಟದಿಂದ ಬರುವ ಹಣದಲ್ಲಿ ಗೊ.ರು.ಚನ್ನಬಸಪ್ಪರವರು ಪರಿಷತ್ತಿನ ನಿರ್ವಹಣೆಯನ್ನು ಸರಾಗವಾಗಿ ಸಾಗಿಸಿಕೊಂಡು ಬರುತ್ತಿದ್ದಾರೆ. ಇದು ಗೊ.ರು.ಚನ್ನಬಸಪ್ಪ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಆಗಿದೆ. 'ಗೊ.ರು.ಚನ್ನಬಸಪ್ಪ ಅವರ ಜೀವನ ಮತ್ತು ಸಾಧನೆ' ಕುರಿತು ರೇಣುಕಾದೇವಿ ಮಹಾಜನಮಠ ಅವರು ಕಲಬುಗರ್ಿ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಪದವಿ ಪಡೆದಿದ್ದಾರೆ.
ಗೊ.ರು.ಚನ್ನಬಸಪ್ಪರವರು ಸಲ್ಲಿಸಿದ ಸೇವೆಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. ಕನರ್ಾಟಕ ಸಕರ್ಾರದ ರಾಜ್ಯ ಪ್ರಶಸ್ತಿ, ಡಾ.ಸಂ.ಶಿ.ಭೂಸನೂರಮಠ ಪ್ರಶಸ್ತಿ, ಆಳ್ವಾಸಿರಿ, ದೊಡ್ಡ ಮೇಟಿ ಅಂದಾನೆಪ್ಪ,ಕೆಳದಿ ಶಿವಪ್ಪ ನಾಯಕ, ಜಾನಪದ ಅಕಾಡೆಮಿ, ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಪ್ರಶ್ತಿಗಳು, ರಾಷ್ಟ್ರೀಯ ಬಸವ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ. ವಿಶೇಷವೆಂದರೇ ಪ್ರಶಸ್ತಿಗಳಿಂದ ಬಂದ ಗೌರವಧನವನ್ನು ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ನೀಡಿದ್ದಾರೆ. ಸರಳತೆ, ಸಜ್ಜನಿಕೆ, ಸಹೃದಯತೆಯಿಂದ ನಾಡಿನ ಜನರ ಪ್ರೀತಿ, ವಿಶ್ವಾಸ, ಗೌರವಕ್ಕೆ ಪಾತ್ರರಾಗಿರುವ ಗೊ.ರು.ಚನ್ನಬಸಪ್ಪನವರು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಶಿಸ್ತು, ದಕ್ಷತೆ, ಸಮಯ ಪರಿಪಾಲನೆ ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಿರುವ ಅಪರೂಪದ ವ್ಯಕ್ತಿ, ಗೊ.ರು.ಚನ್ನಬಸಪ್ಪನವರು ನಾಡು, ನುಡಿ, ಕಲೆ, ಸಂಸ್ಕೃತಿಯ ಬಗ್ಗೆ ಅಪಾರವಾದ ಅಭಿಮಾನ ಗೌರವನ್ನು ಹೊಂದಿದವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಗಳನ್ನು ತಮ್ಮ ಘನ ಅಧ್ಯಕ್ಷತೆಯಲ್ಲಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅವರಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು, ಮೌಲಿಕ ಕೃತಿಗಳು ಹೊರಹೊಮ್ಮಲಿ ಎನ್ನುವದೇ ನಮ್ಮೆಲ್ಲರ ಆಸೆ.