ನ. 5 ರಂದು ಶಿವಗಿರಿಯಲ್ಲಿ ಪ್ರಥಮ ಸರಳ ಸಾಮೂಹಿಕ ವಿವಾಹ
First simple mass wedding in Shivagiri on Nov. 5
ವಿಜಯಪುರ 04: ನಗರದ ಹೊರವಲಯದ ಉಕ್ಕಲಿ ರಸ್ತೆಯ ಶಿವಗಿರಿಯಲ್ಲಿ ನವೆಂಬರ್ 5 ರಂದು ಪ್ರಥಮ ಸರಳ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು, 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದು ಖ್ಯಾತ ಚಲನಚಿತ್ರ ನಟ, ನಿರ್ಮಾಪಕ, ಟಿ.ಕೆ. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಬಸಂತಕುಮಾರ ಪಾಟೀಲ ಹೇಳಿದರು.
ದಿ. 03 ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿರುವ ಟಿ.ಕೆ. ಪಾಟೀಲ ಬೆನಕಟ್ಟಿ ಪ್ರತಿಷ್ಠಾನದ ಆಶ್ರಯದಲ್ಲಿ ಈ ಬಾರಿಯೂ ಅನೇಕ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಕಳೆದ ಹಲವಾರು ದಿನಗಳಿಂದಲೇ ಸರಳ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು, ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆಯೂ ದೊರಕಿ 45 ಕ್ಕೂ ಹೆಚ್ಚು ಮನವಿಗಳು ಬಂದಿದ್ದವು, ಆದರೆ ಅದರಲ್ಲಿ ನಿಯಮಾವಳಿ ಆಧರಿಸಿ ಅರ್ಜಿ ವಿಲೇವಾರಿ ಮಾಡಿದಾಗ ಅದಿಕೃತವಾಗಿ 11 ಜೋಡಿಗಳಿಗೆ ಮಾತ್ರ ಸಾಮೂಹಿಕ ವಿವಾಹದಲ್ಲಿ ಅವಕಾಶ ಕಲ್ಪಿಸಲಾಗಿದೆ, ಮುಂದೆ ಎಷ್ಟೇ ಜೋಡಿ ಬಂದರೂ ಸಹ ನಾವು ವಿವಾಹ ಸಮಾರಂಭ ಏರಿ್ಡಸಲು ಟ್ರಸ್ಟ್ ಬದ್ಧವಿದೆ ಎಂದರು.
ಸಾಮೂಹಿಕ ವಿವಾಹದಲ್ಲಿ ವಧುವಿಗೆ ಸೀರೆ, ತಾಳಿ, ಕಾಲುಂಗುರ, ವರನಿಗೆ ಶರ್ಟ್, ಪಂಚೆ ಹಾಗೂ ಮೈಸೂರು ಪೇಟಾ ಬಾಸಿಂಗ, ನೀಡಲಾಗುವುದು, ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಗುವುದು ಎಂದರು.
ಕಟ್ಟಿಮನಿ ಹಿರೇಮಠ ಡೋಣೂರು ಷ.ಬ್ರ. ಡಾ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಮಸೂತಿಯ ಜಗದೀಶ್ವರ ಹಿರೇಮಠದ ಮ.ಘ.ಚ ಪ್ರಭುಕುಮಾರ ಶಿವಾಚಾರ್ಯರು ಮಹಾಸ್ವಾಮಿಗಳು, ವಿಜಯಪುರದ ಸಿದ್ಧೇಶ್ವರ ಜ್ಞಾನ ಯೋಗಾಶ್ರಮದ ಅಧ್ಯಕ್ಷರು ಗುರುಗಳಾದ ಪ.ಪೂ. ಬಸವಲಿಂಗ ಮಹಾಸ್ವಾಮೀಜಿ, ವಿಜಯಪುರ ಕೃಪಾಮಯಿ ಶಾರದಾಶ್ರಮದ ಪ.ಪೂ. ಮಾತೋಶ್ರೀ ಕೈವಲ್ಯಮಯಿ ಮಾತಾಜಿ, ಸುಕ್ಷೇತ್ರ ಕತಕನಹಳ್ಳಿಯ ಸದಾಶಿವ ಮಠದ ಪ.ಪೂ. ಶಿವಯ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ, ವಿಜಯಪುರ ನಗರ ಮತಕ್ಷೇತ್ರದ ಶಾಸಕ ಬಸನಗೌಡ ರಾ. ಪಾಟೀಲ (ಯತ್ನಾಳ), ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ,(ಸಾಸನೂರ) ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಮಡಿವಾಳಪ್ಪ ಸಿ. ಕರಡಿ, ಉಪ ಮಹಾಪೌರರಾದ ಸುಮಿತ್ರ ರಾಜು ಜಾಧವ, ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಉಪ ಪೊಲೀಸ್ ವರೀಷ್ಠಾಧಿಕಾರಿ ಬಸವರಾಜ ಯಲಿಗಾರ, ಗೋಳಗುಮ್ಮಟ ವೃತ್ತ ನೀರಿಕ್ಷಕರಾದ ಸಿ.ಪಿ.ಐ ಸಂಜು ಬಳಿಗಾರ, ಕೆ.ಎಸ್. ಆರ್‌ಟಿಸಿ ಜಿಲ್ಲಾಧಿಕಾರಿಗಳಾದ ನಾರಾಯಣಪ್ಪ ಕುರಬರ, ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕರಾದ ಅರವಿಂದ ಭೋ. ಹೂಗಾರ ಮುಂತಾದ ಗಣ್ಯ ಮಾನ್ಯರು ಉಪಸ್ಥಿತಿರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬರ್ ಟ್ರಸ್ಟನ ಆಡಳಿತಾಧಿಕಾರಿಗಳಾದ ಆರತಿ ಪಾಟೀಲ ಅವರು ಮಾತನಾಡಿ, ಪರಿಸರ ರಕ್ಷಣೆ, ರಕ್ತದಾನ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತ ಬಂದಿದ್ದು, 40 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಟ್ರಸ್ಟ್ ನೇತೃತ್ವದಲ್ಲಿ ನೆಡಲಾಗಿದೆ, ಕೊರೋನಾ ಹಿನ್ನೆಲೆಯಲ್ಲಿ ಸಸಿ ನೆಡುವ ಕಾರ್ಯಕ್ಕೆ ಹಿನ್ನೆಡೆಯಾಗಿತ್ತು, ಈಗ ಪುನಃ ಗಿಡ ನೆಡುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಪ್ರತಿ ವರ್ಷ ಅರಣ್ಯ ಇಲಾಖೆ 10 ಸಾವಿರ ಸಸಿಗಳನ್ನು ನೆಡಲು ಹಾಗೂ ಪೋಷಿಸಲು ಟ್ರಸ್ಟ್‌ಗೆ ನೀಡಲಿದೆ ಎಂದರು.
