ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಯಶಸ್ವಿ

ಕೊಪ್ಪಳ 11: ಮೀನುಗಾರಿಕೆ ಇಲಾಖೆ ಸಾಲಿಗೆ ರಾಜ್ಯ ವಲಯ ಯೋಜನೆಯಡಿ ವತಿಯಿಂದ ಹಮ್ಮಿಕೊಳ್ಳಲಾದ "ಮೀನು ಕೃಷಿಕರ ದಿನಾಚರಣೆ" ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.  

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ತಾಲೂಕಿನ ಶಿವಪುರ ಮೀನುಮರಿ ಉತ್ಪದಾನಾ ಕೇಂದ್ರದಲ್ಲಿ ರಾಷ್ಟ್ರೀಯ ಮೀನುಕೃಷಿಕರ ದಿನಾಚರಣೆಯನ್ನು ಬುಧವಾರದಂದು (ಜು.10 ರಂದು) ಆಚರಿಸಲಾಯಿತು.  

ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಎನ್.ಕೆ. ತೊರವಿ ಅವರು ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲೆಯ ಅರ್ಹ ಮೀನುಗಾರರು ಮೀನುಗಾರಿಕೆ ಇಲಾಖೆಯ ವಿವಿದ ಯೋಜನೆಗಳಡಿ ಇರುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು.  ಇಲಾಖೆಯವರು ಸಕರ್ಾರದ ಸೌಲಭ್ಯಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಬೇಕು ಎಂದರು.   

ಮೀನುಗಾರಿಕೆ ಹಿರಿಯ ಸಹಾಯಕ ನಿದರ್ೇಶಕ .ಪಿ.ಬಸವರಾಜ ಅವರು ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ, ಮೀನುಮರಿ ಉತ್ಪಾದನೆ ಹಾಗೂ ಕೆರೆ ವಿಲೇವಾರಿ ಪ್ರಕ್ರಿಯೆ ಕುರಿತು ಮೀನುಗಾರರಿಗೆ ಮಾಹಿತಿ ನೀಡಿದರು.

ಮೀನುಗಾರಿಕೆ ಸಹಾಯಕ ನಿದರ್ೇಶಕ ಕೆ. ಚಂದ್ರಶೇಖರ ಮಾತನಾಡಿ, ಮೀನುಕೃಷಿಕರ ದಿನಾಚರಣೆಯನ್ನು 1957 ಜುಲೈ. 10 ರಂದು ಡಾ. ಹಿರಾಲಾಲ್ ಚೌಧರಿ ಮತ್ತು ಡಾ. ಆಲಿಕುನಿ ಎಂಬ ಮೀನುಗಾರಿಕೆ ವಿಜ್ಞಾನಿಗಳ ಪರಿಶ್ರಮದಿಂದಾಗಿ ಏಶಿಯಾದಲ್ಲಿಯೇ ಪ್ರಪ್ರಥಮ ಬಾರಿಗೆ ನಿಂತ ನೀರಿನಲ್ಲಿ ಓವಾಪ್ರಿಮ್ ಮತ್ತು ಓವಾಟೈಡ್ ಎಂಬ ಹಾಮರ್ೋನ್ಗಳನ್ನು ಬಳಸಿ ಮೀನುಮರಿ ಸಂತಾನೋತ್ಪತ್ತಿಯನ್ನು ಪ್ರಾರಂಭ ಮಾಡಿ ಅಂದಿನಿಂದ ಪ್ರಾರಂಭವಾಗಿದೆ.  ಮೀನುಗಾರಿಕೆ ಕ್ರಾಂತಿಯಲ್ಲಿ ನಮ್ಮ ದೇಶ ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಮೀನು ಉತ್ಪಾದಿಸುವ ದೇಶವಾಗಿ ನೀಲಿಕ್ರಾಂತಿನ್ನೇ ಪ್ರಾರಂಭ ಮಾಡಿತು.  ನಮ್ಮ ದೇಶದಲ್ಲಿ 40 ಲಕ್ಷ ಮೀನುಗಾರರಿದ್ದು 2017-18ನೇ ಸಾಲಿನ ಅಂದಾಜು ಪ್ರಕಾರ ಇಂದು ದೇಶದಲ್ಲಿ 12.60 ಮಿ.ಮೆ.ಟನ್ ನಷ್ಟು ಮೀನು ಉತ್ಪಾದನೆಯಾಗುತ್ತಿದೆ.  ಅದರಲ್ಲಿ 13.37 ಲಕ್ಷ ಟನ್ ಮೀನು ಉತ್ಪನ್ನ ವಿದೇಶಕ್ಕೆ ರಫ್ತಾಗುತ್ತಿದ್ದು, ಇದರಿಂದ 45.106.89 ಕೋಟಿ ಆದಾಯ ಸಕರ್ಾರಕ್ಕೆ ಬರುತ್ತಿದೆ.  ಮೀನುಗಾರಿಕೆ ಕ್ಷೇತ್ರವು ದೇಶದ ಒಟ್ಟು ಜಿ.ಡಿ.ಪಿಯ 0.91% ಮತ್ತು ಕೃಷಿ ಜಿ.ಡಿ.ಪಿಯ 5.22% ರಷ್ಟು ಕೊಡುಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.  

ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕು ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಟಿ. ಕೃಷ್ಣಮೂತರ್ಿ, ಮೀನುಗಾರಿಕೆ ಸಹಾಯಕ ನಿದರ್ೇಶಕರು (ಶ್ರೇಣಿ-2) ಶಿವಪುರ ರಜಿನೀಶ್, ಗಂಗಾವತಿ ಮೀನುಗಾರಿಕೆ ಸಹಾಯಕ ನಿದರ್ೇಶಕರು (ಶ್ರೇಣಿ-2) ಆನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.