ಲೋಕದರ್ಶನವರದಿ
ಮಹಾಲಿಂಗಪುರ13: ಹಳ್ಳಿ ಸೊಗಡಿನ ಜನರ ಜೀವ, ಭಾವಗಳ ಸಂಗಮವಾಗಿದ್ದ ಜನಪದ ಸಾಹಿತ್ಯ ಮರೆಯಾಗುತ್ತಿರುವುದು ಚವಿಷಾದಕರ ಸಂಗತಿ ಎಂದು ಮಹಾಲಿಂಗಪುರ ವಲಯ ಕಜಾಪ ಅಧ್ಯಕ್ಷ ಬಸವರಾಜ ಮೇಟಿ ಹೇಳಿದರು.
ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯಲ್ಲಿ 2019-20ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾಥರ್ಿಗಳು ಜನಪದ ಸಾಹಿತ್ಯ ಓದಿ, ಕೇಳಿ ಉತ್ತಮ ಸೃಜನಶೀಲತೆ ಬೆಳೆಸಿಕೊಂಡು ಬದುಕಿನ ಸಾರ್ಥಕತೆಯನ್ನು ಅರಿಯಬೇಕು ಎಂದರು. ಜಾನಪದ ಗೀತೆ, ಗೀಗಿ ಪದ ಹಾಗೂ ಒಗಟುಗಳನ್ನು ಹೇಳುವ ಮೂಲಕ ಮಕ್ಕಳನ್ನು ರಂಜಿಸಿದರು. ಚಿತ್ರಕಲಾ ಶಿಕ್ಷಕ ಎಂ.ಐ,ಡಾಂಗೆ ಮಾತನಾಡಿ ಲಲಿತ ಕಲೆಗಳತ್ತ ಆಸಕ್ತಿ ತೋರುವ ಮೂಲಕ ವಿದ್ಯಾಥರ್ಿಗಳು ಸಾಧಕರಾಗಬೇಕು ಎಂದರು.
ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 2019-20ನೇ ಸಾಲಿನ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯಾಥರ್ಿ ಪ್ರತಿನಿಧಿಗಳಾದ ಸಾಗರ ಭಜಂತ್ರಿ ಮತ್ತು ವಿದ್ಯಾ ಮೂಡಲಗಿ ಅವರನ್ನು ಸನ್ಮಾನಿಸಲಾಯಿತು.
ಉಪಪ್ರಾಂಶುಪಾಲ ಆರ್.ಎ.ಸೂರ್ಯವಂಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಎಸ್.ಜಿ.ಜೀವನಿ ಸ್ವಾಗತಿಸಿದರು. ಆರ್.ಎಸ್.ಯರಗಾನಿ ನಿರೂಪಿಸಿದರು. ಎಸ್.ಆರ್. ಅಡ್ಲಿಮಠ ವಂದಿಸಿದರು. ಹಿರಿಯ ಶಿಕ್ಷಕರಾದ ಬಿ.ಡಿ ಗೋಕಾಕ, ಬಿ.ಎನ್.ಅರಕೇರಿ, ಡಿ.ಎ. ಬಿಸನಾಳ, ಸಿ.ಎಸ್.ಕೊಣ್ಣೂರ, ಎಸ್.ಎಸ್.ಅನಿಗೋಳ, ಕೆ.ಬಿ.ಬಡ್ಡೂರ, ಎಂ.ಎಲ್.ರಮೇಶಬಾಬು, ಪಿ.ಎಂ.ಪಡೇಸೂರ, ಪಿ.ಎಸ್.ಕುಡತೆ ಇದ್ದರು.