ಸಿದ್ದಶಂಕರಾನಂದ ಪ್ರೌಡಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ
Flag hoisting ceremony for the 79th Independence Day at Siddashankarananda High School
ಸಿಂದಗಿ 16: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರ ತ್ಯಾಗ, ಬಲಿದಾನ ಹಾಗೂ ಶಾಂತಿಯುತ ಹೋರಾಟ, ಕ್ರಾತಿಯ ಕಹಳೆಯ ಮೂಲಕ ಸ್ವತಂತ್ರ ಪಡೆಯಲಾಗಿದೆ ಗಡಿಯಲ್ಲಿ ನಮ್ಮೇಲ್ಲರ ರಕ್ಷಣೆಗೆ ಸದಾ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಯೋಧರನ್ನು ದಿನನಿತ್ಯ ಒಮ್ಮೆಯಾದರು ನೆನೆಯಬೇಕು ಅಂದಾಗ ಸ್ವಾತಂತ್ರ್ಯ ಪಡೆದಕ್ಕೂ ಸ್ವಾರ್ಥಕವಗುತ್ತದೆ ಎಂದು ನಿವೃತ್ತ ಪೊಲೀಸ ಅದಿಕಾರಿ ಸಂಸ್ಥೆಯ ನಿರ್ದೇಶಕ ಎಂ.ಎಂ.ಹಂಗರಗಿ ಹೇಳಿದರು.
ತಾಲೂಕಿನ ಯರಗಲ್ ಗ್ರಾಮದ ಸಿದ್ದಶಂಕರಾನಂದ ಪ್ರೌಡಶಾಲೆಯ ಆವರಣದಲ್ಲಿ 79ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, 1947ರಲ್ಲಿ ಬ್ರೀಟೀಷರ ದಾಸ್ಯದಿಂದ ಪಡೆದ ಸ್ವಾತಂತ್ರ್ಯೋತ್ಸವವನ್ನು ರಾಷ್ಟ್ರೀಯ ಹಬ್ಬವಾಗಿ ಸಂಭ್ರಮದಿಂದ ಆಚರಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ. ಬರೀ ವಿದ್ಯಾರ್ಥಿಗಳ ಪಾತ್ರವಷ್ಟೆ ಅಲ್ಲ ಪಾಲಕರು ಕೂಡಾ ಸಂಭ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷ ಲಕ್ಷ್ಮಣ ಕುಲಕರ್ಣಿ, ನಿರ್ದೆಶಕ ಭೀಮಣ್ಣ ಹೆರೂರ, ಹಣಮಂತ ಮಂಟೋಳಿ, ಅಲ್ಲಿಸಾಬ ಬಂಕಲಗಿ, ಶಾಂತಪ್ಪ ಮರಡಿ, ಶಿವಾನಂದ ಪಲ್ಲೇದ, ಮುಖ್ಯೋಪಾದ್ಯಯ ಅರುಣಕುಮಾರ ನಾಯ್ಕೋಡಿ, ರಾಜು ಯಡ್ರಾಮಿ, ಮಲ್ಲಿಕಾರ್ಜೂನ ಅಂಬಿಗೇರ, ಅಶ್ವಿನಿ ಚವ್ಹಾಣ, ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 