ಮೊದಲು ಅಧಿಕಾರ ಪಡೆಯಿರಿ ನಂತರ ಸಮಾಜಕ್ಕಾಗಿ ದುಡಿಯಿರಿ: ಸುಜಾತಾ ದೊಡ್ಡಮನಿ
First get power and then work for society: Sujatha Doddamani
ಶಿರಹಟ್ಟಿ 25: ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಇವತ್ತು ನಾವು (ಮಹಿಳೆಯರು) ವೇದಿಕೆ ಮೇಲೆ ಬಂದು ಮಾತನಾಡುತ್ತಿರುವುದು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಕೊಡುಗೆ ನೀಡಿದ ಜಗಜೀವನರಾಮ್ ಅವರು ಮಿನುಗುತಾರೆ ಗಳಿದ್ದಂತೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ದಮನಿ ಅಭಿಪ್ರಾಯಪಟ್ಟರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಶಿರಹಟ್ಟಿಯ ವತಿಯಿಂದ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅಸ್ಪೃಸ್ಯರು, ಶೋಷಿತರು, ದಮನಿತರಿಗೆ ನಡೆಯಲು, ನುಡಿಯಲು, ತೊಡಲು, ಸ್ವಾಭಿಮಾನದ ಬದುಕು ನಡೆಸಲು ಅಂಬೇಡ್ಕರ್ ತಮ್ಮ ಬದುಕನ್ನೇ ಸಮರ್ಿಸಿದರು.
ಸಂವಿಧಾನವನ್ನು ರಚಿಸುವ ಮೂಲಕ ಸರ್ವರಿಗೂ ಸ್ವಾತಂತ್ರ್ಯ, ಸಮಾನತೆಯ ಬದುಕಿನ ಅವಕಾಶ ಕಲ್ಪಿಸಿಕೊಟ್ಟರು.ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಬಲದಿಂದಲೇ ದೇಶದ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ. ದೇಶದ ಪ್ರಜಾವ್ಯವಸ್ಥೆಗೆ ಭದ್ರ ಬುನಾದಿಯನ್ನು ಕಲ್ಪಿಸುವಂತಹ ಸಂವಿಧಾನವನ್ನು ನೀಡಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಅವರ ವಿಚಾರಧಾರೆಯನ್ನು ಅವಲೋಕನ ಮಾಡಲು ನಮಗೆ ಹೆಮ್ಮೆ ಎನಿಸುತ್ತಿದೆ. ಈ ಎರಡೂ ಮಹಾನ್ ಸಾಧಕರ ವಿಚಾರಗಳ ಚಿಂತನೆ ಕೇವಲ ಅವರ ಜಯಂತಿಗೆ ಮಾತ್ರ ಸೀಮಿತಗೊಳಿಸದೇ ನಿರಂತರವಾಗಿ ನಡೆಯಬೇಕು.
ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುವುದರ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸೋಣ. ಈ ಮಹನೀಯರ ತತ್ವಾದರ್ಶಗಳು ಸರ್ವಕಾಲಿಕವಾಗಿದ್ದು, ಅವುಗಳನ್ನು ಅಳವಡಿಸಿಕೊಂಡು ಸಮಾನತೆಯಿಂದ ಬಾಳೋಣ ಎಂದು ಹೇಳಿದರು.ಮುಖಂಡ ಗುರುನಾಥ ದಾನಪ್ಪನವರ ಹಾಗೂ ಎಸ್. ಎನ್..ಬಳ್ಳಾರಿ ಮಾತನಾಡಿ, ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿದ್ದ ದೇಶದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವದ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲರ ಪಾಲಿನ ಧರ್ಮ ಗ್ರಂಥವಿದ್ದಂತೆ.
ಅಲ್ಲದೇ ಮೀಸಲಾತಿಗೆ ಒತ್ತು ನೀಡಿ ಅಸ್ಪೃಶ್ಯತೆ ನಿವಾರಣೆಗೆ ಪಣತೊಟ್ಟು ಸಂವಿಧಾನವನ್ನು ರಚನೆ ಮಾಡಿ ಸಮಾನತೆಗೆ ನಾಂದಿ ಹಾಡಿದರು. ದೇಶದಲ್ಲಿ ಅಹಾರದ ಕೊರತೆ ಎದುರಾದಾಗ ಹಸಿರು ಕ್ರಾಂತಿಯ ಮೂಲಕ ದೇಶದ ಜನರ ಹಸಿವನ್ನು ನೀಗಿಸಿದ ಮಹಾನ್ ವ್ಯಕ್ತಿ ಬಾಬೂಜಿ. ಕಾರ್ಮಿಕ ಹಕ್ಕುಗಳು, ಶೋಷಿತ, ದಮನಿತರ ಧ್ವನಿಯಾಗಿದ್ದ ಇಬ್ಬರೂ ಮಹನೀಯರ ತತ್ವಾದರ್ಶಗಳನ್ನು ಪಾಲಿಸೋಣ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿ ಗುಡಿಮನಿ ವಹಿಸಿಕೊಂಡಿದ್ದರು. ಪಪಂನ ಮಾಜಿ ಅಧ್ಯಕ್ಷೆ ದೇವಕ್ಕ ಗುಡಿಮನಿ, ಪಪಂನ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ,ಮುಖ್ಯಾಧಿಕಾರಿ ಸವಿತಾ ತಾಂಬ್ರೆ, ಸಿಪಿಐ ಬಿ.ವಿ.ನೇಮಗೌಡ, ಪಿಎಸ್‌ಐ ಚೆನ್ನಯ್ಯ ದೇವೂರ, ಈರ್ಪ ರಿತ್ತಿ, ಮುಖಂಡ ಪರಮೇಶ ಪರಬ, ಫಕ್ಕಿರೇಶ ಮ್ಯಾಟಣ್ಣವರ,ಉಡಚಪ್ಪ ಹಳ್ಳಿಕೇರಿ, ನಾಗರಾಜ ಪೋತರಾಜ, ಹೊನ್ನಪ್ಪ ಶಿರಹಟ್ಟಿ,ಚಂದ್ರು ಹರಿಜನ, ಫಕ್ಕೀರೇಶ ನಡುವಿನಕೇರಿ ಅಜ್ಜು ಪಾಟೀಲ, ಬಸವರಾಜ ತುಳಿ, ಪ್ರಕಾಶ ಬಡೆಣ್ಣವರ, ಮುತ್ತು ಭಾವಿಮನಿ, ಶಶಿ ಪೂಜಾರ, ರಾಮು ಅಡಗಿಮನಿ, ದುರಗಪ್ಪ ಹರಿಜನ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಪೋಟೋಶಿರಹಟ್ಟಿಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಉದ್ಘಾಟಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 