ರಷ್ಯಾದಲ್ಲಿ ಅಗ್ನಿ ದುರಂತ : 7 ಜನರ ದಾರುಣ ಸಾವು

ಮಾಸ್ಕೋ, ಮಾರ್ಚ್ 27 ರಷ್ಯಾದ ನಗರ ಯೆಕಟೆರಿನ್ಬರ್ಗ್ನಲ್ಲಿ ಎರಡು ಅಂತಸ್ತಿನ ವಸತಿ ಸಮುಚ್ಚಯದಲ್ಲಿ ಲಿ  ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 7  ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ತುರ್ತು ಸಚಿವಾಲಯ ಶುಕ್ರವಾರ ತಿಳಿಸಿದೆ.ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು  ಏಳನೇ ವ್ಯಕ್ತಿಯ  ಶವ ಪತ್ತೆಯಾಗಿದೆ  ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಈ ಘಟನೆಯಲ್ಲಿ  ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.