ಕಾರವಾರ 27: ಯಾಂತ್ರೀಕೃತ ದೋಣಿಗಳು ಜೂನ್ 01 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರಿಕೆ ಮಾಡುವುದನ್ನು ರಾಜ್ಯ ಸರ್ಕಾ ರ ಹಾಗೂ ಮೀನುಗಾರಿಕಾ ಇಲಾಖೆ ನಿಷೇಧಿಸಿದೆ. ಮಳೆಗಾಲ ಮೀನು ಸಂತಾನೋತ್ಪತ್ತಿ ಕಾಲವಾದ್ದರಿಂದ ಜೂನ್ -ಜುಲೈ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರುವುದು ಸಂಪ್ರದಾಯಿಕ ಕ್ರಮವಾಗಿದೆ. ಕೇಂದ್ರ ಸಕರ್ಾರ ಸಹ ಎಲ್ಲಾ ಕರಾವಳಿ ರಾಜ್ಯಗಳಲ್ಲಿ ಮಳೆಗಾಲದ ಅವಧಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಹೇರುತ್ತದೆ. ಆದರೆ ಸಂಪ್ರದಾಯಿಕ ಮೀನುಗಾರಿಕೆ ಜಾರಿಯಲ್ಲಿರುತ್ತದೆ. ಸಂಪ್ರದಾಯಿಕ ಬಲೆಗಳನ್ನು ಬಳಸಿ ದಡದಲ್ಲಿ ಮೀನುಗಾರಿಕೆ ಮಾಡಬಹುದಾಗಿದೆ.
ಕರ್ನಾ ಟಕ ಸಕರ್ಾರದ ಅಧಿಸೂಚನೆ ಸಂಖ್ಯೆ:ಪಸಂಮೀ:63:ಮೀಇಯೋ/2014 ಯಂತೆ 13 ಮೇ 2015ರ ಪ್ರಕಾರ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳನ್ನು ಬಳಸಿ ಮೀನುಗಾರಿಕೆ ಮಾಡುವುದು ಅಪರಾಧವಾಗಿದೆ. ಯಾವುದೇ ಬಲೆಗಳನ್ನು ಅಥವಾ ಸಾಧನಗಳನ್ನು ಉಪಯೋಗಿಸಿ ಕನರ್ಾಟಕ ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ಆರಂಭ ದಿಂದ ಜುಲೈ ಅಂತ್ಯದ ವರೆಗೆ ಯಾಂತ್ರೀಕೃತ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. 61 ದಿನಗಳಲ್ಲಿ ಸಮುದ್ರದ ಮೀನುಗಳು ನದಿಯ ಹಿನ್ನೀರಿಗೆ ಬಂದು ಕಾಂಡ್ಲಾ ವನದ ಬುಡುಗಳಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಈ ಕಾರಣದಿಂದ ಮೀನು ಸಂತಾನೋತ್ಪತ್ತಿ ಕಾಲದಲ್ಲಿ ಕನರ್ಾಟಕ, ಕೇರಳ, ಗೋವಾ, ಮಹಾರಾಷ್ಟ್ರ. ಗುಜರಾತ್, ತಮಿಳುನಾಡು, ಆಂದ್ರ, ಓರಿಸ್ಸಾ, ಪಶ್ಚಿಮ ಬಂಗಾಳ ಜಿಲ್ಲೆಗಳಲ್ಲಿ ಮೀನುಗಾರಿಕೆಗೆ ನಿಷೇಧ ಇರುತ್ತದೆ. ಆಳ ಸಮುದ್ರದಲ್ಲಿ ಸಹ ಮೀನು ಸಂತತಿ ಬೆಳೆಯುವ ಕಾರಣ ಆಳ ಸಮುದ್ರ ಮೀನುಗಾರಿಕೆಗೆ ಸಹ ಸಂಪೂರ್ಣ ನಿಷೇಧ ಇರುತ್ತದೆ.
ಯಾವುದಕ್ಕೆ ಅನುಮತಿ ಇದೆ :
ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಕೇವಲ ದೋಣಿಗಳ ಚಲನವಲನಕ್ಕಾಗಿ 10 ಅಶ್ವಶಕ್ತಿಯವರೆಗಿನ ಸಾಮಥ್ರ್ಯದ ಮೋಟಾರೀಕೃತ ದೋಣಿ ಮತ್ತು ಸಾಂಪ್ರದಾಯಿಕ ನಾಡದೋಣಿಗಳ ಮೂಲಕ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ಇರುತ್ತದೆ.
