ಜೋರ್ಡಾನ್‌ನಲ್ಲಿ ಕರೋನ ಸೋಂಕಿಗೆ ಮೊದಲ ರೋಗಿ ಬಲಿ

ಅಮ್ಮನ್, ಮಾರ್ಚ್ 28, ಜೋರ್ಡಾನ್‌ನಲ್ಲಿ  ಕರೋನ ಸೋಂಕಿಗೆ ಮೊದಲ  ರೋಗಿ ಯೊಬ್ಬ  ಸಾವನ್ನಪ್ಪಿದ್ದಾನೆ ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಮಾಧ್ಯಮ  ವರದಿ ಮಾಡಿವೆ.ಪೆಟ್ರಾ ಸುದ್ದಿ ಸಂಸ್ಥೆಯ ಪ್ರಕಾರ, ಮೃತಪಟ್ಟವರನ್ನು   83 ವರ್ಷದ ಮಹಿಳೆ,ಎಂದು ಗುರಿತಿಸಲಾಗಿದೆ.  ಕರೋನ ಸೋಂಕಿಗೆ  ಮೊದಲು ಅವರಿಗೆ ಇನ್ನಿತರೆ   ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು ಎನ್ನಲಾಗಿದೆ.  ಇದೇ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19  ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಇಲ್ಲಿಯವರೆಗೆ, ವಿಶ್ವದಾದ್ಯಂತ 590,000 ಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ, ಸುಮಾರು 27,000 ಸಾವುನೋವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಅದೇ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ  ಜೋರ್ಡಾನ್‌ನಲ್ಲಿ ಸುಮಾರು 235 ಕರೋನವೈರಸ್ ಪ್ರಕರಣಗಳನ್ನು ವರದಿಯಾಗಿದ್ದು, ಅವರ ಪೈಕಿ 18 ಜನರು ಈಗಾಗಲೇ ಚೇತರಿಸಿಕೊಂಡಿದ್ದಾರೆ.