ಧಾರವಾಡ ಡಿಸೆಂಬರ.19: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕ ಧಾರವಾಡದ ವತಿಯಿಂದ ಜನವರಿ 6 ರಿಂದ ಜನವರಿ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್‌ದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ಪ್ರಥಮ ಕಿತ್ತೂರು ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಸಮಾವೇಶ-ಜಾಂಬೋರೇಟ್‌ದ ನಿಮಿತ್ತ ರಾಷ್ಟ್ರಭಕ್ತಿ, ದೇಶದ ಶಕ್ತಿ ಎಂಬ ಘೋಷವಾಕ್ಯವನ್ನೊಳಗೊಂಡ ಲೋಗೋವನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಸಂಜೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಶ್ರೀಶೈಲ ಕರಿಕಟ್ಟಿ, ಜಿಲ್ಲಾ ಉಪಾಧ್ಯಕ್ಷ ವಿ.ವಿ.ಕಟ್ಟಿ, ಕೋಶಾಧಿಕಾರಿ ಬಸವರಾಜ ಕಡಕೋಳ, ಆಯುಕ್ತ ಎಸ್.ಐ.ನೇಕಾರ, ಸಹಾಯಕ ಆಯುಕ್ತ ಎಂ.ವಿ.ಅಡವೇರ ಹಾಗೂ ಇತರರು ಇದ್ದರು.