ವಾಷಿಂಗ್ಟನ್, ಆಗಸ್ಟ್ 12 ಅಮೆರಿಕ ರಾಜ್ಯವಾದ ಪೆನ್ಸಿಲ್ವೇನಿಯಾದ ಆರೈಕೆ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಠ ಐದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪೆನ್ಸಿಲ್ವೇನಿಯಾದ ಸರೋವರದ ಪಟ್ಟಣವಾದ ಎರಿಯಲ್ಲಿನ ಮಕ್ಕಳ ಆರೈಕೆ ಕೇಂದ್ರದಲ್ಲಿ ಭಾನುವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ.
ಅನೇಕ ಜನರಿದ್ದ ಮೂರು ಅಂತಸ್ತಿನ ಮನೆಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದಶರ್ಿಯೊಬ್ಬರು ತಿಳಿಸಿರುವುದಾಗಿ ಎರಿ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಗೈ ಸ್ಯಾಂಟೋನ್ ಹೇಳಿದ್ದಾರೆ.
ನತದೃಷ್ಟ ಮಕ್ಕಳು ಎಂಟು ತಿಂಗಳಿಂದ ಏಳು ವರ್ಷದವರಾಗಿದ್ದಾರೆ ಎಂದು ಸ್ಯಾಂಟೋನ್ ಹೇಳಿದ್ದಾರೆ.
ಎಳೆ ಮಕ್ಕಳು ಸೇರಿದಂತೆ ಏಳು ಮಂದಿಯನ್ನು ರಕ್ಷಿಸಲಾಗಿದೆ. ಆರೈಕೆ ಕೇಂದ್ರದ ಮಾಲೀಕ, ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೊದಲ ಮಹಡಿಯಲ್ಲಿನ ಕೋಣೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕದಳದ ಇಬ್ಬರು ಇನ್ಸ್ಪೆಕ್ಟರ್ಗಳು ಮತ್ತು ಮೂವರು ಎರಿ ಪೊಲೀಸ್ ಪತ್ತೆದಾರರು ಬೆಂಕಿಯ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಮನೆಯಲ್ಲಿ ಕೇವಲ ಒಂದು ಹೊಗೆ ಶೋಧ ಸಾಧನ ಇರುವುದು ಗೊತ್ತಾಗಿದೆ. ಈ ಕಟ್ಟಡದಲ್ಲಿ ಅಗತ್ಯ ಹೊಗೆ ಶೋಧಕಗಳು ಇದ್ದಿದ್ದರೆ, ಸಾವು ನೋವು ಸಂಭವಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆರೈಕೆ ಕೇಂದ್ರಕ್ಕೆ ಸ್ಥಳೀಯ ಅಧಿಕಾರಿಗಳು ಮಾರ್ಚ್ 2020 ರವರೆಗೆ ಪರವಾನಿಗೆ ನೀಡಿದ್ದರು ಎಂದು 'ದಿ ಎರಿ ಟೈಮ್ಸ್-ನ್ಯೂಸ್' ವರದಿ ಮಾಡಿದೆ.
ಎರಿ ಪಟ್ಟಣ ಸುಮಾರು 1,00,000 ಜನಸಂಖ್ಯೆ ಹೊಂದಿದ್ದು ಮತ್ತು ಇದು ಪೆನ್ಸಿಲ್ವೇನಿಯಾ ರಾಜ್ಯದ ನಾಲ್ಕನೇ ದೊಡ್ಡ ನಗರವಾಗಿದೆ.