ಪ್ರವಾಹ ಪರಿಹಾರ ಕಾರ್ಯಾಚರಣೆ ಸಹಕಾರ ಅಗತ್ಯ: ಡಿಸಿ

ಬಾಗಲಕೋಟೆ: ಪ್ರವಾಹ ನಂತರದ ಬದುಕು ಕಟ್ಟಿಕೊಳ್ಳುವಲ್ಲಿ ಸಹಾಯ ಸಹಕಾರ ಮಾಡುವ ಸಂಘ-ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲೆಯ ನೆರೆ ಪರಿಹಾರ ಕಾಯರ್ಾಚರಣೆಯಲ್ಲಿ ತೊಡಗಿಸಿಕೊಳ್ಳಲು ವಿವಿಧ ಸರಕಾರೇತರ ಹಾಗೂ ಇತರೆ ಸಂಘ ಸಂಸ್ಥೆಗಳ ಸಮನ್ವಯ ಸಾಧಿಸಲು ಹಮ್ಮಿಕೊಂಡ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರು, ವಿದ್ಯಾಥರ್ಿಗಳು ಹಾಗೂ ಮಹಿಳೆಯರ ಗಮನದಲ್ಲಿಟ್ಟುಕೊಂಡು ತಮ್ಮ ವ್ಯಾಪ್ತಿಯಲ್ಲಿ ಏನೇಲ್ಲ ಸಹಾಯ ಮಾಡಬಹುದಾಗಿದೆ ಎಂಬುದನ್ನು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.

ಹಿಂದೆಂದೂ ಕಂಡರಿಯದ ದೊಡ್ಡ ಪ್ರಮಾಣದ ಪ್ರವಾಹ ಇದಾಗಿದ್ದು, ಈ ಪ್ರವಾಹದಿಂದ ಜಿಲ್ಲೆಯ ಜನರ ಬದುಕು ಕೊಚ್ಚಿ ಹೋಗಿದೆ. ಆಸ್ತಿ-ಪಾಸ್ತಿ, ಜನ-ಜಾನುವಾರು, ಕೃಷಿ, ತೋಟಗಾರಿಕೆ ಬೆಳೆ ಹಾನಿಗೊಳಗಾಗಿವೆ. ಸಂತ್ರಸ್ತರ ಜೀವನವನ್ನು ಪುನಃ ಕಟ್ಟಿಕೊಡುವ ಕಾರ್ಯ ಮಹತ್ವದ್ದಾಗಿದ್ದು, ಸರಕಾರದ ಜೊತೆ ಸಮುದಾಯ ಕೈಜೋಡಿಸುವ ಅಗತ್ಯವಿದೆ. ಪ್ರವಾಹದ ನೀರು ನುಗ್ಗಿ ದೈನಂದಿನ ಬದುಕು ಕಟ್ಟಿಕರ್ೊಳ್ಳುವ ದೃಷ್ಠಿಯಿಂದ ತುತರ್ಾಗಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ಹಾಗೂ ವಿಶೇಷ ಫುಡ್ ಪ್ಯಾಕೇಟಗಳನ್ನು 46 ಸಾವಿರ ಕುಟುಂಬಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಪರಿಹಾರದಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ. ನಡೆಯಲು ಆಸ್ಪದ ನೀಡುವದಿಲ್ಲ. ಹಾನಿಗೊಳಗಾದ ಮನೆಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಛಾಯಾಚಿತ್ರದ ಸಮೇತ ಟ್ಯಾಗ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಪ್ರತಿಯೊಂದು ಸಂತ್ರಸ್ತರಿಗೆ ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪರಿಹಾರಧನವನ್ನು ಜಮಾ ಮಾಡಲಾಗುತ್ತಿದೆ 138 ಕ್ಕೂ ಅಧಿಕ ಸರಕಾರಿ ಶಾಲಾ ಕೊಠಡಿಗಳು ಹಾನಿಯಾಗಿದ್ದು, ಈಗಾಗಲೇ ಪರಿಹಾರ ಕೇಂದ್ರಕ್ಕಾಗಿ ಸ್ಥಾಪಿಸಲಾದ ಶೆಡ್ ಖಾಲಿಯಾಗಿದ್ದರಿಂದ ಅಲ್ಲಿಯೇ ಶಾಲೆ ಮತ್ತು ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 70 ಶೆಡ್ ನಿಮರ್ಿಸಲಾಗಿದೆ ಎಂದರು.

