ಇಂದು ಅನ್ನಪೂರ್ಣ ಮಳಗಲಿ ಪ್ರಥಮ ಪುಣ್ಯ ಸ್ಮರಣೆ: ಕೃತಿಗಳ ಬಿಡುಗಡೆ
First Death Anniversary of Annapurna Malagali Today: Book Launch
ಬೆಳಗಾವಿ 18: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕನ್ನಡ ಭವನ ನೆಹರು ನಗರ ಬೆಳಗಾವಿ ಸಹಯೋಗದೊಂದಿಗೆ ಶರಣೆ ಅನ್ನಪೂರ್ಣ ಮಳಗಲಿ ಅವರ ಪ್ರಥಮ ಪುಣ್ಯ ಸ್ಮರಣೆಯ ನಿಮಿತ್ತ ಬೆಳಗಾವಿ ಕನ್ನಡ ಭವನದಲ್ಲಿ ದಿ. 19ರಂದು ಮುಂ. 10ಘಂಟೆಗೆ ಕೃತಿಗಳ ಲೋಕಾರೆ್ಣ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೈಲಹೊಂಗಲ ಶರಣ ಚಿಂತಕಿ ಪ್ರೇಮಕ್ಕ ಅಂಗಡಿ, ದಿವ್ಯ ಸಾನಿಧ್ಯ ಗದಗ ಡಂಬಳ ಡಾ. ತೋಂಟದ ಸಿದ್ಧರಾಮ ಶ್ರೀಗಳು, ಸಾನಿಧ್ಯ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಶ್ರೀಗಳು, ಅಧ್ಯಕ್ಷತೆ ಹಿರಿಯ ಪತ್ರಕರ್ತ ಸಾಹಿತಿ ಎಲ್.ಎಸ್. ಶಾಸ್ತ್ರಿ ವಹಿಸುವರು. ಉದ್ಘಾಟನೆ ಬೆಂಗಳೂರು ಅ.ಭಾ. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶಖರ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಪ್ರೋ. ಸಿದ್ದು ಯಾಪಲಪರ್ವಿ ಆಗಮಿಸುವರು.ಸುಪ್ರಸಿದ್ಧ ವೈದ್ಯ ಡಾ. ಎಮ್.ಎಲ್.ತುಕ್ಕಾರ, ಸಾಂಸ್ಕೃತಿಕ ಚಿಂತಕ ಪ್ರಾ. ಬಿ.ಎಸ್. ಗವಿಮಠ, ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾಧ್ಯಕ್ಷ, ನ್ಯಾ. ಬಸವರಾಜ ರೊಟ್ಟಿ, ಶಿವಾ ಆಫ್‌ಸೆಟ್ ಪ್ರಿಂಟರ್ಸ ಮಾಲಿಕ ಡಾ. ಶಿವು, ನಂದಗಾವಿ ಉಪಸ್ಥಿತರಿರುವರು. ಜಾನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಕೃತಿಗಳ ಲೋಕಾರೆ್ಣ ಮಾಡುವರು.
ಡಾ. ನಿರ್ಮಲಾ ಬಟ್ಟಲ ಅವರಮಾತು ಮೌನ(ಕವನ ಸಂಕಲನ), ಅಪವಾದದ ಸುಳಿಯಲ್ಲಿ ಆದರ್ಶದ ಒರತೆ(ಕಾದಂಬರಿ), ಜೆಎನ್‌ಎಮ್‌ಸಿ ಸಹ ಪ್ರಾಧ್ಯಾಪಕ ಡಾ. ಅವಿನಾಶ ಕವಿ ಅವರ ಅಂತರಂಗದ ಬೆಳಕು, ಲಿಂಗಾಯತ ಧರ್ಮದ ತ್ರಿವಿಧ ತತ್ವಗಳು, ಡಾ. ಎಚ್.ಆಯ್. ತಿಮ್ಮಾಪುರ ಅವರ ಕಾಲಾತೀತ ಕಲ್ಯಾಣ(ಯಳವಿಯ ಕಾಳಗ), ಯ.ರು.ಪಾಟೀಲ ಅವರ ಅರಬರ ನಾಡಿನ ಅದ್ಭುತಗಳು, ಡಾ. ಪಿ.ಜಿ.ಕೆಂಪಣ್ಣವರ ಅವರ ಲಂಡನ್‌ನಿಂದ ರೋಮ್‌ವರೆಗೆ ಸ್ಮರಣೀಯ ಪಯಣ ಬಿಡುಗಡೆಯಾಗುವ ಕೃತಿಗಳಾಗಿವೆ.
ಮಧ್ಯಾಹ್ನ ರಿಂದ 2.30ರವರೆಗೆ ಪ್ರಸಾದ ಸೇವೆ. 3ಘಂಟೆಗೆ ಅಶೋಕ ಮಳಗಲಿ ಅವರು ರಚಿಸಿದ ಹೊನ್ನು ಮಣ್ಣಾದಾಗ ವಿಶೇಷ ನಾಟಕ ಪ್ರದರ್ಶನ ನಡೆಯಲಿದ್ದು, ಕರ್ನಾಟಕ ರಾಜ್ಯ ನಾಟಕ ಅಕ್ಯಾಡೆಮಿ ನಿರ್ದೇಶಕ ಬಾಬಾಸಾಹೇಬ ಕಾಂಬಳೆ ನಿರ್ದೇಶಿಸುವರು, ಧಾರವಾಡ ರಂಗಾಯಣ ಸಂಚಾಲಕ ಝಾಕೀರ ನದಾಫ್ ಅಧ್ಯಕ್ಷತೆ ವಹಿಸುವರು.
ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಸಂಘದ ಪ್ರಶಿಕ್ಷಣಾರ್ಥಿಗಳಿಂದ ರಂಗ ಪ್ರಸ್ತುತಿ ಪಡಿಸಲಿದ್ದಾರೆ. ಬನಹಟ್ಟಿ ನಿ. ಪ್ರಾಚಾರ್ಯ ಬಿ.ಆರ್. ಪೊಲೀಸ್ ಪಾಟೀಲ ಉದ್ಘಾಟಿಸುವರು. ಸಾಹಿತಿ ರಂಗಕರ್ಮಿ ಶೀರೀಷ ಜೋಶಿ, ಚಂದ್ರಶೇಖರ ನವಲಗುಂದ, ಆನಂದ ಪುರಾಣಿಕ, ಮುರಿಗೆಪ್ಪ ಬಾಳಿ, ಚಂದ್ರಾ್ಪ ಬೂದಿಹಾಳ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ 