ದೆಹಲಿಯ ಅನಾಜ್ ಮಂದಿಯಲ್ಲಿ ಬೆಂಕಿ : 30 ಕ್ಕೂ ಹೆಚ್ಚು ಸಾವು

ನವದೆಹಲಿ, ಡಿ 8  :       ದೆಹಲಿಯ ರಾಣಿ ಝಾನ್ಸಿ ರಸ್ತೆ ಬಳಿಯ ಅನಾಜ್ ಮಂದಿಯಲ್ಲಿನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದ್ದು 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.  ಘಟನೆಯ ಬಗ್ಗೆ ಬೆಳಗ್ಗೆ 5.20 ರ ಸುಮಾರಿ ಮಾಹಿತಿ ದೊರೆತಿದ್ದು ತಕ್ಷಣವೇ 25 ಅಗ್ನಿ ಶಾಮಕ ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಯಿತು ಎಂದು ಅಗ್ನಿ ಶಾಮಕ ಮೂಲ ತಿಳಿಸಿದೆ. ಅನೇಕರು ಉಸಿರುಗಟ್ಟಿ ಅಸುನೀಗಿದ್ದು ಹಲವರು  ಸ್ಥಳಾಂತರಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಲೋಕ್ ನಾಯಕ್ ಜೈಪ್ರಕಾಶ್ ಆಸ್ಪತ್ರೆ ಮತ್ತು ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.  ಆಸ್ಪತ್ರೆಗೆ ಕರೆತರಲಾಗಿದ್ದ 14 ಜನರು ಮೃತಪಟ್ಟಿದ್ದು ಅನೇಕ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೆಡಿಕಲ್ ಸೂಪರಿಂಟೆಂಡೆಂಟ್ ಕಿಶೋರ್ ಕುಮಾರ್ ತಿಳಿಸಿದ್ದಾರೆ.