ರಕ್ತದಾನದಲ್ಲಿಯೂ ಮಹೋನ್ನತ ಕಾರ್ಯ ಮಾಡಲಾಗಿದ್ದು, ರಕ್ತದಾನ ಶಿಬಿರಕ್ಕೂ ಆದ್ಯತೆ ನೀಡಲಾಗುತ್ತಿದ್ದು 800 ಯೂನಿಟ್ ರಕ್ತದಾನಿಗಳಿಂದ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಗಣ್ಯ ಉದ್ದಿಮೆದಾರರು ಸಮಾಜ ಸೇವಕರಾದ ಅಮರ್ ಕುಶರಾಜ್ ಪರಣ್ಣವರ್ ಮಾತನಾಡಿ, ಬಸಂತಕುಮಾರ ಪಾಟೀಲ ಅವರು ಖ್ಯಾತ ಚಲನಚಿತ್ರ ನಟರು, ನಿರ್ಮಾಪಕರು ಹಂಚಿಕೆದಾರರು, ಮಾಜಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಚಲನಚಿತ್ರ ಕ್ಷೇತ್ರದಲ್ಲಿ 22 ಅಂತರಾಷ್ಟ್ರೀಯ, 12 ರಾಷ್ಟ್ರೀಯ, 8 ಪನೋರಮಾ, ಹಾಗೂ 14 ರಾಜ್ಯ ಪ್ರಶಸ್ತಿ ಪಡೆಯುವ ಮೂಲಕ ವಿಶಿಷ್ಠ ಸಾಧನೆ ಮಾಡಿ ಕನ್ನಡ ನಾಡಿನ ಚಲನಚಿತ್ರ ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನು ಮೂಡಿಸಿದ್ದಾರೆ. ಹಾಗೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿದ್ದು, ರಾಜ್ಯ ಸರ್ಕಾರದ ಪರಿಸರ ಪ್ರಶಸ್ತಿ, ಆಯಭಟ ಪ್ರಶಸ್ತಿ ಹಾಗೂ ವಿಶ್ವೇಶ್ವರಯ್ಯ ಪ್ರಶಸ್ತಿ ಡಾ. ರಾಜಕುಮಾರ ಪ್ರಶಸ್ತಿ ಇವರ ಮುಡಿಗೇರಿರುವುದು ಹೆಮ್ಮೆಯ ವಿಷಯ ಎಂದರು.
ನ್ಯಾಯವಾದಿ ದಾನೇಶ ಅವಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದಲ್ಲಿಯ 2ನೆಯ ಅತಿ ಎತ್ತರದ 85 ಶಿವನ ಮೂರ್ತಿಯನ್ನು ಸ್ಥಾಪಿಸಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರಾದ ವಿಜಯಪುರ ನಗರವನ್ನು ಪ್ರವಾಸೋಧ್ಯಮದ ಪಟ್ಟಿಗೆ ಸೇರಿಸುವಲ್ಲಿ ಬಸಂತಕುಮಾರ ಪಾಟೀಲ ಅವರ ಹೆಸರು ಅಗ್ರಮಾನ್ಯವಾಗಿದೆ. ಅಲ್ಲದೇ ‘ಜನನಿ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು’ ಎನ್ನುವಂತೆ ಬೆಂಗಳೂರಿನಲ್ಲಿದ್ದರು ತವರು ಜಿಲ್ಲೆಯ ಪ್ರೀತಿ ವಾತ್ಸಲ್ಯ ಕಡಿಮೆಯಾಗಿಲ್ಲ ಇಲ್ಲಿಯ ಜನತೆಗಾಗಿ ಒಳಿತನ್ನು ಮಾಡಲು ಅವರ ಹೃದಯ ಸದಾ ತುಡಿಯುತ್ತದೆ. ಅಲ್ಲದೇ ತಮ್ಮ ಹೆತ್ತ ತಾಯಿಯನ್ನು ‘ಸುವರ್ಣ ತುಲಾಭಾರ’ವನ್ನು ಮಾಡಿ ‘ಕಲಿಯುಗದ ಶ್ರವಣಕುಮಾರ’ ಎಂದು ಅಭಿದಾನವನ್ನು ಜನರಿಂದ ಹೊಂದಿದ್ದಾರೆ. ಅವರು ಶಿವಗಿರಿಯ ಬರುವ ಪ್ರವಾಸಿಗರಿಗೆ ದಾಸೋಹ ಸೇವೆಯನ್ನು ಏರಿ್ಡಸಿರುವುದು ಶ್ಲ್ಯಾಘನಿಯವಾಗಿದೆ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಎಮ್.ಆರ್. ಪಾಟೀಲ, ಜಗಜ್ಯೋತಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಲ್.ಬಿ. ಪಾಟೀಲ, ಗೀರೀಶ ಪಾಟೀಲ, ಶ್ರೀನಿವಾಸ ಕುಲಕರ್ಣಿ, ಈರಣ್ಣ ಜಾಯವಾಡಗಿ, ಕುಮಾರ ಪರಣ್ಣವರ, ರುದ್ರಯ್ಯ ಮಠ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 