ಕನರ್ಾಟಕ ಸಕರ್ಾರದ ಮೀನುಗಾರಿಕಾ ನಿಷೇಧದ ಅಧಿಸೂಚನೆಯನ್ನು ಉಲ್ಲಂಘಿಸುವ ಮೀನುಗಾರಿಕೆ ದೋಣಿಗಳು ಮತ್ತು ಮೀನುಗಾರರು ಕನರ್ಾಟಕ ಕಡಲ ಮೀನುಗಾರಿಕೆ (ನಿಯಂತ್ರಣ)ಕಾಯ್ದೆ 1986ರಲ್ಲಿ
ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುತ್ತಾರೆ. ಅಲ್ಲದೇ ಒಂದು ವರ್ಷದ ಅವಧಿಗೆ ರಾಜ್ಯ ಮಾರಾಟಕರ ರಹಿತ ಡಿಸೇಲ್ ಪಡೆಯಲು ಮತ್ತು ಕೇಂದ್ರ ಅಬ್ಕಾರಿ ತೆರಿಗೆ ಮರು ಪಾವತಿಯನ್ನು ಪಡೆಯಲು ಅನರ್ಹರಾಗಿತ್ತಾರೆಂದು ಕಾರವಾರದ ಮೀನುಗಾರಿಕೆ ಉಪನಿದರ್ೇಶಕ ಪಿ.ನಾಗರಾಜ್ ಯಾಂತ್ರೀಕೃತ ಮೀನುಗಾರರನ್ನು ಎಚ್ಚರಿಸಿದ್ದಾರೆ.
ಮತ್ಸ್ಯ ಸಂಕುಲ ಅಭಿವೃದ್ಧಿಗೆ ಸಕಾಲ :
ಮತ್ಸ್ಯ ಸಂಕುಲ ಈಚಿನ ದಿನಗಳಲ್ಲಿ ಕುಗ್ಗುತ್ತಾ ಬಂದಿದೆ. ಕರಾವಳಿಯಲ್ಲಿ ಆಳ ಸಮುದ್ರದಲ್ಲಿ ಬುಲ್ ಟ್ರಾಲ್ ಮತ್ತು ಲೈಟ್ ಫಿಶ್ಶಿಂಗ್ ಮಾಡಿದ ಕಾರಣ ಮತ್ಸ್ಯ ಸಂಪತ್ತು ಬರಿದಾಗುತ್ತಾ ಬಂದಿದ್ದು, ಕನಿಷ್ಠ ಪಕ್ಷ ಮಳೆಗಾಲದಲ್ಲಿ ಮೀನುಗಾರಿಕೆ ನಿಷೇಧ ಹೇರಿದರೆ ಮತ್ಸ್ಯ ಸಂಕುಲ ಬೆಳೆಯುತ್ತದೆ ಎಂಬುದು ಸಮುದ್ರ ವಿಜ್ಞಾನಿಗಳ ಅಭಿಪ್ರಾಯ. ಮತ್ಸ್ಯ ಸಂಪತ್ತು ಅಗಾಧವಾಗಿದೆ. ಆದರೆ ಆ ಸಂತತಿ ಬೆಳೆಯಲು ಬಿಡದಿದ್ದರೆ ಹೇಗೆ ಎಂದು ಕಡಲಜೀವಿ ವಿಜ್ಞಾನದ ಸಂಶೋಧಕರು ಪ್ರಶ್ನೆ ಎತ್ತುತ್ತಿದ್ದಾರೆ. ಹಾಗಾಗಿ ಕೃತಕವಾಗಿ ಸಮುದ್ರ ಹಾಗೂ ನದಿ ಅಳಿವೆಗಳಲ್ಲಿ ಕೃತಕವಾಗಿ ಮೀನು ಬೆಳೆಸು ತಂತ್ರಗಾರಿಕೆಯನ್ನು ಮೀನುಗಾರರಿಗೆ ಪರಿಚಯಿಸಲಾಗುತ್ತಿದೆ. ಪಯರ್ಾಯವಾಗಿ ಮೀನು ಆಹಾರವನ್ನು ಉತ್ಪಾದಿಸುವ ಕ್ರಮವಾಗಿದೆ. ಇದು ಸಮುದ್ರದಲ್ಲಿ ಮೀನಿನ ಸಂತತಿ ಕ್ಷೀಣಿಸುತ್ತಿರುವುದರ ಸಂಕೇತವೂ ಆಗಿದೆ. ಹಾಗಾಗಿ ಮೀನುಗಾರರು ಸಮುದ್ರ ಸಂಪತ್ತು ಉಳಿಸಿಕೊಳ್ಳಲು ಮಳೆಗಾಲದಲ್ಲಿ ಮೀನುಗಾರಿಕೆಗೆ ವಿರಾಮ ನೀಡಬೇಕು ಎಂಬುದು ಸಮುದ್ರ ಜೀವವಿಜ್ಞಾನಿಗಳ ಸಲಹೆಯೂ ಈಚಿನ ದಿನಗಳಲ್ಲಿ ಪ್ರಬಲವಾಗಿ ಬರತೊಡಗಿದೆ.