ಕನ್ನಡ ಭಾಷೆಗೆ ಮೊದಲ ಆದ್ಯತೆ: ಸುನೀಲ್ ಹನುಮಣ್ಣನವರ್

ಕನ್ನಡ ಭಾಷೆಗೆ ಮೊದಲ ಆದ್ಯತೆ: ಸುನೀಲ್ ಹನುಮಣ್ಣನವರ್  First preference for Kannada language: Sunil Hanumannavar

ಬೆಳಗಾವಿ 04: ಕನ್ನಡ 2000 ವರ್ಷಗಳ ಇತಿಹಾಸ ಹೊಂದಿರುವ ಭಾಷೆ , ಪ್ರತಿಯೊಬ್ಬರು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವುದರ ಜತೆಗೆ ಕನ್ನಡ ನಾಡು, ನುಡಿ ಜಲ ?ಕ್ಷಣೆಗೆ ಮುಂದಾಗಬೇಕು, ನಮ್ಮ ತಾಯಿ ನಾಡಿನ ಭಾಷೆಯನ್ನು ಅತೀ ಹೆಚ್ಚು ಬಳಕೆ ಮಾಡೋಣ ಎಂದು ವಾಕರಸಾ, ಸಂಸ್ಥೆಯ ಉಪಾಧ್ಯಕ್ಷರಾದ ಸುನೀಲ್ ಜೆ. ಹನುಮಣ್ಣನವರ್ ಹೇಳಿದರು. 

ನಗರದ ಸಾರಿಗೆ ಸೆಂಟ್ರಲ್ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡಾಂಬೆಗೆ ಪೂಜೆ ಸಲ್ಲಿಸಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾರಿಗೆ ಸಂಸ್ಥೆಯ ನೌಕರರ ಮಕ್ಕಳಿಗೆ ನಗದು ಪ್ರತಿಭಾ ಪ್ರಶಸ್ತಿ ಪುರಸ್ಕಾರ ಪತ್ರ ವಿತರಿಸಿ ಅವರು ಮಾತನಾಡಿದರು.  

ನಮ್ಮ ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕೃತಿಯು ಮನುಷ್ಯನ ಜೀವನದಲ್ಲಿ ಒಂದು ಹೊಸ ಹುರುಪು ತುಂಬುವಂತಹದ್ದು, ಯುವ ಸಮುದಾಯ ನಮ್ಮ ನಾಡಿನ ಸಂಗೀತ, ಸಾಹಿತ್ಯ, ಜಾನಪದ, ನೃತ್ಯ, ಕಲೆಯನ್ನು ಉಳಿಸಿ ಬೆಳೆಸಬೇಕು, ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಮಾತೃಭಾಷೆ ಕನ್ನಡದ ಮೇಲೆ ಅಭಿಮಾನ ಮೆರೆಯುವ ಮೂಲಕ ಎಲ್ಲಭಾಷೆಗಳನ್ನು ಕಲಿತು ಪ್ರಗತಿ ಸಾಧಿಸಬೇಕು. ಕಾರಣ ಕನ್ನಡದಲ್ಲೇ ಶಿಕ್ಷಣ ಪಡೆದ ಅನೇಕರು ದೊಡ್ಡ ಸಾಧನೆಗಳನ್ನು ಮಾಡಿರುವುದು ಮರೆಯಬಾರದು. ಹೀಗಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. 

ಬೆಳಗಾವಿ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆಂಪಣ್ಣ ಎಲ್ . ಗುಡೆನ್ನವರ ಅವರು ಮಾತನಾಡಿ, ದೇಶದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದ್ದು, ವರ್ಷವೀಡೀ ನಮ್ಮ ಭಾಷೆ ಬಗ್ಗೆ ಗೌರವ ಇರಬೇಕು ಜೊತೆಗೆ ಹಬ್ಬದ ವಾತಾವರಣ ನಿರ್ಮಿಸಬೇಕು. ಕನ್ನಡ ಉಳಿಸಿ-ಬೆಳೆಸುವ ಕಾರ್ಯದಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.  

ಸಾರಿಗೆ ಇಲಾಖೆಯ ಅತೀ ಕನ್ನಡ ಮಾತನಾಡುವ ಸಿಬ್ಬಂದಿ ಹಾಗೂ ಅಧಿಕಾರಿಗಳೂ ಗೌರವ ನೀಡುವ ಕಾರ್ಯವನ್ನು ವರ್ಷವೂ ಮಾಡಲಾಗುತ್ತದೆ. ತಾಯಿ ನಾಡಿನ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಬಾರಿ ಬೆಳಗಾವಿ ಕರ್ನಾಟಕ ರಾಜ್ಯೋತ್ಸವದಲ್ಲಿ ಸಾರಿಗೆ ಇಲಾಖೆಯ ರೂಪಕ ವಾಹನಕ್ಕೆ ಜಿಲ್ಲೆಯಲ್ಲಿ ಎರಡನೆಯ ಸ್ಥಾನ ದೊರತ್ತಿರುವುದು ಸಂತಸದ ವಿಷಯ ಎಂದರು. 

ಈ ಸಂದರ್ಭದಲ್ಲಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾದ ಸುರೇಶ ಯರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಲಮಾಣಿ, ಗೀರೀಶ ಕಾಂಬಳೆ , ಸುರೇಶ ಭಜಂತ್ರಿ, ಉಮೇಶ ಶಶಿಕಾಂತ ಬಡಿಗೇರ, ಮಲ್ಲಿಕಾರ್ಜುನ ಅಂಕಲಿ, ನಿತಿನ್ ಗಡದೆ, ದೇವಕ್ಕ ನಾಯಕ, ದಶರಥ ಕೆಳಗೇರಿ, ಸುನೀತಾ ಜೋಶಿ, ನಾಗಮಣಿ ಭೋವಿ, ನಾರಾಯಣ ತಿಮ್ಮಾರಡ್ಡಿ, ಸಂಜಯ ಮಾಸುವಾಳಿಅಜಿತ್ ಉಬರಟ್ಟಿ ಪ್ರಾರ್ಥನಾ ಗೀತೆ ಹಾಡಿದರು. ವಾಕರಸಾ ಸಂಸ್ಥೆ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಸರ್ವೇಶ ಆರ್‌. ಸ್ವಾಗತಿಸಿದರು. ಹಾಗೂ ಇತರರು ಇದ್ದರು.