ಆಕಸ್ಮಿಕವಾಗಿ ಬಂದೊದಗಿದ ಪ್ರವಾಹದಿಂದ ಎದೆಗುಂದದೇ ಮಾನಸಿಕವಾಗಿ, ಆಥರ್ಿಕವಾಗಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸದಾ ಸನ್ನದ್ದರಾಗಿರಬೇಕೆಂಬ ಅನಿವಾರ್ಯತೆ ಇದೆ. ಪ್ರವಾಹದಿಂದ ಶೇ.25, ಶೇ,25 ರಿಂದ 75 ಹಾಗೂ ಶೇ.75ಕ್ಕಿಂತ ಹೆಚ್ಚಿಗೆ ಹಾನಿಗೊಳಗಾದ ಮನೆಗಳು ಒಟ್ಟು 7500 ಇದ್ದು, ಸಂಪೂರ್ಣ ಹಾನಿಗೊಳಗಾದ ಮನೆ ಕಟ್ಟಿಕೊಡಲು ಈಗಾಗಲೇ ರಾಜೀವಗಾಂಧಿ ವಸತಿ ನಿಗಮಕ್ಕೆ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ಪ್ರವಾಹ ಸಂದರ್ಭದಲ್ಲಿ ದಾನಿಗಳಿಂದ, ಸಂಘ ಸಂಸ್ಥೆಗಳಿಂದ ಸಾಕಷ್ಟು ಸಹಾಯವಾಗಿದೆ. ಊಟ, ಮೆಡಿಸಿನ್, ಬಟ್ಟೆ, ಇತರೆ ಸಾಮಗ್ರಿಗಳನ್ನು ಸಂತ್ರಸ್ತರಿಗೆ ನೀಡಿದ್ದಾರೆ. ಪ್ರವಾಹದ ನಂತರ ಸಂತ್ರಸ್ತರ ಬದುಕು ಕಟ್ಟಿಕೊಳ್ಳಲು ವಿವಿಧ ಸಂಘ ಸಂಸ್ಥೆಗಳ ಸಹಕಾರವೂ ಸಹ ಅಗತ್ಯವಾಗಿದೆ. ಕೌಶಲ್ಯ ತರಬೇತಿ, ಉದ್ಯೋಗ ಒದಗಿಸುವುದು ಸೇರಿದಂತೆ ಕೆಲವೆಡೆ ಸಣ್ಣ ಪುಟ್ಟ ಅಂಗಡಿಗಳು, ವಾಣಿಜ್ಯ ಚಟುವಟಿಕೆಗಳಿಗೆ ದಾನಿಗಳ ಸಹಾಯ ಅಗತ್ಯವಿದೆ ಎಂದು ತಿಳಿಸಿದರು.

ವಿಪ್ರೋ ಕಂಪನಿಯ ವತಿಯಿಂದ ಜಗನ್ನಾಥ ಮತ್ತು ರಘು ಎಂಬುವರು ಜಿಲ್ಲೆಗೆ ಆಗಮಿಸಿದ್ದು, ಇವರು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ದತ್ತು ಪಡೆಯಲಿದ್ದಾರೆ. ಇದರಂತೆ ಸಹಾಯಕ್ಕಾಗಿ ಇತರೆ ಸಂಘ ಸಂಸ್ಥೆಗಳು ತಾವುಗಳು ಯಾವ ಯಾವ ಕ್ಷೇತ್ರಗಳಲ್ಲಿ ಯಾವ ರೀತಿ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದರು. 

  ಕಾಯರ್ಾಗಾರದಲ್ಲಿ ಪಾಲ್ಗೊಂಡ ಹುಮಾನಿಟೇರಿಯನ್ ರಿಲೀಪ್ ಸೊಸೈಟಿಯವರು 15.90 ಲಕ್ಷ ರೂ.ಗಳ ವೆಚ್ಚದಲ್ಲಿ 64 ಮನೆ, 50 ಶೌಚಾಲಯ ನಿಮರ್ಿಸಲು ತಿಳಿಸಿದರು. ರುಡ್ಸೆಟ್ ಸಂಸ್ಥೆ 20-30 ಬ್ಯಾಚ್ಗಳಲ್ಲಿ ಕೌಶಲ್ಯ ತರಬೇತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಮುಖ ಉಪಕರಣ, ಎಪಿಡಿ ಸಂಸ್ಥೆಯಿಂದ 400 ಜನರಿಗೆ ವಿಶೇಷ ಚೇತನರಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಬೇಕಾದ ತರಬೇತಿ ನೀಡುವುದಾಗಿ ತಿಳಿಸಿದರು. ರೀಚ್ ಸಂಸ್ಥೆಯಿಂದ 90-120 ಜನರಿಗೆ ಕೌಶಲ್ಯ ತರಬೇತಿ, ಆ್ಯಕ್ಷನ್ ಏಡ್ ಸಂಸ್ಥೆಯಿಂದ ಮುಧೋಳ ತಾಲೂಕಿನ 5 ಗ್ರಾ.ಪಂಗಳ ತುತರ್ು ನಿರ್ವಹಣೆ, ದೇವದಾಸಿ ಮಹಿಳೆಯರಿಗೆ ಸಹಾಯ, ತಕ್ಷಶಿಲಾ ಸಂಸ್ಥೆಯಿಂದ ಹುನಗುಂದ ತಾಲೂಕಿನ 5 ಗ್ರಾಮಗಳಲ್ಲಿ ಜಾನುವಾರುಗಳ ಆರೋಗ್ಯ ಶಿಬಿರ, ಶಾಯಿ ಸಂಸ್ಥೆಯಿಂದ ಹೊಲಿಗೆ, ಸ್ಪೋಕನ ಇಂಗ್ಲೀಷ ತರಬೇತಿ ನೀಡುವುದಾಗಿ ತಿಳಿಸಿದರು.

  ಕಾಯರ್ಾಗಾರದಲ್ಲಿ ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ 26 ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.